ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ : ಸರ್ಕಾರಿ ಹಾಸ್ಟೆಲ್ ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ

By Manjunatha
|
Google Oneindia Kannada News

ರಾಜಸ್ಥಾನ, ನವೆಂಬರ್ 28 : ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈಗ ರಾಜಸ್ಥಾನ ಸರ್ಕಾರವು ಸರ್ಕಾರಿ ವಸತಿನಿಲಯಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಿ ಪರ್ಮಾನು ಹೊರಡಿಸಿದೆ.

'ಸಿನಿಮಾ ಹಾಲಿನಲ್ಲಿ ರಾಷ್ಟ್ರಗೀತೆಗೆ ಗೌರವ ಕೇಂದ್ರದ ತೀರ್ಮಾನ''ಸಿನಿಮಾ ಹಾಲಿನಲ್ಲಿ ರಾಷ್ಟ್ರಗೀತೆಗೆ ಗೌರವ ಕೇಂದ್ರದ ತೀರ್ಮಾನ'

ರಾಜಸ್ಥಾನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಈ ಆದೇಶ ಹೊರಡಿಸಿದ್ದು, ಇನ್ನು ಮುಂದೆ ರಾಜಸ್ಥಾನದ 800 ವಸತಿನಿಲಯಗಳಲ್ಲಿ ದಿನನಿತ್ಯ ರಾಷ್ಟ್ರಗೀತೆ ಕೇಳಲಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆಗೆ ರಾಷ್ಟ್ರಗೀತೆ ಕಡ್ಡಾಯವಾಗಿ ಹಾಡಬೇಕು ಎಂದು ಇಲಾಖೆ ನಿರ್ದೇಶಕ ಸಮಿತ್ ಶರ್ಮಾ ಆದೇಶ ಹೊರಡಿಸಿದ್ದಾರೆ. 'ಇದು ಮಕ್ಕಳಲ್ಲಿ ದೇಶಪ್ರೇಮ ಬೆಳೆಸುತ್ತದೆ' ಎಂದು ಅವರು ಹೇಳಿದ್ದಾರೆ.

Rajasthan hostels told to sing national anthem daily

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸುಪರ್ದಿಯಲ್ಲಿ 789 ವಸತಿನಿಲಯಗಳು ಮತ್ತು 22 ವಸತಿಶಾಲೆಗಳು ಇವೆ. ಇವುಗಳಲ್ಲಿ 40000 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ.

ಈ ಮುಂಚೆ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದಾಗ ಹಲವು ಪರ-ವಿರೋಧ ಮಾತುಗಳು ಕೇಳಿಬಂದಿದ್ದವು, "ರಾಷ್ಟ್ರಗೀತೆ ಕಡ್ಡಾಯಗೊಳಿಸುವುದು 'ದೇಶಪ್ರೇಮದ ಹೇರಿಕೆ' ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದರು.

ಈ ರೀತಿಯ ಫರ್ಮಾನು ಹೊರಡಿಸುವ ಸರ್ಕಾರಿ ಕಚೇರಿಗಳಲ್ಲಿ, ನ್ಯಾಯಾಲಯಗಳಲ್ಲಿ, ರಾಜಕೀಯ ಸಮಾವೇಶಗಳಲ್ಲಿ ರಾಷ್ಟ್ರಗೀತೆ ಏಕೆ ಹಾಡುವುದಿಲ್ಲ ಎಂದು ಕೆಲವರು ಟೀಕಿಸಿದ್ದರು.

English summary
Rajasthan’s Department for Social Justice and Empowerment has announced that students in 800 government hostels across the state will have to recite the national anthem daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X