ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಪ್ರಯಾಣಿಕರೇ ಗಮನಿಸಿ: ಜೂನ್‌ 1 ರಿಂದ ದೇಶದೆಲ್ಲೆಡೆ 200 ರೈಲುಗಳು ಸಂಚಾರ

|
Google Oneindia Kannada News

ನವದೆಹಲಿ, ಮೇ 19: ಲಾಕ್ ಡೌನ್ 4.0 ಜಾರಿಯಲ್ಲಿರುವಾಗಲೇ ಶ್ರಮಿಕ್ ರೈಲು ಮತ್ತು ವಿಶೇಷ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಪ್ರಯಾಣಿಕರ ರೈಲು ಸಂಚಾರ ಪೂರ್ಣಪ್ರಮಾಣದಲ್ಲಿ ಸಂಚಾರ ಆರಂಭಿಸಿಲ್ಲ.

ಜೂನ್ 30 ರವರೆಗೆ ಪ್ರಯಾಣಿಕರ ರೈಲು ಸಂಚಾರ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಜೂನ್ 1 ರಿಂದ ಸುಮಾರು 200ಕ್ಕೂ ಅಧಿಕ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಲಾಕ್‌ಡೌನ್‌ ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದ್ದು, ಜೂನ್‌ 1 ರಿಂದ ದೇಶದೆಲ್ಲೆಡೆ ಸುಮಾರು 200 ಪ್ರಯಾಣಿಕ ರೈಲುಗಳು ಸಂಚಾರ ಆರಂಭಿಸಲಿವೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ(ಮೇ 19) ತಿಳಿಸಿದರು. ಈ 200 ನಾನ್ ಎಸಿ ರೈಲುಗಳು ಪ್ರತಿದಿನ ಸಂಚರಿಸಲಿವೆ. ಈ ರೈಲಿಗಳಿಗೆ ಶೀಘ್ರವೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದರು.

ರೈಲು ಟಿಕೆಟ್ ಬುಕ್ಕಿಂಗ್ ರದ್ದು, ಹಣ ವಾಪಸ್; ಹೊಸ ಮಾರ್ಗಸೂಚಿರೈಲು ಟಿಕೆಟ್ ಬುಕ್ಕಿಂಗ್ ರದ್ದು, ಹಣ ವಾಪಸ್; ಹೊಸ ಮಾರ್ಗಸೂಚಿ

Railways to run 200 Non-AC trains daily from June 1; Online booking to start soon

ಜೂನ್‌ 01 ರಿಂದ ಎಸಿ ಅಲ್ಲದ ದ್ವಿತೀಯ ದರ್ಜೆಯ 200 ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಶ್ರಮಿಕ ರೈಲುಗಳು ಎಂದಿನಂತೆ ವಲಸೆ ಕಾರ್ಮಿಕರನ್ನು ನಿಗದಿತ ತಾಣಕ್ಕೆ ಸೇರಿಸುತ್ತಿವೆ. ಮೇ 1ರಿಂದ ಇಲ್ಲಿ ತನಕ 1595 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದು, 21 ಲಕ್ಷ ವಲಸಿಗರನ್ನು ಅವರ ಊರಿಗೆ ತಲುಪಿಸಿದೆ. ಈ ಬಗ್ಗೆ ಉತ್ತರಪ್ರದೇಶದಲ್ಲಿ ಅಧಿಕ 837 ರೈಲು ಹಾಗೂ ಬಿಹಾರ 428 ರೈಲು ಮತ್ತು ಮಧ್ಯಪ್ರದೇಶದಲ್ಲಿ 100 ವಿಶೇಷ ರೈಲು ಸಂಚಾರ ಕಂಡಿದೆ ಎಂದು ಹೇಳಿದರು.

English summary
Union Minister of Railways Piyush Goyal on Tuesday said the Indian Railways will run 200 non-AC trains on a daily basis as per the timetable from June 1, whose online booking will start soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X