ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಶಾಸಕರಿಗೆ ಪ್ರೇತ ಕಾಟ, ವಿಧಾನಸಭೆಯಲ್ಲಿ ಹವನಕ್ಕೆ ಬೇಡಿಕೆ

By Sachhidananda Acharya
|
Google Oneindia Kannada News

ಜೈಪುರ, ಫೆಬ್ರವರಿ 23: ರಾಜಸ್ಥಾನದ ಶಾಸಕರು ಇಲ್ಲಿನ ಸಚಿವಾಲಯದಲ್ಲಿ ಭೂತದ ಕಾಟವಿದೆ ಎಂದು ಹೆದರಿಕೊಂಡಿದ್ದಾರೆ. ಇದಕ್ಕೆ ಪರಿಹಾರವಾಗಿ ಹವನ ನಡೆಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಯ ಇಬ್ಬರು ಶಾಸಕರು ಇತ್ತೀಚೆಗೆ ಸಾವನ್ನಪ್ಪಿದ್ದು ಇದರಿಂದ ಹೆದರಿಕೊಂಡಿರುವ ಶಾಸಕರು ಈ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ನಾಗ್ಪುರ್ ಕ್ಷೇತ್ರದ ಬಿಜೆಪಿ ಶಾಸಕ ಹಬಿಬುರ್ ರೆಹ್ಮಾನ್ ತಾವು ಮುಖ್ಯಮಂತ್ರಿ ವಸುಂಧರಾ ರಾಜೆಯವರಿಗೆ ಹೋಮ ನಡೆಸಲು ಸಲಹೆ ನೀಡಿದ್ದೇನೆ. ಈ ಮೂಲಕ ಕಟ್ಟಡದ ಸುತ್ತ ಮುತ್ತ ಶುದ್ಧವಾಗಿಡಲು ಸಲಹೆ ನೀಡಿರುವುದಾಗಿ ಹೇಳಿದ್ದಾರೆ.

ಇವತ್ತು ಸಚಿವಾಲಯ ಕಟ್ಟಿರುವ ಜಾಗ ಹಿಂದೆ ಸ್ವಶಾನವಾಗಿತ್ತು. 2001ರಲ್ಲಿ ಇದನ್ನು ನಿರ್ಮಾಣ ಮಾಡಲಾಯಿತು. ಇಲ್ಲಿ ಹೂತಿರುವ ಹೆಣಗಳೇ ಇಲ್ಲಿನ ಕಟ್ಟಡದಲ್ಲಿ ಪ್ರೇತಗಳಾಗಿ ಓಡಾಡುತ್ತಿವೆ ಎಂದು ಅವರು ಹೇಳಿದ್ದಾರೆ. ಇನ್ನು ವಿಧಾನಸಭೆ ಮುಖ್ಯ ಸಚೇತಕರಾದ ಕುಲುಲಾಲ್ ಗುರ್ಜಾರ್ ಕೂಡ ಶಾಸಕರು ಭಯದಲ್ಲಿದ್ದಾರೆ ಎಂದು ಹೇಳಿದ್ದಾರೆ.

Rajastan MLAs in 'evil souls' fear, want to conduct 'havan' in Secretariat

ಬುಧವಾರ ನಥಡ್ವಾರಾ ಶಾಸಕ ಕಲ್ಯಾಣ್ ಸಿಂಗ್ ಸಾವನ್ನಪ್ಪಿದ್ದರು. ಕಳೆದ ವರ್ಷ ಕಿರ್ಕಿ ಕುಮಾರಿ ಎಂಬ ಶಾಸಕರು ಹಂದಿ ಜ್ವರದಿಂದ ಸಾವನ್ನಪ್ಪಿದ್ದರು. ಹೀಗಾಗಿ ತಾವೂ ಕಟ್ಟಡದಲ್ಲಿ ಯಜ್ಞ ಯಾಗಾದಿ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡಲು ಸಲಹೆ ನೀಡಿರುವುದಾಗಿ ಗುರ್ಜಾರ್ ಹೇಳಿದ್ದಾರೆ.

ಕಟ್ಟಡದಲಿ ಯಜ್ಞ ಮತ್ತು ಹವನ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿ ವಸುಂದರಾ ರಾಜೇ ಮ್ತತು ಸ್ಪೀಕರ್ ವಿವೇಚನೆಗೆ ಬಿಡಲಾಗಿದೆ.

ಇದೇ ಅಭಿಪ್ರಾಯವನ್ನು ಕರ್ನಾಟಕದ ಶಾಸಕರು ಹೇಳಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಒಮ್ಮೆ ಊಹಿಸಿಕೊಳ್ಳಿ.

English summary
The Rajasthan state MLAs fear that the secretariat building has "negative energies and evil souls" and demanded a 'havan' ceremony to get rid of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X