ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಪಾನ್ ಮಸಾಲ ನಿಷೇಧ; ಕರ್ನಾಟಕದ ರೈತರಿಗೆ ಆತಂಕ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04 : ರಾಜಸ್ಥಾನ ಸರ್ಕಾರ ಪಾನ್ ಮಸಾಲಾ, ಸುವಾಸಿತ ಸಿಹಿ ಅಡಿಕೆ ಪುಡಿ ಉತ್ಪಾದನೆಯನ್ನು ನಿಷೇಧಿಸಿದೆ. ಕರ್ನಾಟಕದ ಅಡಿಕೆ ಬೆಳೆಗಾರರ ಮೇಲೆ ಇದು ಪ್ರಭಾವ ಬೀರುವ ಸಾಧ್ಯತೆ ಇದೆ.

ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಶೇ 40 ರಿಂದ 50 ರಷ್ಟು ಅಡಿಕೆ ಉತ್ಪಾದನೆಯಾಗುತ್ತದೆ. ರಾಜಸ್ಥಾನದಲ್ಲಿನ ನಿಷೇಧದಿಂದಾಗಿ ರಾಜ್ಯದ ಅಡಿಕೆಗೆ ಬೇಡಿಕೆ ತಗ್ಗಲಿದ್ದು, ದರ ಕುಸಿಯುವ ಆತಂಕ ಎದುರಾಗಿದೆ.

 ಅಡಿಕೆ ಕುರಿತ ಅಫಿಡವಿಟ್ ಹಿಂಪಡೆಯಲು ಬಿಜೆಪಿ ಸಂಸದರ ನಿಯೋಗ ಮನವಿ ಅಡಿಕೆ ಕುರಿತ ಅಫಿಡವಿಟ್ ಹಿಂಪಡೆಯಲು ಬಿಜೆಪಿ ಸಂಸದರ ನಿಯೋಗ ಮನವಿ

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ಪಾದನೆಯಾಗುವ ಅಡಿಕೆಗೆ ಉತ್ತರ ಭಾರತದ ಕಡೆಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಿದ್ದು, ರೈತರಿಗೂ ಉತ್ತಮ ದರ ಸಿಗುತ್ತಿದೆ. ಈಗ ಪಾನ್ ಮಸಾಲಾ ನಿಷೇಧದಿಂದಾಗಿ ದರ ಕಡಿಮೆಯಾಗುವ ಆತಂಕ ಎದುರಾಗಿದೆ.

 ಆನಂದ ಮಹೀಂದ್ರಾ ಆಕರ್ಷಿಸಿದ ಅಡಿಕೆ ಮರವೇರುವ ಬೈಕ್ ಆನಂದ ಮಹೀಂದ್ರಾ ಆಕರ್ಷಿಸಿದ ಅಡಿಕೆ ಮರವೇರುವ ಬೈಕ್

Rajasthan Banned Sale Of Pan Masala

ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ (ಮ್ಯಾಮ್ ಕೋಸ್) ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಸುವಾಸಿತ ಸಿಹಿ ಅಡಿಕೆ ಪುಡಿ ಉತ್ಪಾದನೆ ನಿಷೇಧದಿಂದ ಮಲೆನಾಡು ಭಾಗದ ರೈತರ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ' ಎಂದು ಹೇಳಿದೆ.

ಅಡಿಕೆ ಬೆಳೆಗೆ ಕೊಳೆರೋಗ, ಆತಂಕದಲ್ಲಿ ಬೆಳೆಗಾರರು ಅಡಿಕೆ ಬೆಳೆಗೆ ಕೊಳೆರೋಗ, ಆತಂಕದಲ್ಲಿ ಬೆಳೆಗಾರರು

'ರಾಜಸ್ಥಾನಕ್ಕೆ ಕೆಂಪು ಬಣ್ಣದ ಅಡಿಕೆ ಮಾತ್ರ ಹೆಚ್ಚಾಗಿ ರವಾನೆಯಾಗುತ್ತದೆ. ಸುಪಾರಿ ನಿಷೇಧದಿಂದಾಗಿ ಕರಾವಳಿ ಭಾಗದ ರೈತರ ಮೇಲೆ ಹೆಚ್ಚು ಪ್ರಭಾವ ಉಂಟಾಗುವುದಿಲ್ಲ' ಎಂದು ಕ್ಯಾಂಪ್ಕೋ ತಿಳಿಸಿದೆ. ಅಡಿಕೆ ಕೊಳ್ಳುವ ಮಧ್ಯವರ್ತಿಗಳು ಇದನ್ನು ಮುಂದಿಟ್ಟುಕೊಂಡು ಬೆಲೆ ಕಡಿಮೆ ಮಾಡಲು ಪ್ರಯತ್ನ ನಡೆಸುವ ಸಾಧ್ಯತೆ ಇದೆ.

ರಾಜಸ್ಥಾನಕ್ಕಿಂತ ಮೊದಲು ಬಿಹಾರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪಾನ್ ಮಸಾಲಾ ಮತ್ತು ಸುವಾಸಿತ ಅಡಿಕೆ ಪುಡಿಯನ್ನು ನಿಷೇಧಿಸಿದ್ದವು.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಈ ವರ್ಷ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಬಂದಿದೆ. ಕೈಗೆ ಸಿಗುವ ಫಸಲಿಗೂ ಕಡಿಮೆ ಬೆಲೆ ಸಿಕ್ಕರೆ ಎಂದು ಬೆಳೆಗಾರರು ಆತಂಕಗೊಂಡಿದ್ದಾರೆ.

English summary
Rajasthan government banned the manufacture and sale of pan masala and flavoured supari. Middlemen may try to procure arecanut from farmers at a lower price in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X