ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪರಿಯ ಜಿಟಿಜಿಟಿ ಮಳೆ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ!

|
Google Oneindia Kannada News

ಬೆಂಗಳೂರು, ನವೆಂಬರ್, 24: ಕೊಂಚ ತಣ್ಣಗಾಗಿದ್ದ ಮಳೆರಾಯ ಮತ್ತೆ ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಆರ್ಭಟಿಸತೊಡಗಿದ್ದಾನೆ. ಸೋಮವಾರ ರಾತ್ರಿಯಿಂದ ತಮಿಳುನಾಡಿನಾದ್ಯಂತ ಮಳೆ ಅಬ್ಬರಿಸುತ್ತಿದೆ.

ವಾಯುಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿಗೆ ತಟ್ಟುತ್ತಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ಕರವಾಳಿಯ ಕೆಲ ಭಾಗದಲ್ಲಿ ತುಂತುರು ಮಳೆಯಾಗಲಿದೆ. ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲೂ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಎಂ ಮೇತ್ರಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ತಮಿಳುನಾಡಿಗೆ ನೆರೆ ಪರಿಹಾರ ಸಂಬಂಧ 900 ಕೋಟಿ ರು. ಬಿಡುಗಡೆ ಮಾಡಿದೆ. ಇತ್ತ ಆಂಧ್ರದ ಹಲವೆಡೆ ಮಳೆ ಜೋರಾಗಿದ್ದು ತಿರುಪತಿ ತಿರುಮಲನ ದರ್ಶನಕ್ಕೆ ಯಾವ ತೊಂದರೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಭಾರೀ ಮಳೆಗೆ ತತ್ತರಿಸಿದ ಆಂಧ್ರದ ದೇಗುಲ ನಗರಗಳು]

rain

ಬೆಂಗಳೂರಲ್ಲೂ ಮಳೆ ಮುಂದುವರಿಯಲಿದೆ
ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಇನ್ನು ಎರಡು ದಿನ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಯುಭಾರ ಕುಸಿತದ ಪರಿಣಾಮ ಮೋಡ ಕವಿದ ವಾತಾವರಣ ಇರಲಿದೆ. ಜತೆಗೆ ಮಳೆಯಾಗುವ ನಿರೀಕ್ಷೆಯೂ ಇದೆ.['ರೋನು' ಅಬ್ಬರಕ್ಕೆ ರೋದಿಸುತ್ತಿರುವ ತಮಿಳುನಾಡು]

ಬೆಂಗಳೂರಿನಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಬನಶಂಕರಿ ಮೂರನೇ ಹಂತ, ಸರ್ಜಾಪುರ ರಸ್ತೆ ಅರಳೂರು, ಬಸವೇಶ್ವರನಗರ ನಟರಾಜ ಕಲ್ಯಾಣ ಮಂಟಪ ಮತ್ತು ಮೇಖ್ರಿ ವೃತ್ತದ ಬಳಿ ಮರ ಧರೆಗೆ ಉರುಳಿ ಸಂಚಾರ ಸಮಸ್ಯೆ ಉಂಟಾಗಿತ್ತು. ನಗರದ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಒಂದೆಡೆ ರಸ್ತೆ ಇಕ್ಕೆಲಗಳಲ್ಲಿ ತುಂಬಿಕೊಂಡಿರುವ ಕಸ, ಇನ್ನೊಂದೆಡೆ ಮಳೆ ನೀರು ವಾಹನ ಸವಾರರಿಗೆ ನರಕಯಾತನೆ ತಂದಿರಿಸಿದೆ.

ರಸ್ತೆ ಗುಂಡಿಗಳ ಸಾಮ್ರಾಜ್ಯದಿಂದ ಮುಕ್ತರಾಗಲು ನೀವು ಮುಂದಿನ ಮಾರ್ಚ್ ವರೆಗೂ ಕಾಯಬೇಕು! ಬೆಂಗಳೂರು ಅಭಿವೃದ್ಧಿ ಸಚಿವರು ಮಾರ್ಚ್ ತಿಂಗಳ ಗುರಿಯನ್ನು ಇಟ್ಟಿಕೊಂಡಿದ್ದಾರೆ. ಮೇಯರ್ ಮಂಜುನಾಥ ರೆಡ್ಡಿ ಅವರು ನೀಡಿದ ಆಶ್ವಾಸನೆಗಳು ಹಾಗೇ ಉಳಿದುಕೊಂಡಿವೆ. ಕಸ, ಹೊಂಡ ಬಿದ್ದ ರಸ್ತೆ, ಪ್ರತಿದಿನದ ಮಳೆಗೆ ಸಿಕ್ಕಿರುವ ಬೆಂಗಳೂರು ಗುಂಡಿ ಮುಕ್ತ ಹಣೆಪಟ್ಟಿ ಹೊತ್ತುಕೊಳ್ಳಲು ಇನ್ನೆಷ್ಟು ದಿನ ಕಾಯಬೇಕೋ??

English summary
Rains continued to batter the Tamil Nadu, even as rain water on Monday entered a Government Hospital in Chennai. Bengaluru will had generally cloudy sky. Rain would occur in many places of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X