• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬೈನಲ್ಲಿ ಭಾರಿ ಮಳೆ, ಪ್ರವಾಹ ಸ್ಥಿತಿ, ಆರೆಂಜ್ ಅಲರ್ಟ್

|

ನವದೆಹಲಿ, ಆಗಸ್ಟ್ 18: ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿದೆ.

ಪುಣೆ, ಸತಾರಾದಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಬೈ , ರಾಯ್‌ಗಢ, ಪಾಲ್ಘರ್ ನಲ್ಲಿ ಮಳೆಯಾಗಲಿದೆ. ಕಳೆದ 24 ಗಂಟೆಯಲ್ಲಿ 204.5 ಮಿ.ಮೀನಷ್ಟು ಮಳೆಯಾಗಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆ.21ರ ತನಕ ಮಳೆ

ಮಹಾರಾಷ್ಟ್ರ, ಕೊಲ್ಹಾಪುರ, ಸತಾರಾ, ಸಾಂಗ್ಲಿಯಲ್ಲಿ ಸೋಮವಾರದಿಂದ ಮಳೆ ಆರಂಭವಾಗಿದೆ. ಒಡಿಶಾ ಹಾಗೂ ತೆಲಂಗಾಣದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಮೂರು ದಿನಗಳ ಕಾಲ ದೆಹಲಿ, ಗುರುಗ್ರಾಮ್, ಆಗ್ರಾ, ಬರ್ಸಾನಾ, ಹಸ್ತಿನಾಪುರ, ಖಟೋಲಿ, ಯಮುನಾನಗರ, ಕುರುಕ್ಷೇತ್ರ, ಬಿಜ್ನೋರ್, ಚಂದ್‌ಪುರ್ ದಲ್ಲಿ ಮಳೆಯಾಗಲಿದೆ.

ಸಾಂಗ್ಲಿಯಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಮಳೆಯಾಗಲಿದೆ. ಪುಣೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಾರಸ್‌ಗಾವ್, ಪನ್‌ಶೇಟ್ ಮಳೆಯಾಗಿದೆ. ಹಾಗೆಯೇ ಬಿಹಾರ, ಮತ್ತು ರಾಜಸ್ಥಾನದಲ್ಲೂ ಮಳೆ ಮುಂದುವರೆಯಲಿದೆ, ಈಗಾಗಲೇ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆ. 20ರವರೆಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೊಡಗು, ಹಾಸನ, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯಿಂದ ಆ. 20ರವರೆಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ನಿನ್ನೆಯಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ಮಳೆ ಮತ್ತು ಪ್ರವಾಹದಿಂದಾಗಿ ನಿನ್ನೆ ಒಂದೇ ದಿನ ಐವರು ಸಾವನ್ನಪ್ಪಿದ್ದಾರೆ.

ಇಂದು ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆ. 19ರ ಬಳಿಕ ಇಲ್ಲಿ ಮಳೆಯ ಪ್ರಮಾಣ ತಗ್ಗಲಿದೆ. ಒಟ್ಟಾರೆ ಆ. 21ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಪ್ರಮುಖವಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಇಂದು ಕೂಡ ಮಳೆ ಹೆಚ್ಚಳವಾಗಲಿದೆ.

English summary
he Indian Meteorological Department has predicted a high tide in Mumbai on Tuesday, August 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X