ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುರುಕುಗೊಂಡ ಮುಂಗಾರು, ಎಲ್ಲೆಲ್ಲಿ ಮಳೆಯಾಗ್ತಿದೆ?

|
Google Oneindia Kannada News

ನವದೆಹಲಿ, ಜೂನ್ 23: ಮುಂಗಾರು ನಿಧಾನವಾಗಿ ದೇಶವನ್ನು ಆವರಿಸಿಕೊಳ್ಳುತ್ತಿದೆ. ಸಾಕಷ್ಟು ಕಡೆ ಹೆಚ್ಚು ಮಳೆಯಾಗುತ್ತಿದೆ.

ಕರ್ನಾಟಕದ ಕರಾವಳಿ ಭಾಗ ಹಾಗೂ ಮಲೆನಾಡಿನಲ್ಲಿ ಮಳೆ ಆರಂಭವಾಗಿದೆ. ಕಳೆದ ಒಂದೆರೆಡು ದಿನಗಳಿಂದ ಹೆಚ್ಚು ಮಳೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ಮೂರ್ನಾಲ್ಕು ದಿನ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್ ತಿಳಿಸಿದೆ.

ಕರಾವಳಿ, ಮಲೆನಾಡಿನಲ್ಲಿ ಐದು ದಿನ ಮಳೆ ಆರ್ಭಟ ಸಾಧ್ಯತೆ ಕರಾವಳಿ, ಮಲೆನಾಡಿನಲ್ಲಿ ಐದು ದಿನ ಮಳೆ ಆರ್ಭಟ ಸಾಧ್ಯತೆ

ಜೂನ್ 23ರ ಹೊತ್ತಿಗೆ ಇಡೀ ದೇಶವನ್ನೇ ಮುಂಗಾರು ಆವರಿಸಿಕೊಳ್ಳಲಿದೆ. ಚೆನ್ನೈನಲ್ಲಿ ಜಲಕ್ಷಾಮ ತಾಂಡವವಾಡುತ್ತಿತ್ತು, ಒಂದು ಹನಿ ನೀರು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಕೊಂಚ ನಿರಾಳವಾಗಿದೆ.

Rainiest Places in India

ಜೂನ್ 29ರ ಹೊತ್ತಿಗೆ ಇಡೀ ದೇಶವನ್ನೇ ಮುಂಗಾರು ಆಕ್ರಮಿಸಿಕೊಳ್ಳಲಿದೆ. ಜೂನ್ 22ರಂದು ಕೂಡ ಚೆನ್ನೈನಲ್ಲಿ ಮಳೆ ಮುಂದುವರೆಯಲಿದೆ. ಚೆನ್ನೈನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ.

2018ರಲ್ಲಿ ಶೇ.44ರಷ್ಟು ಮುಂಗಾರು ಮಳೆಯ ಕೊರತೆಯಾಗಿತ್ತು. ಈಗಿರುವ ಜಲಾಶಗಳಲ್ಲಿ ನೀರಿನ ಮಟ್ಟವು ತೀರಾ ಕಡಿಮೆ ಇದೆ. ಬಂಗಾಳಕೊಲ್ಲಿಯಲ್ಲಿ ಮುಂದಿನ ಒಂದೆರೆಡು ದಿನಗಳಲ್ಲಿ ವಾಯುಭಾರ ಕುಸಿತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇದರಿಂದ ಉತ್ತರಾಭಿಮುಖವಾಗಿ ಮುಂಗಾರು ಮಾರುತ ಚಲಿಸಬಹುದು. ಇದರ ಸೂಚನೆ ಎಂಬಂತೆ ಕರಾವಳಿಯಲ್ಲಿ ಗುರುವಾರ ಸ್ವಲ್ಪ ಮಳೆಯಾಗಿದೆ. ದೆಹಲಿಯ ಜನಕ್‌ಪುರಿಯಲ್ಲೂ ಈಗ ಮಳೆಯಾಗುತ್ತಿದೆ.

ಘಾಜಿಪುರ-ಉತ್ತರ ಪ್ರದೇಶ- 89 ಮಿ.ಮೀ
ಅಂಬಿಕಾಪುರ-ಛತ್ತೀಸ್‌ಗಢ-85ಮಿ.ಮೀ
ಬಹ್ರೇಚ್-ಉತ್ತರ ಪ್ರದೇಶ-59ಮಿ.ಮೀ
ಹೊನ್ನಾವರ-ಕರ್ನಾಟಕ-37 ಮಿ.ಮೀ
ಔರಂಗಾಬಾದ್-ಮಹಾರಾಷ್ಟ್ರ-36 ಮಿ.ಮೀ
ರತ್ನಗಿರಿ-ಮಹಾರಾಷ್ಟ್ರ-36 ಮಿ.ಮೀ
ವಲ್ಪರಾಯ್-ತಮಿಳುನಾಡು-34 ಮಿ.ಮೀ
ಜಗ್ದಲ್‌ಪುರ-ಛತ್ತೀಸ್‌ಗಢ-32 ಮಿ.ಮೀ
ಕೊಚ್ಚಿ-ಕೇರಳ-31 ಮಿ.ಮೀ

English summary
Since the onset of Monsoon, good rains are going on over the coastal parts of Karnataka.With Monsoon making arrival over multiple parts of the country now multiple areas are witnessing good rains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X