ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಜಾತಿಯ ಕುರಿತು ಹೇಳಿಕೆ: ರಾಜಸ್ಥಾನ ಸಿಎಂ ಗೆಹ್ಲೋಟ್ ವಿವಾದ

|
Google Oneindia Kannada News

ನವದೆಹಲಿ, ಏಪ್ರಿಲ್ 17: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜಾತಿಯ ಕುರಿತು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿವಾದ ಸೃಷ್ಟಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಜಾತಿಯ ಕಾರಣಕ್ಕೆ ರಾಮನಾಥ್‌ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಲಾಗಿದೆ ಎಂದು ಗೆಹ್ಲೋಟ್ ಹೇಳಿಕೆ ನೀಡಿದ್ದಾರೆ. 2017ರಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆಗೆ ಮುನ್ನ ಜಾತಿ ಸಮತೋಲನ ಮಾಡುವುದಕ್ಕಾಗಿ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದಿದ್ದಾರೆ.

ಜಾತಿ ನೋಡಿ ಬಿಜೆಪಿ ಮತ ಹಾಕಿದರೆ ಎಚ್‌ಡಿಕೆ ಕುರ್ಚಿಗೆ ಆಪತ್ತು: ಮೊಯ್ಲಿ

'2017ರ ಗುಜರಾತ್ ವಿಧಾನಸಭೆ ಚುನಾವಣೆಯನ್ನು ಪರಿಗಣಿಸಿ ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಲಾಯಿತು ಎಂದು ಜನರು ಕೂಡ ಹೇಳುತ್ತಿದ್ದಾರೆ. ನಾನು ಲೇಖನವೊಂದನ್ನು ಓದುತ್ತಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂದು ಭಯಗೊಂಡಿದ್ದರು. ಅಮಿತ್ ಶಾ ಬಹುಶಃ ಸಲಹೆ ನೀಡಿದ ಬಳಿಕ ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಯಿತು' ಎಂದು ಗೆಹ್ಲೋಟ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Rajasthan CM Ashok Gehlot controversy ram nath kovind made president because of his caste

'ಎಲ್‌ಕೆ ಅಡ್ವಾಣಿ ಅವರು ರಾಷ್ಟ್ರಪತಿ ಆಗಬೇಕಿತ್ತಾದರೂ ಅವರನ್ನು ಬಿಟ್ಟುಬಿಡಲಾಯಿತು. ಅಡ್ವಾಣಿ ಅವರಿಗೆ ಅರ್ಹ ಗೌರವ ಸಿಗುತ್ತದೆ ಎಂದು ದೇಶದ ಜನರು ನಿರೀಕ್ಷಿಸಿದ್ದರು. ಆದರೆ ಅದು ಹುಸಿಯಾಯಿತು. ಇದು ಬಿಜೆಪಿಯ ಆಂತರಿಕ ವಿಚಾರವಾಗಿದ್ದರೂ ನಾನು ಒಂದು ಲೇಖನ ಓದಿದ್ದರಿಂದ ಅದರ ಬಗ್ಗೆ ಚರ್ಚಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

ರಾಹುಲ್ ಪ್ರಧಾನಿ ಆದರೆ ಗಂಗಾಮಥಸ್ಥರು ST ಗೆ ಸೇರ್ಪಡೆ: ಸಿದ್ದರಾಮಯ್ಯ ರಾಹುಲ್ ಪ್ರಧಾನಿ ಆದರೆ ಗಂಗಾಮಥಸ್ಥರು ST ಗೆ ಸೇರ್ಪಡೆ: ಸಿದ್ದರಾಮಯ್ಯ

ಗೆಹ್ಲೋಟ್ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಇದು ದಲಿತ ವಿರೋಧಿ, ಬಡವರ ವಿರೋಧಿ ಮತ್ತು ಸಂವಿಧಾನ ವಿರೋಧಿ ಹೇಳಿಕೆ ಎಂದು ಆರೋಪಿಸಿದೆ. ಗೆಹ್ಲೋಟ್ ಅವರಿಂದ ಕ್ಷಮಾಪಣೆಗೆ ಆಗ್ರಹಿಸಿರುವ ಪಕ್ಷ, ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

English summary
Rajasthan Chief Minister in a controversial statement said that, Ram Nath Kovind was made President by BJP to country to balance caste equation ahead of the assembly election in Gujarat in 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X