• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಸ್ಥಾನದಲ್ಲಿ ಮುದುಡಲಿದೆ ಕಮಲ, ಕೈಗೆ ಬಹುಮತದ ಬಲ!

|

ನವದೆಹಲಿ, ನವೆಂಬರ್ 02: ರಾಜಸ್ಥಾನದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಈ ಬಾರಿ ಮುಖಭಂಗ ಅನುಭವಿಸಲಿದೆ ಎಂದು ಟೈಮ್ಸ್ ನೌ -ಸಿಎನ್ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಹೇಳುತ್ತಿದೆ.

ರಾಜಸ್ಥಾನದ ವಸುಂಧರಾರಾಜೇ ನೇತೃತ್ವದ ಸರ್ಕಾರದ ವಿರುದ್ಧ ಜನಮತಾಭಿಪ್ರಾಯ ವ್ಯಕ್ತವಾಗಿದೆ.ಸಮೀಕ್ಷೆ ಪ್ರಕಾರ,ಬರೋಬ್ಬರಿ ನೂರು ಸೀಟುಗಳ ನಷ್ಟ ಅನುಭವಿಸಲಿದೆ. 2013ರ ಚುನಾವಣೆಯಲ್ಲಿ 163 ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಕೇವಲ 63 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಸಮೀಕ್ಷೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಮತ್ತೆ ಅಧಿಕಾರ

200 ಸೀಟುಗಳ ಪೈಕಿ ಕೇವಲ 21ರಲ್ಲಿ ಗೆದ್ದಿದ್ದ ಕಾಂಗ್ರೆಸ್, ಈ ಚುನಾವಣೆಯಲ್ಲಿ 129 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯಲಿದೆ. ಇಲ್ಲಿ ಸರ್ಕಾರ ರಚನೆಗೆ 101 ಸ್ಥಾನಗಳ ಅವಶ್ಯಕತೆಯಿದೆ ಎಂದು ಟೈಮ್ಸ್ ನೌ -ಸೀ ವೋಟರ್ ಸಮೀಕ್ಷೆಗಳ ಸಮೀಕ್ಷೆಯಲ್ಲಿ ಹೇಳಲಾಗಿತ್ತು.

ಇನ್ನು ಎಬಿಪಿ ನ್ಯೂಸ್ ಪ್ರಕಾರ, ಕಳೆದ ಬಾರಿ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 163 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ, ಈಬಾರಿ ಕೇವಲ 56 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಲಿದೆ.

ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು

ಕಳೆದ ಬಾರಿ ಕೇವಲ 21 ಸೀಟು ಗೆದ್ದಿದ್ದ ಕಾಂಗ್ರೆಸ್ ಈಬಾರಿ ತನಗೇ ಅಚ್ಚರಿ ಆಗುವಂತೆ 142 ಸೀಟುಗಳಲ್ಲಿ ಗೆಲ್ಲಲಿದೆ. ಇನ್ನೆರಡು ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ ಎಂದು ಸಮೀಕ್ಷೆ ಬಂದಿದೆ.ಈಗ ಟೈಮ್ಸ್ ನೌ ಸಿಎನ್ಎಕ್ಸ್ ವರದಿ ಕೂಡಾ ಇದಕ್ಕಿಂತ ವಿಭಿನ್ನವಾಗೇನು ಇಲ್ಲ, ಕಾಂಗ್ರೆಸ್ಸಿಗೆ ಹಿತವಾಗಿ ಫಲಿತಾಂಶ ಬಂದಿದೆ.

