ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತಸಿಕ್ತ ಶವದೆದುರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೇ? ಇದೇನಾ ಮಾನವೀಯತೆ?!

|
Google Oneindia Kannada News

ಬಾರ್ಮೆರ್(ರಾಜಸ್ಥಾನ), ಜುಲೈ 11: ರಸ್ತೆ ಅಪಘಾತದಿಂದ ಮೂವರು ವಿಲವಿಲ ಒದ್ದಾಡುತ್ತಿದ್ದರೆ ನೆರೆದಿದ್ದ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡ ಘಟನೆ ರಾಜಸ್ಥಾನದ ಬಲ್ಮೇರ್ ಎಂಬಲ್ಲಿ ನಡೆದಿದೆ.

ಈ ಘಟನೆ ನಡೆದಿದ್ದು ನಿನ್ನೆ(ಜು.11). ಅಪಘಾತಕ್ಕೀಡಾಗಿ ಮೂವರು ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ದಯನೀಯ ಸ್ಥಿತಿಯಲ್ಲಿ ಬಿದ್ದಿದ್ದರು. ರಸ್ತೆಯಲ್ಲಿದ್ದ ಹಲವರು ಅವರಿಗೆ ಸಹಾಯ ಮಾಡಿದ್ದರೆ ಬದುಕುತ್ತಿದ್ದರೋ ಏನೋ! ಆದರೆ ಅವರೆಲ್ಲ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು!

ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು

ರಸ್ತೆ ಅಪಘಾತದಲ್ಲಿ ಯಾರೇ ಗಾಯಗೊಂಡು ಒದ್ದಾಡುತ್ತಿದ್ದರೂ ಸಾರ್ವಜನಿಕರು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಅಂಬಯಲೆನ್ಸ್ ಗೆ ಮತ್ತು ಪೊಲೀಸರಿಗೆ ಕರೆ ಮಾಡಬೇಕು ಎಂದು ಎಷ್ಟು ಬಾರಿ ಹೇಳಿದರೂ ಜನರು ಈ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಈ ಕುರಿತು ಅರಿವು ಮೂಡಿಸುವ ಹತ್ತು ಹಲವು ಕಾರ್ಯಕ್ರಮಗಳು ದಿನೇ ದಿನೇ ನಡೆಯುತ್ತಲೇ ಇವೆ.

ಆದರೂ ಅಪಘಾತದಂಥ ಆ ಹೃದಯವಿದ್ರಾವಕ ಸ್ಥಿತಿಯಲ್ಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆಸೆಗೆ ಏನೆನ್ನಬೇಕು?

2016 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಹರೀಶ್ ಎಂಬ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರಿದ್ದ ಬೈಕಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅವರ ಕಾಲು ಕತ್ತರಿಸಿ ಹೋಗಿತ್ತು. ದಯನೀಯ ಸ್ಥಿತಿಯಲ್ಲಿ ಬಿದ್ದು, ಚೀರುತ್ತಿದ್ದ ಅವರನ್ನು ಕಾಪಾಡುವ ಬದಲು ಜನರು ವಿಡಿಯೋ ಚಿತ್ರೀಕರಿಸಿದ್ದರು.

Rajashtan: People clicking selfie in an accident spot where 3 people killed

ಈ ಘಟನೆಯ ನಂತರ ಕರ್ನಾಟಕ ಸರ್ಕಾರ ಅವರದೇ ಹೆಸರಿನಲ್ಲಿ ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಎಂಬ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿಯಲ್ಲಿ ರಸ್ತೆ ಅಪಘಾತಕ್ಕೀಡಾದ ವ್ಯಕ್ತಿಗೆ ಯಾವುದೇ ಆಸ್ಪತ್ರೆಯಲ್ಲಿ 25,000 ರೂ ವರೆಗೆ ಕ್ಯಾಶ್ ಲೆಸ್ ಚಿಕಿತ್ಸೆ ನೀಡಬೇಕಾಗುತ್ತದೆ.

English summary
Barmer in Rajasthan: Three people who met with a road accident, succumbed to injuries even as onlookers clicked pictures and selfies instead of helping them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X