ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಯವರನ್ನು 'ಕಳ್ಳ' ಎಂದ ರಾಹುಲ್ ಗಾಂಧಿ

|
Google Oneindia Kannada News

Recommended Video

ನರೇಂದ್ರ ಮೋದಿಯವರನ್ನ ಕಳ್ಳ ಎಂದು ಕರೆದ ರಾಹುಲ್ ಗಾಂಧಿ | Oneindia kannada

ದುಂಗಾರ್ಪುರ(ರಾಜಸ್ಥಾನ), ಸೆಪ್ಟೆಂಬರ್ 20: ರಾಜಸ್ಥಾನದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಕಳ್ಳ' ಎಂದು ಕರೆದಿದ್ದಾರೆ!

ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲಿನ ದುಂಗಾರ್ಪುರದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಅವರು ಮಾತನಾಡುತ್ತಿದ್ದರು.

'ಹಾಸ್ಯಗಾರ ರಾಜಕುಮಾರ': ರಾಹುಲ್ ಗಾಂಧಿಯನ್ನು ಮೂದಲಿಸಿದ ಜೇಟ್ಲಿ'ಹಾಸ್ಯಗಾರ ರಾಜಕುಮಾರ': ರಾಹುಲ್ ಗಾಂಧಿಯನ್ನು ಮೂದಲಿಸಿದ ಜೇಟ್ಲಿ

ಈ ಸಂದರ್ಭದಲ್ಲಿ ರಫೆಲ್ ಡಿಲ್ ವಿವಾದವನ್ನು ನೆನಪಿಸಿಕೊಂಡ ಅವರು 'ಹಿಂದುಸ್ತಾನದ ಚೌಕಿದಾರ ಚೋರ' ಎಂದು ಮೋದಿಯವರನ್ನು ಅಣಕಿಸಿದರು.

Rajasthan: Rahul gandhi calls PM Narendra Modi a thief

ಸಾಮೂಹಿಕ ಅತ್ಯಾಚಾರ ಹೆಚ್ಚಳ: ಮೋದಿ ವಿರುದ್ಧ ರಾಹುಲ್ ಕಟು ಟೀಕೆಸಾಮೂಹಿಕ ಅತ್ಯಾಚಾರ ಹೆಚ್ಚಳ: ಮೋದಿ ವಿರುದ್ಧ ರಾಹುಲ್ ಕಟು ಟೀಕೆ

ರಫೆಲ್ ಡೀಲ್ ನಲ್ಲಾದ ಅವ್ಯವಹಾರ ಮತ್ತು ಮದ್ಯದೊರೆ ವಿಜಯ ಮಲ್ಯ ದೇಶ ಬಿಟ್ಟು ಓಡಿದ್ದು ಮುಂತಾದ ವಿಷಯಗಳನ್ನು ಅವರು ನೆನಪಿಸಿದರು. 'ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ದೇಶದ ಪ್ರಧಾನಿಯಾಗುವುದು ಬೇಕಿರಲಿಲ್ಲ. ನಾನು ಈ ದೇಶದ ಚೌಕಿದಾರ(ಸೇವಕ) ಎಂದು ಅವರೇ ಹೇಳಿದ್ದರು. ಆದರೆ ಇದೀಗ ಜನರಿಗೇ ಅರ್ಥವಾಗುತ್ತಿದೆ, ಈ ಚೌಕಿದಾರ ಚೌಕಿದಾರನಲ್ಲ. ಚೋರ ಎಂಬುದು' ಎಂದು ರಾಹುಲ್ ಗಾಂಧಿ ಹೇಳಿದರು.

ಛೆ, ಛೆ! ರಾಹುಲ್ ಕಾಲೆಳೆಯೋಕೆ ಬಿಜೆಪಿ ಹೀಗೆಲ್ಲ ಸುಳ್ಳು ಹೇಳೋದಾ?ಛೆ, ಛೆ! ರಾಹುಲ್ ಕಾಲೆಳೆಯೋಕೆ ಬಿಜೆಪಿ ಹೀಗೆಲ್ಲ ಸುಳ್ಳು ಹೇಳೋದಾ?

ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ, 'ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಹುದ್ದೆಗೆ ಎಷ್ಟು ಗೌರವ ನೀಡಬೇಕು ಎಂಬುದೇ ಗೊತ್ತಿಲ್ಲ. ದೇಶದ ಜನರಿಗೆ ರಾಹುಲ್ ಗಾಂಧಿ ಅವರ ಯೋಚನೆಯೇನು ಎಂಬುದು ಗೊತ್ತಿದೆ. ಅವರ ಬಾಲಿಶ ಹೇಳಿಕೆಗಳನ್ನು ಜನ ಕೇಳಿದ್ದಾರೆ' ಎಂದಿದ್ದಾರೆ.

English summary
Citing examples of the controversial Rafale deal and fugitive liquor baron Vijay Mallya, Congress president Rahul Gandhi on Thursday criticised Prime Minister Narendra Modi and coined a new slogan, 'Gali gali mein shor hai, Hindustan ka chowkidar chor hai.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X