ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಪುರ ಭೂ ಸ್ವಾಧೀನ ಪ್ರಕರಣ: ಏ.27ರಂದು ಛತ್ತೀಸ್‌ಗಢಕ್ಕೆ ಟಿಕಾಯತ್ ಭೇಟಿ

|
Google Oneindia Kannada News

ರಾಯ್ಪುರ್ ಏಪ್ರಿಲ್ 24: ಛತ್ತೀಸ್‌ಗಢದ ಹೊಸ ರಾಜಧಾನಿ ನವ ರಾಯ್‌ಪುರವನ್ನು ಸ್ಥಾಪಿಸುವಾಗ ಸರ್ಕಾರವು ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಯುತ ಬೆಲೆ ನೀಡುವಂತೆ ಸುಮಾರು ಎರಡು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಏಪ್ರಿಲ್ 27 ಮತ್ತು 28 ರಂದು ಭಾಗಿಯಾಗುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, 'ಛತ್ತೀಸ್ ಗಢದ ನವ ರಾಯಪುರದಲ್ಲಿ ರೈತರ ಧರಣಿ ಬಹಳ ದಿನಗಳಿಂದ ನಡೆಯುತ್ತಿದೆ. ಛತ್ತೀಸ್‌ಗಢ ಸರ್ಕಾರದೊಂದಿಗೂ ರೈತರು ಚರ್ಚಿಸಿದ್ದಾರೆ. ನಾನು ಏಪ್ರಿಲ್ 27 ಮತ್ತು 28 ರಂದು ರಾಯಪುರ ತಲುಪಲಿದ್ದೇನೆ. ಅಲ್ಲಿ ನಾನು ಎರಡು ದಿನಗಳ ಕಾಲ ರೈತರ ಧರಣಿಯಲ್ಲಿ ಕುಳಿತುಕೊಳ್ಳುತ್ತೇನೆ. ಪೊಲೀಸ್ ಆಡಳಿತದ ಮೇಲೆ ಒತ್ತಡ ಹೇರಿ ರೈತರಿಗೆ ಕಿರುಕುಳ ನೀಡದಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ' ಎಂದು ರಾಕೇಶ್ ಟಿಕಾಯತ್ ಅವರು ಹೇಳಿದ್ದಾರೆ.

ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಚಳವಳಿ: ರಾಕೇಶ್ ಟಿಕಾಯತ್ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಚಳವಳಿ: ರಾಕೇಶ್ ಟಿಕಾಯತ್

ಛತ್ತೀಸ್‌ಗಢದಲ್ಲಿ ವಾಸ್ತವ್ಯ ಹೂಡಿರುವ ಸಂದರ್ಭದಲ್ಲಿ ರೈತರು ಮತ್ತು ಸರ್ಕಾರದೊಂದಿಗೆ ಚರ್ಚಿಸುವುದಾಗಿ ರಾಕೇಶ್ ಟಿಕಾಯತ್ ಹೇಳಿದ್ದಾರೆ. ರೈತರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಅವರು, ರೈತರು ಒಟ್ಟಾಗಿ ಕುಳಿತು ಶಾಂತಿಯುತವಾಗಿ ಸರ್ಕಾರದ ಜೊತೆ ಮಾತುಕತೆಗೆ ದಾರಿ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಏನಿದು ಪ್ರತಿಭಟನೆ?

ಛತ್ತೀಸ್‌ಗಢದ ಹೊಸ ರಾಜಧಾನಿ ನಯಾ ರಾಯ್‌ಪುರವನ್ನು ಸ್ಥಾಪಿಸುವಾಗ ಸರ್ಕಾರವು ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಯುತ ಬೆಲೆ ನೀಡುವಂತೆ ಸುಮಾರು ಎರಡು ತಿಂಗಳಿನಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ಛತ್ತೀಸ್‌ಗಢದ ಹೊಸ ರಾಜಧಾನಿ ನಯಾ ರಾಯ್‌ಪುರವನ್ನು ಸ್ಥಾಪಿಸುವಾಗ ಸರ್ಕಾರವು ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಯುತ ಬೆಲೆ ನೀಡುವಂತೆ ಸುಮಾರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ನೂರಾರು ರೈತರಲ್ಲಿ 65 ವರ್ಷದ ಸಿಯಾರಾಮ್ ಪಟೇಲ್ ಕೂಡ ಒಬ್ಬರು. ಈ ರೈತರಿಗೆ ತಮ್ಮ ಜಮೀನುಗಳಿಗೆ ಬದಲಾಗಿ ಉದ್ಯೋಗದ ಭರವಸೆಯನ್ನೂ ನೀಡಲಾಗಿತ್ತು. ಆದರೆ ಉದ್ಯೋಗ ನೀಡಿರಲಿಲ್ಲ. ಹೀಗಾಗಿ ಪ್ರತಿಭಟನೆ ಚುರುಕುಗೊಳಿಸಲಾಗಿತ್ತು.

