ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಮಹಾ ಮಳೆ, ರಾಜಸ್ಥಾನದಲ್ಲಿ ಉರಿ ಬಿಸಿಲಿಗೆ ಜನತೆ ತತ್ತರ

|
Google Oneindia Kannada News

ನವದೆಹಲಿ, ಜುಲೈ 3: ಮಹಾರಾಷ್ಟ್ರದಲ್ಲಿ ಮಹಾ ಮಳೆಗೆ ಅಲ್ಲಿನ ಜನತೆ ತತ್ತರಿಸಿ ಹೋಗಿದ್ದಾರೆ, ರಾಜಸ್ಥಾನದಲ್ಲಿ ಮಳೆಯೇ ಬಾರದೆ ಬಿಸಿಲಿಗೆ ಜನ ಕಂಗೆಟ್ಟಿದ್ದಾರೆ.

ಇನ್ನೂ ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಕೊಂಚ ಶಾಂತವಾಗಿದೆ, ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ 44.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಉಕ್ಕಿ ಹರಿದ ತಿವಾರೆ ಜಲಾಶಯ, ಆರು ಸಾವು, 24 ಮಂದಿ ನಾಪತ್ತೆ ಉಕ್ಕಿ ಹರಿದ ತಿವಾರೆ ಜಲಾಶಯ, ಆರು ಸಾವು, 24 ಮಂದಿ ನಾಪತ್ತೆ

ರಾಜಸ್ಥಾನದಲ್ಲಿ ಕುಡಿಯುವ ನೀರಿಗೂ ಹಾಹಾಕಾರವೆದ್ದಿದೆ, ಮೂರ್ನಾಲ್ಕು ಕಿಲೋಮೀಟರ್‌ಗಳಷ್ಟು ದೂರು ಕ್ರಮಿಸಿ ನೀರನ್ನು ತರುತ್ತಿದ್ದಾರೆ, ಇನ್ನೂ ಕೆಲವರು ನೀರಿನ ಕ್ಯಾನ್‌ಗಳನ್ನು ಹಿಡಿದು ಬಸ್‌ಗಳಲ್ಲಿ 10-11 ಕಿ.ಮೀ ದೂರು ಪ್ರಯಾಣಿಸಿ ನೀರನ್ನು ತರುವಂತಹ ಪರಿಸ್ಥಿತಿ ಎದುರಾಗಿದೆ. ರಾಜಸ್ಥಾನ, ನವದೆಹಲಿ, ಉತ್ತರ ಪ್ರದೇಶದಲ್ಲಿ ಒಣಹವೆ ಮುಂದುವರೆದಿದೆ.

Rajasthan still suffering from heat wave

ಕರ್ನಾಟಕದ ಕರಾವಳಿ, ಉತ್ತರ ಕನ್ನಡ, ಮಲೆನಾಡು ಭಾಗಗಳಲ್ಲಿ ಮಳೆಯಾಗುತ್ತಿದೆ, ಇನ್ನು ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ.
ರತ್ನಗಿರಿಯ ತಿವಾರೆ ಜಲಾಶಯ ಭರ್ತಿಯಾಗಿ ಉಕ್ಕಿ ಹರಿಯುತ್ತಿದ್ದು, ಇದುವರೆಗೂ 6 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಶೋಧಕಾರ್ಯ ಮುಂದುವರೆದಿದೆ.

ಶ್ರೀ ಗಂಗಾನಗರ-ರಾಜಸ್ಥಾನ-44.6 ಡಿಗ್ರಿ ಸೆಲ್ಸಿಯಸ್
ಬಿಕಾನೇರ್- ರಾಜಸ್ಥಾನ-43.6 ಡಿಗ್ರಿ ಸೆಲ್ಸಿಯಸ್
ಚುರು-ರಾಜಸ್ಥಾನ-42.8 ಡಿಗ್ರಿ ಸೆಲ್ಸಿಯಸ್
ಫಲೋಡಿ-ರಾಜಸ್ಥಾನ-42.6 ಡಿಗ್ರಿ ಸೆಲ್ಸಿಯಸ್
ಜೋಧ್‌ಪುರ-ರಾಜಸ್ಥಾನ-42.4 ಡಿಗ್ರಿ ಸೆಲ್ಸಿಯಸ್
ಬಾರ್ಮರ್-ರಾಜಸ್ಥಾನ-42.2 ಡಿಗ್ರಿ ಸೆಲ್ಸಿಯಸ್
ಜೈಸಾಲ್ಮರ್-ರಾಜಸ್ಥಾನ-42.1 ಡಿಗ್ರಿ ಸೆಲ್ಸಿಯಸ್
ನವದೆಹಲಿ-ನವದೆಹಲಿ-41.4 ಡಿಗ್ರಿ ಸೆಲ್ಸಿಯಸ್
ಆಳ್ವಾರ್-ರಾಜಸ್ಥಾನ-41.2 ಡಿಗ್ರಿ ಸೆಲ್ಸಿಯಸ್
ಝಾನ್ಸಿ-ಉತ್ತರ ಪ್ರದೇಶ- 41.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

English summary
Maharashtra having good rainfall but Rajasthan still suffering from heat wave. here are the 10 hottest cities in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X