ಟೈಮ್ಸ್ ನೌ ಸಿಎನ್ಎಕ್ಸ್ ವರದಿ

ಟೈಮ್ಸ್ ನೌ ಸಿಎನ್ಎಕ್ಸ್ ವರದಿ

ಈ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಈ ಬಾರಿ 110 ರಿಂದ 130 ಸ್ಥಾನಗಳನ್ನು ಪಡೆಯುವ ಮೂಲಕ 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲಿದೆ. ಬಿಜೆಪಿಯು 70 ರಿಂದ 80 ಸ್ಥಾನ ಗಳಿಸಬಹುದು. ಬಿಎಸ್ಪಿ 1 ರಿಂದ 3, ಜಾಟ್ ನಾಯಕ ಹನುಮಾನ್ ಬೆನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ, ಘನಶ್ಯಾಮ್ ತಿವಾರಿಯವರ ಭಾರತ್ ವಾಹಿನಿ ಪಾರ್ಟಿ ಸೇರಿ ಉಳಿದ ಪಕ್ಷಗಳು 7 ಸ್ಥಾನ ಗಳಿಸಬಹುದು

ವಸುಂಧರಾ ರಾಜೇ ಅವರ ಆಡಳಿತದ ಬಗ್ಗೆ

ವಸುಂಧರಾ ರಾಜೇ ಅವರ ಆಡಳಿತದ ಬಗ್ಗೆ

ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಡಳಿತದ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ರಾಜೇ ಅವರ ಬಿಜೆಪಿ ಸರ್ಕಾರಕ್ಕೆ ಸಾರ್ವಜನಿಕರು ನೀಡಿರುವ ಪ್ರತಿಕ್ರಿಯೆ ಹೀಗಿದೆ:

ಉತ್ತಮ : ಶೇ35

ಸರಾಸರಿ : 12%

ಕಳಪೆ : 48%

ಗೊತ್ತಿಲ್ಲ:5%

****

ಯಾರ ಸರ್ಕಾರ ಹೆಚ್ಚು ಉತ್ತಮವಾಗಿತ್ತು?

ಅಶೋಕ್ ಗೆಹ್ಲೋಟ್ : ಶೇ 30.82

ವಸುಂಧರಾ ರಾಜೇ : 25.25%

ಇಬ್ಬರ ಆಡಳಿತವೂ ಉತ್ತಮ : 10.8%

ಇಬ್ಬರ ಆಡಳಿತವೂ ಕಳಪೆ : 13.23 %

ಸರಿಯಾಗಿ ಹೇಳಲಾಗದು : 20.62%

ಯಾರನ್ನು ಸಿಎಂ ಆಗಿ ನೋಡಬಯಸುತ್ತೀರಿ?

ಯಾರನ್ನು ಸಿಎಂ ಆಗಿ ನೋಡಬಯಸುತ್ತೀರಿ?

ಸಚಿನ್ ಪೈಲಟ್ : ಶೇ 31.75

ವಸುಂಧರಾ ರಾಜೇ : ಶೇ 20.5

ಅಶೋಕ್ ಗೆಹ್ಲೋಟ್ :ಶೇ 15.01

ವಸುಂಧರಾ ವಿರುದ್ಧ ಆಡಳಿತಾ ವಿರೋಧಿ ಅಲೆ

ವಸುಂಧರಾ ವಿರುದ್ಧ ಆಡಳಿತಾ ವಿರೋಧಿ ಅಲೆ

ಪದ್ಮಾವತಿ ಚಿತ್ರ ವಿವಾದ ಸಂದರ್ಭದಲ್ಲಿ ಸರ್ಕಾರದ ಕ್ರಮ

ಪರ್ವಾಗಿಲ್ಲ: 20.5%

ಸರಿಯಾಗಿರಲಿಲ್ಲ: 65.95%

ಅಭಿಪ್ರಾಯ ಹೇಳಲ್ಲ : 13.55%

ಗ್ಯಾಂಗ್ ಸ್ಟರ್ ಆನಂದ್ ಪಾಲ್ ಸಿಂಗ್ ಎನ್ ಕೌಂಟರ್

ತೃಪ್ತಿ ತಂದಿದೆ: 40.51%

ಸರಿಯಾದ ಕ್ರಮವಲ್ಲ : 55.78%

ಅಭಿಪ್ರಾಯ ಹೇಳಲ್ಲ : 3.71 %

English summary
The Indian National Congress is likely to come to power in Rajasthan with a comfortable majority after the state assembly elections to be held in December, a Times Now-CNX pre-poll survey has predicted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X