ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಕೆಲವೇ ಗಂಟೆಗಳಲ್ಲಿ ದೇಶದ ವಿವಿಧೆಡೆ ಭಾರಿ ಮಳೆಯ ಮುನ್ಸೂಚನೆ

|
Google Oneindia Kannada News

ನವದೆಹಲಿ,ಫೆಬ್ರವರಿ 16: ಮುಂದಿನ ಕೆಲವೇ ಗಂಟೆಗಳಲ್ಲಿ ದೇಶದ ಸುಮಾರು 15 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಫೆಬ್ರವರಿ 16 ರಿಂದ 18ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ವಿದರ್ಭಾ,ಮರಾಠವಾಡ ಹಾಗೂ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಪುಣೆಯಲ್ಲಿ ಕೂಡ ವಾತಾವರಣ ಬದಲಾಗಿದ್ದು, ಗುರುವಾರ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಿ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಜನವರಿ ತಿಂಗಳ ಮಳೆ ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಜನವರಿ ತಿಂಗಳ ಮಳೆ

ಪುಣೆ,ನಾಸಿಕ್,ಬೀಡ್,ಜಲ್ನಾ,ಔರಂಗಾಬಾದ್,ಅಹಮದ್‌ನಗರ,ಧುಲೆ,ಜಲಗಾಂವ್‌ನಲ್ಲಿ ಫೆಬ್ರವರಿ 18 ರಂದು ಭಾರಿ ಮಳೆಯಾಗುವ ಸೂಚನೆ ಇದೆ. ಚಳಿಗಾಲ ರಾಗಿ,ಬಟಾಣಿ,ಸಾಸಿವೆ, ಗೋಧಿ ಬೆಳೆಯಲು ಉತ್ತಮ ಕಾಲವಾಗಿದೆ.

ಛತ್ತೀಸ್‌ಗಢದಲ್ಲೂ ಮಳೆ

ಛತ್ತೀಸ್‌ಗಢದಲ್ಲೂ ಮಳೆ

ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದ ಹಲವು ಕಡೆ ಮಳೆಯಾಗುವ ಮುನ್ಸೂಚನೆ ಇದೆ. ಮಧ್ಯ ಭಾರತದಲ್ಲಿ ಕಳೆದ ಸುಮಾರು 45 ದಿನಗಳಿಂದ ಒಣಹವೆ ಮುಂದುವರೆದಿತ್ತು. ಜನವರಿ 1 ರಿಂದ ಫೆಬ್ರವರಿ 15ರವರೆಗೆ ವಿದರ್ಭಾ,ಛತ್ತೀಸ್‌ಗಢ,ಮಧ್ಯಪ್ರದೇಶ,ಮರಾಠವಾಡ,ಜಾರ್ಖಂಡ್, ಒಡಿಶಾದಲ್ಲಿ 5 ಮಿ.ಮೀ ಮಳೆಯಾಗಿತ್ತು.

ಪುಣೆಯ ವಾತಾವರಣ ಹೇಗಿದೆ?

ಪುಣೆಯ ವಾತಾವರಣ ಹೇಗಿದೆ?

ಪುಣೆಯಲ್ಲಿ ಭಾನುವಾರ 13.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇಡೀ ರಾಜ್ಯದಲ್ಲೇ ಪುಣೆ ಅತ್ಯಂತ ತಂಪಾದ ನಗರವಾಗಿದೆ. ಒಂದೂವರೆ ತಿಂಗಳ ಬಳಿಕ ಮತ್ತೆ ಪ್ರಕ್ಷುಬ್ಧ ಹವಾಮಾನ ನಿರ್ಮಾಣವಾಗಲಿದೆ.

ಇನ್ನೆರೆಡು ದಿನ ಭಾರಿ ಮಳೆ

ಇನ್ನೆರೆಡು ದಿನ ಭಾರಿ ಮಳೆ

ಛತ್ತೀಸ್‌ಗಢ ಹಾಗೂ ವಿದರ್ಭಾದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಶುಕ್ರವಾರದವರೆಗೆ ಆರೆಂಜ್ ಅಲರ್ಟ್ ಕೂಡ ಘೋಷಿಸಲಾಗಿದೆ.ಗುಡುಗು,ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ.

ಫೆಬ್ರವರಿ 16 ರಿಂದ 19ರವರೆಗೆ ಎಲ್ಲೆಲ್ಲಿ ಮಳೆ?

ಫೆಬ್ರವರಿ 16 ರಿಂದ 19ರವರೆಗೆ ಎಲ್ಲೆಲ್ಲಿ ಮಳೆ?

ಫೆಬ್ರವರಿ 16ರಿಂದ 19ರವರೆಗೆ ಮರಾಠವಾಡ,ಮಧ್ಯಪ್ರದೇಶ,ಜಾರ್ಖಂಡ್,ಒಡಿಶಾದಲ್ಲಿ ಮಳೆಯಾಗಲಿದೆ. ಭಾರತದ ಕೇಂದ್ರ ಭಾಗದಲ್ಲಿ ಈ ವಾರ ಪೂರ್ತಿ 3-5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿರಲಿದೆ.

English summary
The India Meteorological Department (IMD) has forecast light to moderate-intensity rainfall across Vidarbha, Marathwada and some parts of Madhya Maharashtra between February 16 and 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X