ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಿರುಗಾಳಿಗೆ ಬಿಜೆಪಿ ಧೂಳೀಪಟ

By Sachhidananda Acharya
|
Google Oneindia Kannada News

ಜೈಪುರ, ಫೆಬ್ರವರಿ 1: ರಾಜಸ್ಥಾನದ ಎರಡು ಲೋಕಸಭೆ ಸ್ಥಾನಗಳು ಮತ್ತು ಒಂದು ವಿಧಾನಸಭೆ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಮೋಘ ಜಯ ದಾಖಲಿಸಿದೆ. ಮೂರೂ ಸ್ಥಾನಗಳಲ್ಲಿ ಸೋತು ಆಡಳಿತರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಅಲ್ವಾರ್ ಮತ್ತು ಅಜ್ಮೇರ್ ಲೋಕಸಭೆ ಸ್ಥಾನ ಮತ್ತು ಮಂಡಲ್ ಗರ್ ವಿಧಾನಸಭೆ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯ ದಾಖಲಿಸಿದೆ.

ಕಾಂಗ್ರೆಸ್ ನ ಕರಣ್ ಸಿಂಗ್ ಅಲ್ವಾರ್ ಲೋಕಸಭೆ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಅವರು ಬಿಜೆಪಿಯ ಜಸ್ವಂತ್ ಯಾದವ್ ರನ್ನು 1,56,319 ಮತಗಳ ಅಂತರದಿಂದ ಸೋಲಿಸಿದ್ದಾರೆ.

Rajastan by-poll: Congress wins both lok sabha seats and assembly seat

ಇನ್ನು ಮಂಡಲ್ ಗರ್ ವಿಧಾನಸಭೆ ಸ್ಥಾನವನ್ನೂ ಕಾಂಗ್ರೆಸ್ ಗೆದ್ದುಕೊಂಡಿದ್ದು ಇಲ್ಲಿ ವಿವೇಕ್ ಧಕಡ್ ಜಯ ಸಾಧಿಸಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಶಕ್ತಿ ಸಿಂಗ್ ಹಡರನ್ನು 12,976 ಮತಗಳಿಂದ ಸೋಲಿಸಿದ್ದಾರೆ. ಧಕಡ್ 70,146 ಮತಗಳನ್ನು ಪಡೆದರೆ ಬಿಜೆಪಿಯ ಹಡ 57,170 ಮತಗಳನ್ನು ಪಡೆಯಲಷ್ಟೇ ಶಕ್ತವಾಗಿದ್ದಾರೆ.

ಇನ್ನು ಅಜ್ಮೇರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ನ ರಘು ಶರ್ಮ ಬಿಜೆಪಿಯ ರಾಮ್ ಸ್ವರೂಪ್ ಲಂಬಾರನ್ನು ಸೋಲಿಸಿದ್ದಾರೆ.

ರಾಜಸ್ಥಾನದಲ್ಲಿ ಇದೇ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಗೆಲುವು ಕಾಂಗ್ರೆಸ್ ಗೆ ಭಾರೀ ರಣೋತ್ಸಾಹ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನ ಗೋವಿಂದ್ ದೋತಸಾರ, "ಉಪಚುನಾವಣೆ ಮುಂಬರಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದೆ. ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಕಾಂಗ್ರೆಸ್ ಎರಡು ಲೋಕಸಭೆ ಸ್ಥಾನಗಳನ್ನು ಮತ್ತು ಒಂದು ವಿಧಾನಸಭೆ ಸ್ಥಾನವನ್ನು ಗೆದ್ದುಕೊಂಡಿದ್ದು ಮಾತ್ರವಲ್ಲ 17 ವಿಧಾನಸಭೆ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ," ಎಂದು ಹೇಳಿದ್ದಾರೆ.

ಕಾಂಗ್ರೆಸ್ ಗೆಲುವಿನಿಂದ ಖುಷಿಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಕಾಂಗ್ರೆಸ್ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. "ವೆಲ್ ಡನ್ ರಾಜಸ್ಥಾನ ಕಾಂಗ್ರೆಸ್! ನಿಮ್ಮೆಲ್ಲರ ಬಗ್ಗೆ ಹೆಮ್ಮೆಯಾಗುತ್ತಿದೆ. ರಾಜಸ್ಥಾನದ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ," ಎಂದು ಹೇಳಿದ್ದಾರೆ.

English summary
Mandalgarh assembly seat by-poll: Ajmer Lok Sabha seat by-poll: Alwar Lok Sabha seat by-poll: Congress (TMC) candidate wins in all the three constutuencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X