• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಸ್ಥಾನ ವಿಧಾನಸಭಾ ಚುನಾವಣೆ : ವಾಟ್ಸಪ್‌ನಲ್ಲಿ ಅಭ್ಯರ್ಥಿಗಳ ಪ್ರಚಾರ

By ವಿನೋದ್ ಕುಮಾರ್ ಶುಕ್ಲಾ
|

ಜೈಪುರ, ನವೆಂಬರ್ 08 : ರಾಜಸ್ಥಾನ ವಿಧಾನಸಭೆ ಚುನಾವಣೆ 2018ಕ್ಕೆ ಟಿಕೆಟ್ ಹಂಚಿಕೆ ಪ್ರಕ್ರಿಯಿ ವಿಳಂಬವಾಗುತ್ತಿದೆ. ಆದರೆ, ವಿವಿಧ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ, ಮತ ಯಾಚನೆ ಮಾಡುತ್ತಿದ್ದಾರೆ.

ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 7ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಯಾದರೂ ರಾಜಕೀಯ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿಲ್ಲ.

ರಾಜಸ್ಥಾನ ಚುನಾವಣೆ: ಮೋದಿ, ಶಾ, ಯೋಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಟಿಕೆಟ್ ಇನ್ನೂ ಅಂತಿಮಗೊಳ್ಳದಿದ್ದರೂ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ಅದರಲ್ಲೂ ವಾಟ್ಸಪ್ ಮೂಲಕ ಪ್ರಚಾರ ನಡೆಸುತ್ತಾ, ಹೆಚ್ಚು-ಹೆಚ್ಚು ಜನರನ್ನು ತಲುಪಲು ಪ್ರಯತ್ನವನ್ನು ಮಾಡುತ್ತಿದ್ದಾರೆ.

ಮೂರು ದಿನದಲ್ಲಿ 4.75 ಕೋಟಿ ಮತದಾರರನ್ನು ತಲುಪಲಿರುವ ಬಿಜೆಪಿ!

ವಿವಿಧ ಪಕ್ಷಗಳ ಮೂಲಗಳ ಮಾಹಿತಿಯಂತೆ ಸಂಭಾವ್ಯ ಅಭ್ಯರ್ಥಿಗಳಿಗೆ ಸಾಮಾಜಿಕ ಜಾಲತಾಣಗಳ ಪ್ರಭಾವ ಅರ್ಥವಾಗಿದೆ. ಆದ್ದರಿಂದ, ವಾಟ್ಸಪ್ ಮೂಲಕ ಜನರನ್ನು ತಲುಪಲು ಪ್ರಯತ್ನ ನಡೆಸುತ್ತಿದ್ದಾರೆ. ಟಿಕೆಟ್ ಸಿಗುವ ಮೊದಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆ : ಚಿತ್ರದುರ್ಗದಲ್ಲಿ ಬಿಜೆಪಿ ಪ್ರಚಾರ

ಜನರು ಸಕ್ರಿಯರಾಗಿದ್ದಾರೆ

ಜನರು ಸಕ್ರಿಯರಾಗಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಈಗ ಜನರು ಸಕ್ರಿಯರಾಗಿದ್ದಾರೆ. ಅದರಲ್ಲೂ ಯುವಕರನ್ನು ತಲುಪಲು ಇದು ಉತ್ತಮ ಮಾರ್ಗವಾಗಿದೆ. ಆದ್ದರಿಂದ, ರಾಜಕೀಯ ನಾಯಕರು ವಾಟ್ಸಪ್‌ಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬೂತ್ ಮಟ್ಟದ ಗುಂಪುಗಳನ್ನು ಮಾಡಿ ಅಲ್ಲಿ ಪ್ರಚಾರವನ್ನು ಮಾಡುತ್ತಾ, ಮತಬೇಟೆ ನಡೆಸುತ್ತಿದ್ದಾರೆ.

ಫೇಸ್‌ಬುಕ್‌ನಲ್ಲೂ ಪ್ರಚಾರ

ಫೇಸ್‌ಬುಕ್‌ನಲ್ಲೂ ಪ್ರಚಾರ

ವಾಟ್ಸಪ್ ಮಾತವಲ್ಲ ಫೇಸ್‌ಬುಕ್‌ನಲ್ಲಿಯೂ ರಾಜಕೀಯ ನಾಯಕರು ಪೇಜ್ ಮಾಡಿದ್ದಾರೆ. ತಮ್ಮ ಪ್ರಚಾರದ ಚಿತ್ರ, ಭಾಷಣದ ವಿಡಿಯೋಗಳನ್ನು ಅಲ್ಲಿ ಹಾಕುತ್ತಿದ್ದಾರೆ. ವಾಟ್ಸಪ್‌ಗಳಲ್ಲಿ ಫೇಸ್‌ಬುಕ್ ಪುಟದ ಲಿಂಕ್ ಹಾಕಿ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಲೈಕ್ ಮಾಡಲು ಮನವಿ ಮಾಡುತ್ತಿದ್ದಾರೆ.

ಜನರ ನೇಮಕ

ಜನರ ನೇಮಕ

ವಿವಿಧ ರಾಜಕೀಯ ನಾಯಕರು ತಮ್ಮ ಫೇಸ್‌ಬುಕ್ ಪುಟ, ಟ್ವಿಟರ್ ಖಾತೆಗಳನ್ನು ನಿಭಾಯಿಸಲು. ಜನರಿಗೆ ಕ್ಷಣ-ಕ್ಷಣದ ಅಪ್‌ಡೇಟ್‌ಗಳನ್ನು ನೀಡಲು ಜನರನ್ನು ನೇಮಿಸಿಕೊಂಡಿದ್ದಾರೆ. ಬಿಜೆಪಿ ಸದಾ ಸಾಮಾಜಿಕ ಜಾಲತಾಣದಲ್ಲಿ ಮುಂದಿದೆ. ಆದರೆ, ರಾಜಸ್ಥಾನದ ಕಾಂಗ್ರೆಸ್‌ ನಾಯಕರು ಸಹ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ನ.16ರಂದು ನಾಮಪತ್ರ

ನ.16ರಂದು ನಾಮಪತ್ರ

ರಾಜಸ್ಥಾನದಲ್ಲಿ ಸದ್ಯ ಬಿಜೆಪಿ ಸರ್ಕಾರವಿದೆ. ಡಿಸೆಂಬರ್ 7ರಂದು ರಾಜ್ಯದ 200 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಚುನಾವಣೆಗಾಗಿ ನವೆಂಬರ್ 17ರಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ.

English summary
Despite delay in the ticket distribution in Rajasthan for state Assembly elections 2018, leaders from all political parties have become active and even aggressive in image building. Probable candidates start aggressive social media campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more