ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ LIVE: ರಾಜಸ್ಥಾನ, ತೆಲಂಗಾಣದಲ್ಲಿ ಘಟಾನುಘಟಿಗಳಿಂದ ಮತದಾನ

|
Google Oneindia Kannada News

ಜೈಪುರ-ಹೈದರಾಬಾದ್, ಡಿಸೆಂಬರ್ 07: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಹಳ ಕುತೂಹಲ ಕೆರಳಿಸಿರುವ ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶುಕ್ರವಾರ ಮತದಾನ ನಡೆಯಿತು. ತೆಲಂಗಾಣದಲ್ಲಿ ಶೇ 67 ರಷ್ಟು ಹಾಗೂ ರಾಜಸ್ಥಾನದಲ್ಲಿ ಶೇ72ರಷ್ಟು ಮತದಾನ ದಾಖಲಾಗಿದೆ.

ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಬಿರುಸಿನ ಪೈಪೋಟಿ ಇದೆ.

ರಾಜಸ್ಥಾನ ಚುನಾವಣೆ, ಅಂಕಿ-ಸಂಖ್ಯೆ: ಚಿತ್ರ ಮಾಹಿತಿರಾಜಸ್ಥಾನ ಚುನಾವಣೆ, ಅಂಕಿ-ಸಂಖ್ಯೆ: ಚಿತ್ರ ಮಾಹಿತಿ

ತೆಲಂಗಾಣದಲ್ಲಿ ಒಟ್ಟು 119 ವಿಧಾನಸಭಾ ಕ್ಷೇತ್ರಗಳಿದ್ದು 2013 ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದ ಹೊಸ ರಾಜ್ಯ ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಪಕ್ಷ ಅಧಿಕಾರದಲ್ಲಿದೆ.

Rajasthan and Telangana assemly elections 2018: Live updates

ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಿದ್ದು, ಇದನ್ನು 2019 ರ ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಹುಮತ: ಎನ್ ಡಿಟಿವಿ ವಿಶ್ಲೇಷಣೆರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಹುಮತ: ಎನ್ ಡಿಟಿವಿ ವಿಶ್ಲೇಷಣೆ

ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
7:48 PM, 7 Dec

ತೆಲಂಗಾಣದಲ್ಲಿ ಶೇ 67 ರಷ್ಟು ಹಾಗೂ ರಾಜಸ್ಥಾನದಲ್ಲಿ ಶೇ72ರಷ್ಟು ಮತದಾನ ದಾಖಲಾಗಿದೆ.
3:24 PM, 7 Dec

ರಾಜಸ್ಥಾನ: ಸಿಕಾರ್ ನ ಫತೇಪುರದ ಸುಭಾಶ್ ಶಾಲೆಯ ಮತಗಟ್ಟೆಯಲ್ಲಿ ಎರಡು ತಂಡಗಳ ನಡುವೆ ಉಂಟಾದ ಮಾತಿನ ಚಕಮಕಿ ವಿಪರೀತಕ್ಕೆ ತೆರಳಿದ ಪರಿಣಾಮ ಕೆಲ ಕಾಲ ಮತದಾನ ಸ್ಥಗಿತಗೊಳಿಸಲಾಯಿತು.
2:36 PM, 7 Dec

"ನಾನು ಆನ್ ಲೈನ್ ನಲ್ಲಿ ಮೂರು ಬಾರಿ ಪರೀಕ್ಷಿಸಿದ್ದೇನೆ. ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇದೆಯೋ, ಇಲ್ಲವೋ ಅಂತ. ಆಗ ನಮ್ಮ ಹೆಸರಿತ್ತು. ಆದರೆ ಮತಚಲಾಯಿಸುವುದಕ್ಕೆ ಬಂದರೆ ನನ್ನ ಹೆಸರಿಲ್ಲ, ನಮ್ಮ ಮನೆಯಲ್ಲಿ ಯಾರ ಹೆಸರೂ ಇಲ್ಲ. ನಾವು ಕಳೆದ 12 ವರ್ಷಗಳಿಂದ ಇಲ್ಲಿಯೇ ಇದ್ದೇವೆ. ಆದರೂ ನಮ್ಮ ಹೆಸರಿಲ್ಲ ಎಂದರೆ ಹೇಗೆ ಸಾಧ್ಯ?" ಮತಚಲಾವಣೆಗೆಂದು ಬಂದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹೇಳಿಕೆ.
2:28 PM, 7 Dec

ತೆಲಂಗಾಣ: ಮಹ್ಬುಬ್ ನಗರದ ಕಲ್ವಕುರ್ತಿಯ ಕಾಂಗ್ರೆಸ್ ಶಾಸಕ ಚಲ್ಲ ವಂಶಿ ಚಂದ ರೆಡ್ಡಿ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಅವರನ್ನು ನಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
1:40 PM, 7 Dec

ತೆಲಂಗಾಣ: 1 ಗಂಟೆಯವರೆಗೆ ಶೇ.49.15 ರಷ್ಟು ಮತದಾನ ದಾಖಲು
1:25 PM, 7 Dec

ರಾಜಸ್ಥಾನ: 1 ಗಂಟೆಗಯ ಹೊತ್ತಿಗೆ 41.53%ರಷ್ಟ ಮತದಾನ ದಾಖಲು
12:58 PM, 7 Dec

ಕಾಂಗ್ರೆಸ್ಸಿಗರು ಮತಗಟ್ಟೆಯೊಳಗೇ ಮತದಾರರಿಗೆ ಹಣ ನೀಡುತ್ತಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಆರೋಪಿಸಿದ್ದಾರೆ.
Advertisement
12:16 PM, 7 Dec

