ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನೊಳಗೆ ಹೊದಿಕೆಗಳು ಮತ್ತು ಪರದೆಗಳನ್ನು ಒದಗಿಸುವ ಮೇಲಿನ ನಿರ್ಬಂಧ ರದ್ದು

|
Google Oneindia Kannada News

ರೈಲಿನೊಳಗೆ ಲಿನಿನ್ (ಹಾಸು ಬಟ್ಟೆಗಳು), ಹೊದಿಕೆಗಳು ಮತ್ತು ಪರದೆಗಳನ್ನು ಒದಗಿಸುವ ಮೇಲಿನ ನಿರ್ಬಂಧವನ್ನು ರೈಲ್ವೆ ಹಿಂತೆಗೆದುಕೊಂಡಿದೆ. ಕೋವಿಡ್-19 ರ ಕಾರಣದಿಂದಾಗಿ ಸಾಂಕ್ರಾಮಿಕ ಮತ್ತು ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ರೈಲುಗಳಲ್ಲಿ ಪ್ರಯಾಣಿಕರ ಚಲನೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಟೋಕಾಲ್ (ಎಸ್‌ಒಪಿ) ಅನ್ನು ಹೊರಡಿಸಲಾಗಿತ್ತು. ಇದು ರೈಲುಗಳ ಒಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಮೇಲೆ ನಿರ್ಬಂಧವನ್ನು ವಿಧಿಸಿತ್ತು. ರೈಲಿನೊಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಪೂರೈಕೆಗೆ ಸಂಬಂಧಿಸಿದಂತೆ ಮೇಲಿನ ನಿರ್ಬಂಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ರೈಲ್ವೆ ಈಗ ನಿರ್ಧರಿಸಿದೆ ಮತ್ತು ಪೂರ್ವ ಕೋವಿಡ್ ಅವಧಿಯಲ್ಲಿ ಅನ್ವಯವಾಗುವಂತೆ ಅದನ್ನು ಒದಗಿಸಬಹುದಾಗಿದೆ.

ಇತ್ತೀಚೆಗೆ ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಕಳೆದ ತಿಂಗಳ 14 ರಿಂದ ಎಲ್ಲಾ ರೈಲುಗಳಲ್ಲಿ ಬೇಯಿಸಿದ ಆಹಾರ ಸೇವೆ ಪುನರಾರಂಭಿಸಿದೆ. ಪ್ರಯಾಣಿಸುವ ಪ್ರಯಾಣಿಕರ ಅಗತ್ಯತೆ ಮತ್ತು ದೇಶಾದ್ಯಂತ COVID ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿರುವುದನ್ನು ಗಮನದಲ್ಲಿಟ್ಟುಕೊಂಡು IRCTC ರೈಲುಗಳಲ್ಲಿ ಬೇಯಿಸಿದ ಆಹಾರದ ಸೇವೆಗಳನ್ನು ಪುನರಾರಂಭಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ.

ರೈಲ್ವೆ ಮಂಡಳಿಯಿಂದ ಪಡೆದ ಮಾರ್ಗಸೂಚಿಗಳ ಪ್ರಕಾರ ಬೇಯಿಸಿದ ಆಹಾರ ಸೇವೆಯನ್ನು ಮರುಸ್ಥಾಪಿಸಲಾಗಿದೆ. ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಹಂತ ಹಂತವಾಗಿ ಆಹಾರ ಸೇವೆಯನ್ನು ಪ್ರಾರಂಭಿಸಲಾಯಿತು. ಈಗಾಗಲೇ 428 ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ಮರುಸ್ಥಾಪಿಸಲಾಗಿದೆ ಮತ್ತು ಒಟ್ಟು ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ಕಳೆದ ವರ್ಷ ಡಿಸೆಂಬರ್ ವೇಳೆಗೆ 30 ಪ್ರತಿಶತ ಮತ್ತು ಈ ವರ್ಷದ ಜನವರಿಯಲ್ಲಿ 80 ಪ್ರತಿಶತದಷ್ಟು ಪುನಃಸ್ಥಾಪಿಸಲಾಗಿದೆ ಮತ್ತು ಉಳಿದ 20 ಪ್ರತಿಶತವನ್ನು ಕಳೆದ ತಿಂಗಳು ಪುನಃಸ್ಥಾಪಿಸಲಾಗಿದೆ.

Railways Withdraws Restriction on Provision of Linen, Blankets and Curtains Inside Trains With Immediate Effect

ರಾಜಧಾನಿ, ಶತಾಬ್ದಿ ಮತ್ತು ಡುರೊಂಟೊದಂತಹ ಪ್ರೀಮಿಯಂ ರೈಲುಗಳಲ್ಲಿ ಬೇಯಿಸಿದ ಆಹಾರವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪುನಃಸ್ಥಾಪಿಸಲಾಗಿದೆ ಎಂದು IRCTC ಹೇಳಿದೆ. ರೆಡಿ ಟು ಈಟ್ ಮೀಲ್ಸ್ ಕೂಡ ಮುಂದುವರಿಯಲಿದೆ ಎಂದು ತಿಳಿಸಿದೆ.

