ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಬಿಜೆಪಿಗೆ ಶಾಪವಾಗಲಿದೆ ಬಂಡಾಯದ ಬಿಸಿ!

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

Recommended Video

ರಾಜಸ್ಥಾನದಲ್ಲಿ ಬಿಜೆಪಿಗೆ ಶಾಪವಾಗಲಿದೆ ಬಂಡಾಯದ ಬಿಸಿ | Oneindia Kannada

ನವದೆಹಲಿ, ಅಕ್ಟೋಬರ್ 22: ಒಂದೆಡೆ ಆಡಳಿತ ವಿರೋಧಿ ಅಲೆ, ಇನ್ನೊಂದೆಡೆ ಬಿಜೆಪಿಯೊಳಗೇ ಬಂಡಾಯ. ಇವೆರಡೂ ಸೇರಿ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಭರವಸೆಯನ್ನೂ ಬಿಜೆಪಿ ಕಳೆದುಕೊಳ್ಳುವಂತಾಗಿದೆ.

ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿಲ್ಲ. ಅವರ ದುರಹಂಕಾರದ ಪ್ರವೃತ್ತಿಯೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ.

ಗೆಹ್ಲೋಟ್, ಪೈಲೆಟ್ ಒಂದಾದರೂ ಟಿಕೆಟ್ ಹಂಚಿಕೆ ತಾಪತ್ರಯ ಮುಗಿದಿಲ್ಲ! ಗೆಹ್ಲೋಟ್, ಪೈಲೆಟ್ ಒಂದಾದರೂ ಟಿಕೆಟ್ ಹಂಚಿಕೆ ತಾಪತ್ರಯ ಮುಗಿದಿಲ್ಲ!

ಇನ್ನೂ ಟಿಕೆಟ್ ಹಂಚಿಕೆಯಾಗಿಲ್ಲ, ಆಗಲೇ ರಾಜಸ್ಥಾನದಲ್ಲಿ ಬಂಡಾಯದ ಬಿಸಿ ಎದ್ದಿರುವುದು ಬಿಜೆಪಿಗೆ ಬಹುದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.

ರಾಜೆ ದುರಹಂಕಾರ!

ರಾಜೆ ದುರಹಂಕಾರ!

ಮುಖ್ಯಮಂತ್ರಿ ವಸುಂಧರಾ ರಾಜೆ ಬಗ್ಗೆ ರಾಜಸ್ಥಾನದ ಜನರಲ್ಲಿ ಉತ್ತಮ ಅಭಿಪ್ರಾಯವಿಲ್ಲ. ಅವರ ವರ್ತನೆಯನ್ನು ಜನರು ದುರಹಂಕಾರ ಎಂದೇ ವ್ಯಾಖ್ಯಾನಿಸುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರನ್ನಅಗಲೀ, ರಾಜ್ಯದ ವರಿಷ್ಠರನ್ನಾಗಲೀ ವಿಧೇಯತೆಯಿಂದ ನೋಡಿಕೊಳ್ಳುವ ಪ್ರವೃತ್ತಿ ಅವರಲ್ಲಿಲ್ಲ. ಕಾರ್ಯಕರ್ತರ ವಲಯದಲ್ಲೂ ಆವರ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ. ರಾಜಸ್ಥಾನದಲ್ಲಿ ಬಿಜೆಪಿ ಹಲವು ಭಾಗಗಳಾಗಿ ಹಂಚಿಹೋದಂತಾಗಿದ್ದು, ಅದನ್ನು ಒಗ್ಗೂಡಿಸುವ ಪ್ರಯತ್ನವನ್ನು ನಾಯಕಿಯಾಗಿ ರಾಜೆ ಮಾಡುತ್ತಿಲ್ಲ ಎಂಬ ದೂರಿದೆ.

ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳುಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು

ರಾಜೆ ಮೇಲೆ ಭ್ರಷ್ಟಾಚಾರದ ಆರೋಪ

ರಾಜೆ ಮೇಲೆ ಭ್ರಷ್ಟಾಚಾರದ ಆರೋಪ

ಸಿಎಂ ವಸುಂಧರಾ ರಾಜೆ ಅವರ ವಿರುದ್ಧ ಭ್ರಷ್ಟಚಾರದ ಆರೋಪಗಳೂ ಕೇಳಿಬರುತ್ತಿದ್ದು, ಇದು ಅವರಿಗೆ ಹಿನ್ನಡೆಯನ್ನುಂಟುಮಾಡಬಹುದು. ಅದೂ ಅಲ್ಲದೆ ರಾಜಸ್ಥಾನದ ಪ್ರಭಾವೀ ಬಿಜೆಪಿ ನಾಯಕರಾಗಿದ್ದ ಮನ್ವೇಂದ್ರ ಸಿಂಗ್ ರಂಥವರು ಪಕ್ಷ ತೊರೆದಿದ್ದು, ಬಿಜೆಪಿಯನ್ನು ಹೈರಾಣಾಗಿಸಿದೆ. ಟಿಕೆಟ್ ಹಂಚಿಕೆಯ ನಂತರ ಮತ್ತಷ್ಟು ಜನ ಧಂಗೆ ಏಳುವ ಸಾಧ್ಯತೆ ಇದೆ.

ರಾಜಸ್ಥಾನ ಸಿಎಂ ಸಮೀಕ್ಷೆ : ವಸುಂಧರಾಗಿಂತ ಸಚಿನ್ ಪೈಲಟ್ ಮುಂದೆರಾಜಸ್ಥಾನ ಸಿಎಂ ಸಮೀಕ್ಷೆ : ವಸುಂಧರಾಗಿಂತ ಸಚಿನ್ ಪೈಲಟ್ ಮುಂದೆ

ಕಾಂಗ್ರೆಸ್ ಸೇರಿದ ಮನ್ವೇಂದ್ರ ಸಿಂಗ್

ಕಾಂಗ್ರೆಸ್ ಸೇರಿದ ಮನ್ವೇಂದ್ರ ಸಿಂಗ್

ಬಿಜೆಪಿಯ ಪ್ರಭಾವೀ ನಾಯಕರಾಗಿದ್ದ ಮನ್ವೇಂದ್ರ ಸಿಂಗ್ ಕಾಂಗ್ರೆಸ್ ಸೇರಿದ್ದಾರೆ. ಇದು ರಜಪೂತ್ ಸಮುದಾಯದವರೇ ಹೆಚ್ಚಿರುವ ಪ್ರದೇಶಗಳಲ್ಲಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯನ್ನುಂಟು ಮಾಡುವುದು ಖಂಡಿತ. ಜೊತೆಗೆ ಆರು ಬಾರಿ ಶಾಸಕರಾಗಿದ್ದ ಘನಶ್ಯಾಮ ತಿವಾರಿ ಬಿಜೆಪಿ ತೊರೆದು 'ಭಾರತ್ ವಾಹಿನಿ ಪಕ್ಷ'ವನ್ನು ಕಟ್ಟಿದ್ದಾರೆ. ಬಿಜೆಪಿಯ ಹುಳುಕುಳನ್ನು ಬಲ್ಲ ಇವರು ಪಕ್ಷ ತೊರೆದು ಆಚೆ ಹೋಗಿದ್ದು ವಿಪಕ್ಷಗಳಿಗೆ ಆನೆಬಲ ಬಂದಂತಾಗಿದೆ.

ಇದೇ ಮೊದಲಲ್ಲ!

ಇದೇ ಮೊದಲಲ್ಲ!

ಬಿಜೆಪಿಯ ನಾಯಕರೇ ಬಿಜೆಪಿ ವಿರುದ್ಧ ಹೀಗೆ ಧಂಗೆ ಏಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅಂದರೆ 2003 ರಲ್ಲೂ ರಾಜ್ಯದಲ್ಲಿ ಇಂಥದೇ ಸ್ಥಿತಿ ಇತ್ತು. 2003 ರಲಲೂ ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾಗಲೇ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ರಾಜೆ ಅವರ ವ್ಯಕ್ತಿತ್ವಕ್ಕೂ, ವಿವಾದಕ್ಕೂ ಇರುವ ನಂಟಿಗೆ ಸಾಕ್ಷಿಯಾಗಿದೆ.

ಚುನಾವಣೆ ಯಾವಾಗ?

ಚುನಾವಣೆ ಯಾವಾಗ?

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಪ್ರಸ್ತುತ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ.

English summary
Rajasthan assembly elections 2018: It is not only anti-incumbency that is plaguing the Rajasthan Bharatiya Janata Party (BJP) but party rebels are also affecting its chances in the state badly with two big leaders from party parting ways. Leaders like Ghanshyam Tiwari and Manvendra Singh have taken their own ways and some more may revolt after ticket distribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X