Raipur land acquisition case: Tikayat visits Chhattisgarh on April 27

ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ವಿಫಲವಾದ ನಂತರ, ಪ್ರತಿಭಟನಾ ನಿರತ ರೈತರು ನಯಾ ರಾಯ್‌ಪುರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ಹೊರಗೆ ನೆಲೆ ಸ್ಥಾಪಿಸಿದ್ದರು. ಗುರುವಾರ ಆ ಪ್ರದೇಶದಲ್ಲಿ ಸೆಕ್ಷನ್ 144 ಹೇರಿದ ನಂತರ ಪ್ರತಿಭಟನಾ ನಿರತ ರೈತರಿಗೆ ಕಚೇರಿ ಸಮೀಪಿಸಲು ಅವಕಾಶ ನೀಡಲಿಲ್ಲ. ಪೊಲೀಸರು ಮತ್ತು ಬ್ಯಾರಿಕೇಡ್‌ಗಳು ನಮ್ಮ ಮೆರವಣಿಗೆಯನ್ನು ನಿಲ್ಲಿಸಿದ ನಂತರ ಪ್ರತಿಭಟನೆಯಲ್ಲಿ ಕುಳಿತ ಸಿಯಾರಾಮ್ ಸಂಜೆ 4 ಗಂಟೆ ಸುಮಾರಿಗೆ ಕುಸಿದುಬಿದ್ದರು. ಸಮೀಪದಲ್ಲಿ ನೆಲೆಸಿದ್ದ ವೈದ್ಯಕೀಯ ತಂಡವು ಆತನನ್ನು ಪರೀಕ್ಷಿಸಿ ಹತ್ತಿರದ ಬಾಲ್ಕೊ ಟ್ರಾಮಾ ಸೆಂಟರ್‌ಗೆ ಶಿಫಾರಸು ಮಾಡಿತು. ಹೃದಯಾಘಾತದಿಂದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರು ಸಿಯಾರಾಮ್ ಪಟೇಲ್ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Raipur land acquisition case: Tikayat visits Chhattisgarh on April 27

ಪ್ರತಿಭಟನಾ ನಿರತ ರೈತರ ಪ್ರಕಾರ, ಸೂರ್ಯನ ಕೆಳಗೆ ಕುಳಿತಿದ್ದ ಪಟೇಲ್ ಅವರು ತಮ್ಮ ಬಾಕಿಯನ್ನು ಪಡೆಯದೆ ಒತ್ತಡಕ್ಕೊಳಗಾಗಿದ್ದರು.''ಇದು ಸಹಜ ಸಾವಲ್ಲ, ಇದು ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು. ಭೂಮಿಯನ್ನು ನಮ್ಮಿಂದ ವಶಪಡಿಸಿಕೊಳ್ಳುವಾಗ ನಮಗೆ ಭರವಸೆ ನೀಡಿದ ಹಣ ಮತ್ತು ಉದ್ಯೋಗಕ್ಕಾಗಿ ನಾವು ಒತ್ತಾಯಿಸುತ್ತಿದ್ದೇವೆ ಎಂದು ಪ್ರತಿಭಟನಾನಿರತ ರೈತರಲ್ಲಿ ಒಬ್ಬರಾ ಸಿಯಾರಾಮ್ ಹೇಳಿದ್ದರು" ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಗಿರ್ಧಾರಿ ಪಟೇಲ್ ಹೇಳಿದರು.

ಸರ್ಕಾರವು ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಯುತ ಬೆಲೆ ನೀಡುವಂತೆ ರೈತರ ಆಂದೋಲನದ ಸಂದರ್ಭದಲ್ಲಿ ಮಾರ್ಚ್ 11 ರಂದು ರೈತ ಸಿಯಾರಾಮ್ ಪಟೇಲ್ ಸಾವನ್ನಪ್ಪಿದ್ದಾರೆ. ಹೀಗಾಗಿ ಸಿಯಾರಾಮ್ ಪಟೇಲ್ ಸಾವಿನ ತನಿಖೆಗಾಗಿ ಸರ್ಕಾರವು ಮ್ಯಾಜಿಸ್ಟ್ರೇಟ್ ವಿಚಾರಣಾ ಸಮಿತಿಯನ್ನು ರಚಿಸಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ತನಿಖಾ ಸಮಿತಿಯ ಧರಣಿ ನಿರತ ರೈತರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪಿಸಲಾಗುತ್ತಿದೆ. ಅವರ ಬೇಡಿಕೆಗಳಿಗೆ ಸರಕಾರ ಕಿಂಚಿತ್ತೂ ಗಮನ ನೀಡುತ್ತಿಲ್ಲ. ರೈತರ ಬೇಡಿಕೆಗಳನ್ನು ಕಡೆಗಣಿಸಲಾಗುತ್ತಿದೆ. ಚಳವಳಿಯನ್ನು ಹತ್ತಿಕ್ಕಲು ಇಷ್ಟೆಲ್ಲ ಷಡ್ಯಂತ್ರ ನಡೆಸಲಾಗುತ್ತಿದೆ. ಆಂದೋಲನದ ಮೂಲವನ್ನು ಕಡೆಗಣಿಸಿ ಸಂಘಟನಾ ಸಮಿತಿಯ ಮೇಲೆ ಈ ಆರೋಪವನ್ನು ಮಾಡಿ ತನಿಖಾ ಸಮಿತಿಯ ನೆರವು ಪಡೆದು ಸಂತ್ರಸ್ತ ರೈತರ ಚಳವಳಿಯನ್ನು ಹತ್ತಿಕ್ಕಲು ಈ ಸರಕಾರ ಮುಂದಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

English summary
Farmer leader Rakesh Tikayat has said that he will be involved in the protests that have been going on for nearly two months on April 27 and 28 to pay a fair price for the land acquired by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X