ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಟದಲ್ಲಿ ವಿಜ್ಞಾನಿ: ಪತ್ನಿ ಮೇಲೆ ಪತಿ ಅತ್ಯಾಚಾರ

By Mahesh
|
Google Oneindia Kannada News

ರಾಯಪುರ, ಸೆ.23: ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಆರ್ಗನೈಜೇಷನ್(ಡಿಆರ್ ಡಿಒ) ವಿಜ್ಞಾನಿ ತಪಸ್ ಕುಮಾರ್ ಮುಜುಂದಾರ್ ಅವರ ವಿರುದ್ಧ ಅತ್ಯಾಚಾರ ಆರೋಪ ಹೊರೆಸಿ ದೂರು ದಾಖಲಾಗಿದೆ. ದೂರು ನೀಡಿದವರು ತಪಸ್ ಕುಮಾರ್ ಅವರ ಸಂತ್ರಸ್ತ ಪತ್ನಿ ಎಂಬುದು ವಿಶೇಷ.

ಮುಜುಂದಾರ್ ಅವರ ಪತ್ನಿ ನೀಡಿರುವ ಹೇಳಿಕೆಯಂತೆ, ತಪಸ್ ಅವರನ್ನು 2011ರಲ್ಲಿ ಮದುವೆಯಾದರಂತೆ. ಆದರೆ, ಇದಕ್ಕೂ ಮುನ್ನ ತಪಸ್ ಗೆ ಮದುವೆಯಾಗಿದ್ದರೂ ವಿಷಯ ಮುಚ್ಚಿಟ್ಟಿದ್ದರು. ನಾನು ರಾಯಪುರದಲ್ಲಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದೇನೆ.

ನಮ್ಮಿಬ್ಬರ ನಡುವೆ ಕಾರ್ಯಕ್ರಮವೊಂದರಲ್ಲಿ ಗೆಳೆತನ ಮೂಡಿತು. ಗೆಳೆತನ ಪ್ರೇಮವಾಗುವ ಹೊತ್ತಿಗೆ ಆತನಿಗೆ ಮದುವೆಯಾಗುವುದು ಗೊತ್ತಾಯಿತು. ಆದರೆ, ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡಿದ್ದೇನೆ.ನಮ್ಮ ಮದುವೆಗೆ ಯಾವುದೇ ಅಡ್ಡಿಯಿಲ್ಲ ಎಂದು ಸೂಕ್ತ ದಾಖಲೆಗಳನ್ನು ತಪಸ್ ತೋರಿಸಿದರು.

Raipur: Wife alleges that scientist husband raped her

ನಾನು ಅವರನ್ನು ನಂಬಿಬಿಟ್ಟೆ. ಆದರೆ, ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ. ನನಗೆ ತೋರಿಸಿದ ದಾಖಲೆಗಳೆಲ್ಲ ಸುಳ್ಳು ಎಂದು ನನಗೆ ತಿಳಿಯಿತು. ಆದರೆ, ಈ ವೇಳೆಗಾಗಲೇ ನನ್ನ ನಂಬಿಕೆಯನ್ನು ಆತ ದುರುಪಯೋಗ ಪಡಿಸಿಕೊಂಡಿದ್ದ. ನನ್ನ ಮೇಲೆ ಬಲಾತ್ಕಾರ ಎಸಗಿದ್ದ. ಮದುವೆ ಎಂಬುದು ಕೇವಲ ಆಚರಣೆಯಾಗಿ ಉಳಿಯಿತು. ನನ್ನ ನಂಬಿಕೆ ನಾಶವಾಯಿತು ಎಂದು ತಪಸ್ ಪತ್ನಿ ದೂರಿನಲ್ಲಿ ಹೇಳಿದ್ದಾರೆ.

ಡಿಆರ್ ಡಿಒ ಸಂಸ್ಥೆಯ ಆಹಾರ ಸಂಶೋಧನಾ ಪ್ರಯೋಗಲಯದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ತಪಸ್ ಕುಮಾರ್ ಮುಜುಂದಾರ್ ಮೇಲೆ ದೂರು ದಾಖಲಿಸಲಾಗಿದ್ದು, ಅವರ ಪತ್ನಿಯೇ ದೂರು ನೀಡಿದ್ದಾರೆ ಎಂದು ಸೂಪರಿಂಟೆಂಡ್ ಆಫ್ ಪೊಲೀಸ್ ಒಪಿ ಪಾಲ್ ಹೇಳಿದ್ದಾರೆ.

ವಿಜ್ಞಾನಿ ತಪಸ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(ಅತ್ಯಾಚಾರ), 419, 496 ಹಾಗೂ 498 (A) ಅನ್ವಯ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಡಿಆರ್ ಡಿಒ ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಒಪಿ ಪಾಲ್ ಹೇಳಿದ್ದಾರೆ.

English summary
Raipur: A Defence Research and Development Organisation (DRDO) scientist, Tapas Kumar Majumdar was booked on Sunday for allegedly raping his wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X