ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚಿನ ಪ್ರಯಾಣಿಕರ ರೈಲುಗಳ ಸಂಚಾರ ಸದ್ಯಕ್ಕಿಲ್ಲ

|
Google Oneindia Kannada News

ನವದೆಹಲಿ, ಜುಲೈ 20 : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ದೇಶದಲ್ಲಿ ಹೆಚ್ಚಿನ ಪ್ರಯಾಣಿಕರ ರೈಲುಗಳನ್ನು ಸಂಚಾರ ನಡೆಸುವ ಬಗ್ಗೆ ಇನ್ನು ತೀರ್ಮಾನ ಕೈಗೊಂಡಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ.

ರೈಲ್ವೆ ಮಂಡಳಿ ಛೇರ್ಮನ್ ವಿ. ಕೆ. ಯಾದವ್ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಎಲ್ಲಾ ರಾಜ್ಯಗಳ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಯಾವುದೇ ರಾಜ್ಯ ಹೆಚ್ಚಿನ ರೈಲಿಗೆ ಬೇಡಿಕೆ ಸಲ್ಲಿಸಿದರೆ ನಾವು ನೀಡಲಿದ್ದೇವೆ" ಎಂದು ಹೇಳಿದ್ದಾರೆ.

ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು

Railways Yet To Decide On Operate More Trains

ಪ್ರಸ್ತುತ 230 ವಿಶೇಷ ಪ್ರಯಾಣಿಕ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಇವುಗಳಲ್ಲಿ ಶೇ 75.48ರಷ್ಟು ಜನರು ಸಂಚಾರ ನಡೆಸುತ್ತಿದ್ದಾರೆ. ಸುಮಾರು 68 ರೈಲುಗಳು ಮಾತ್ರ ಶೇ 100ರಷ್ಟು ಭರ್ತಿಯಾಗುತ್ತಿವೆ.

ರೈಲ್ವೆ ಮುಂಗಡ ಟಿಕೆಟ್ ಕೌಂಟರ್ ಕೆಲಸದ ಅವಧಿ ಬದಲಾವಣೆ ರೈಲ್ವೆ ಮುಂಗಡ ಟಿಕೆಟ್ ಕೌಂಟರ್ ಕೆಲಸದ ಅವಧಿ ಬದಲಾವಣೆ

ಈಗ ಸಂಚಾರ ನಡೆಸುತ್ತಿರುವ 37 ರೈಲುಗಳಲ್ಲಿ ಕೇವಲ ಶೇ 30ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಹಲವು ರೈಲುಗಳಲ್ಲಿ ಖಾಲಿ ಸೀಟುಗಳು ಕಾಣಿಸುತ್ತಿವೆ. ಜನರಿಗೆ ಉಪಯೋಗವಾಗಲಿ ಎಂದು ರೈಲನ್ನು ಓಡಿಸಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ.

ದೆಹಲಿ ರೈಲ್ವೆ ಕೋವಿಡ್‌ ಕೇರ್‌ ಸೆಂಟರ್‌ಗೆ ಮೊದಲ ರೋಗಿ ಆಗಮನ ದೆಹಲಿ ರೈಲ್ವೆ ಕೋವಿಡ್‌ ಕೇರ್‌ ಸೆಂಟರ್‌ಗೆ ಮೊದಲ ರೋಗಿ ಆಗಮನ

"ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿಯೇ ಈ ವರ್ಷ ರೈಲುಗಳ ವೇಳಾಪಟ್ಟಿ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ. ಹೆಚ್ಚು ಜನರನ್ನು ಆಕರ್ಷಿಸಲು ವೇಳಾಪಟ್ಟಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತದೆ" ಎಂದು ವಿ. ಕೆ. ಯಾದವ್ ತಿಳಿಸಿದ್ದಾರೆ.

"ಭಾರತೀಯ ರೈಲ್ವೆ ಮೇ 1ರಿಂದ 4615 ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಿದೆ. ಈಗಲೂ ರಾಜ್ಯಗಳು ಬೇಡಿಕೆ ಸಲ್ಲಿಸಿದಲ್ಲಿ ಶ್ರಮಿಕ್ ರೈಲುಗಳನ್ನು ಓಡಿಸಲಾಗುತ್ತದೆ" ಎಂದು ಯಾದವ್ ವಿವರಣೆ ನೀಡಿದರು.

ರೈಲ್ವೆ 813 ಕೋವಿಡ್ ಆರೈಕೆ ಕೇಂದ್ರಗಳನ್ನು ಇದುವರೆಗೂ ನೀಡಿದೆ. ವಿವಿಧ ರಾಜ್ಯಗಳ ಬೇಡಿಕೆಯಂತೆ ನೀಡಲಾಗಿದ್ದು, ಇವುಗಳು ಒಟ್ಟು 12,712 ಹಾಸಿಗೆ ಸಾಮರ್ಥ್ಯವನ್ನು ಹೊಂದಿವೆ.

English summary
Indian railways said that it will some mote time to operate more passengers trains. At present 230 special passenger trains are being operated by railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X