ಹೈದರಾಬಾದಿನಲ್ಲಿ ಮತ ಚಲಾಯಿಸಿದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ
12:06 PM, 7 Dec

ತೆಲಂಗಾಣದಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಶೇ.23.4 ಮತದಾನ ದಾಖಲು
10:58 AM, 7 Dec

ರಾಜಸ್ಥಾನ: ಜಾಲೋರ್ ನ ಆಹೋರ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 253, 254 ರಲ್ಲಿ ಇವಿಎಂ ದೋಷ. ಗಲಾಟೆ ಎಬ್ಬಿಸಿದ ಮತದಾರರು.
10:13 AM, 7 Dec

ರಾಜಸ್ಥಾನ: ಜೋಧ್ಪುರದ ಮತಗಟ್ಟೆ ಸಂಖ್ಯೆ 106 ರಲ್ಲಿ ಮತಚಲಾಯಿಸಿದ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್
9:56 AM, 7 Dec

ತೆಲಂಗಾಣ: ಎಐಎಂಐಎಂ ಮುಖಂಡ ಮತ್ತು ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಅವರು ಶಾಸ್ತ್ರಿಪುರದ, ಮೈಲಾರದೇವಪಾಳ್ಯದ ಮತಗಟ್ಟೆ ಸಂಖ್ಯೆ 317 ರಲ್ಲಿ ಮತದಾನ ಮಾಡಿದರು.
Advertisement
9:54 AM, 7 Dec

ರಾಜಸ್ಥಾನದಲ್ಲಿ 9 ಗಂಟೆಯ ಹೊತ್ತಿಗೆ ಶೇ.6.11 ರಷ್ಟು ಮತದಾನ ದಾಖಲು
9:37 AM, 7 Dec

"ಮತದಾನ ಮುಗಿಸು, ಫಲಿತಾಂಶ ಬರಲಿ. ನಂತರ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸುತ್ತೇವೆ"- ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ, ಟೋಂಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
9:35 AM, 7 Dec

ತೆಲಂಗಾಣದಲ್ಲಿ 9 ಗಂಟೆಯವರೆಗೆ ಶೇ.8.97 ರಷ್ಟು ಮತದಾನ ದಾಖಲು
9:01 AM, 7 Dec

ಜೈಪುರದ ವೈಶಾಲಿ ನಗರ ಮತಗಟ್ಟೆಯಲ್ಲಿ ಮತಚಲಾಯಿಸಿದ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್
8:59 AM, 7 Dec

"ನಾವು ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಜನ ಮತಹಾಕುತ್ತಾರೆ. ರಾಜಸ್ಥಾನದ ಜನರ ಬಗ್ಗೆ ನನಗೆ ವಿಶ್ವಾಸವಿದೆ. ನಮ್ಮ ಆದ್ಯತೆ ಅಭಿವೃದ್ಧಿ ಎಂಬುದು ಜನರಿಗೆ ಗೊತ್ತರುವ ಕಾರಣ ನಮ್ಮ ಪಕ್ಷವನ್ನು ಮತ್ತಷ್ಟು ಬಲಯುತಗೊಳಿಸುತ್ತಾರೆ" - ವಸುಂಧರಾ ರಾಜೆ, ರಾಜಸ್ಥಾನದ ಮುಖ್ಯಮಂತ್ರಿ
8:56 AM, 7 Dec

ತೆಲಂಗಾಣ: ವರಂಗಲ್ ನಲ್ಲಿ ಮತ ಚಲಾಯಿಸಿದ ಉಪಮುಖ್ಯಮಂತ್ರಿ ಕಡಿಯಾನ್ ಶ್ರೀಹರಿ
8:54 AM, 7 Dec

ಮತದಾನಕ್ಕೂ ಮುನ್ನ ಪೂಜೆ ಸಲ್ಲಿಸಿದ ರಾಜಸ್ಥಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ
8:52 AM, 7 Dec

ತೆಲಂಗಾಣದಲ್ಲಿ ಜುಬಿಲಿ ಹಿಲ್ಸ್ ನ ಮತಗಟ್ಟೆ ಸಂಖ್ಯೆ 151 ರಲ್ಲಿ ಮತ ಚಲಾಯಿಸಿದ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಪತ್ನಿ ಅಮಲಾ ಅಕ್ಕಿನೇನಿ
8:49 AM, 7 Dec

ತೆಲಂಗಾಣದ ಹೈದರಾಬಾದಿನ ಜುಬಿಲಿ ಹಿಲ್ಸ್ ನಲ್ಲಿ ಮತದಾರರ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಟ ಅಲ್ಲು ಅರ್ಜುನ್.
8:47 AM, 7 Dec

ತಮ್ಮ ಜಲ್ರಾಪಠಾಣ್ ಕ್ಷೇತ್ರದಲ್ಲಿ ಮತ ಚಲಾಯಿಸಿದ ಮುಖ್ಯಮಂತ್ರಿ ಮತ್ತು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಸುಂಧರಾ ರಾಜೆ
8:16 AM, 7 Dec

ರಾಜಸ್ಥಾನದಲ್ಲಿ ಮತದಾನ ಆರಂಭ
8:16 AM, 7 Dec

ತೆಲಂಗಾಣದಲ್ಲಿ ಮತಚಲಾಯಿಸುತ್ತಿರುವ ಜನರು
6:51 AM, 7 Dec

ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯವರೆಗೆ ಮುಂದುವರಿಯಲಿದೆ.
6:34 AM, 7 Dec

ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿನ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನ.29 ರಂದು ಹೃದಯಾಘಾತದಿಂದ ಮೃತರಾದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಆದ್ದರಿಂದ ನಾಳೆ 199 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ

English summary
Polling for Rajasthan and Telangana states will be taking place today(December 7). Results will be out on December 11. Here are LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X