Railways Withdraws Restriction on Provision of Linen, Blankets and Curtains Inside Trains With Immediate Effect

2020 ರ ಮಾರ್ಚ್ 23 ರಂದು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಸುರಕ್ಷತಾ ಕ್ರಮವಾಗಿ ಅಡುಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ದೇಶದಲ್ಲಿ ಕೋವಿಡ್ ಪಾಸಿಟಿವಿಟಿ ದರದಲ್ಲಿ ಇಳಿಕೆಯೊಂದಿಗೆ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ರೈಲುಗಳಲ್ಲಿ ರೆಡಿ ಟು ಈಟ್ ಊಟವನ್ನು ಪ್ರಾರಂಭಿಸಲಾಯಿತು.

ಇನ್ನೂ ರೈಲುಗಳಲ್ಲಿ ಪ್ರಯಾಣಿಸುವಾಗ ನಮಗೆಲ್ಲರಿಗೂ ಒಂದಲ್ಲ ಒಂದು ರೀತಿ ಇತರ ಸಹಪ್ರಯಾಣಿಕರಿಂದ ತೊಂದರೆಯಾಗುತ್ತದೆ. ಗುಂಪಿನಲ್ಲಿರುವ ಅನೇಕ ಜನರು ತಡರಾತ್ರಿಯಲ್ಲೂ ಜೋರಾಗಿ ಮಾತನಾಡುತ್ತಾರೆ. ಕೆಲ ಜನ ಮೊಬೈಲ್ ಫೋನ್‌ನಲ್ಲಿಯೇ ಹಾಡುಗಳನ್ನು ಹಾಕುತ್ತಾರೆ ಅಥವಾ ಸ್ವತ: ತಾವೇ ದೊಡ್ಡ ಧ್ವನಿಯಲ್ಲಿ ಹಾಡುಗಳನ್ನು ಹಾಡುತ್ತಾರೆ. ಕೆಲವರಿಗೆ ರಾತ್ರಿಯೂ ಲೈಟ್ ಆಫ್ ಮಾಡಲು ಕಷ್ಟವಾಗುತ್ತದೆ. ರೈಲಿನಲ್ಲಿ ತಾನು ಒಬ್ಬಂಟಿಯಾಗಿಲ್ಲ, ಇತರ ಪ್ರಯಾಣಿಕರು ಸಹ ಪ್ರಯಾಣಿಸುತ್ತಿದ್ದಾರೆ ಎಂಬುದನ್ನು ಕೆಲವರು ಮರೆತುಬಿಟ್ಟಿರುತ್ತಾರೆ. ಕೆಲವೊಮ್ಮೆ ಇದು ಜಗಳಕ್ಕೂ ಕಾರಣವಾಗುತ್ತದೆ. ಆದರೀಗ ಅಂಥ ಬುದ್ಧಿಹೀನ ಪ್ರಯಾಣಿಕರು ಜಾಗರೂಕರಾಗಿರುವಂತೆ ಮಾಡಲಾಗಿದೆ. ಯಾಕೆಂದರೆ ಇಂಥ ವರ್ತನೆಯ ಪ್ರಯಾಣಿಕರ ವಿರುದ್ಧ ರೈಲ್ವೇ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತೀಯ ರೈಲ್ವೇ ಇದನ್ನು ಕಳೆದ ತಿಂಗಳಿನಿಂದ ಆರಂಭಿಸಿದೆ.

ರೈಲ್ವೆ ಸಚಿವಾಲಯವು ಪ್ರಯಾಣಿಕರು ರಾತ್ರಿಯ ಸಮಯದಲ್ಲಿ ಜೋರಾಗಿ ಮಾತನಾಡುವುದು ಅಥವಾ ಹಾಡುಗಳನ್ನು ಕೇಳುವುದು ಪ್ರಯಾಣದಲ್ಲಿ ತೊಂದರೆ ಉಂಟುಮಾಡುವ ದೂರುಗಳನ್ನು ಸ್ವೀಕರಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಅಂತಹ ಸಮಸ್ಯೆಗಳನ್ನು ನಿವಾರಿಸಲು ರೈಲ್ವೆ ತನ್ನ ಎಲ್ಲಾ ವಲಯಗಳನ್ನು ಕೇಳಿದೆ. ಅಂತಹ ಪ್ರಯಾಣಿಕರೊಂದಿಗೆ ಕಟ್ಟುನಿಟ್ಟಾಗಿ ಕ್ರಮಕ್ಕೆ ರೈಲ್ವೆ ನಿರ್ಧರಿಸಿದೆ. ಪ್ರಯಾಣಿಕರು ಇನ್ನೂ ಅಂತಹ ಸಮಸ್ಯೆಗಳನ್ನು ಎದುರಿಸಿದರೆ ಅದಕ್ಕೆ ರೈಲು ಸಿಬ್ಬಂದಿಯೇ ಹೊಣೆಯಾಗುತ್ತಾರೆ ಎಂದಿದೆ.

English summary
In view of Pandemic and Covid Protocol due to Covid-19, Standard Operating Protocol (SOP) for Movement of passengers by trains was issued which imposed the restriction on linen, blankets and curtains inside trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X