ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಎಲ್ಲಾ ಪ್ಯಾಸೆಂಜರ್ ರೈಲು ಸಂಚಾರ ಮತ್ತೆ ಆರಂಭ

|
Google Oneindia Kannada News

ನವದೆಹಲಿ, ಆಗಸ್ಟ್ 1: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ 2020ರಿಂದಲೂ ಸೇವೆಯನ್ನು ನಿಲ್ಲಿಸಿದ್ದ 500 ಪ್ಯಾಸೆಂಜರ್ ರೈಲು ಸೇವೆಗಳನ್ನು ಭಾರತೀಯ ರೈಲ್ವೆ ಪುನಾರಂಭಿಸಿದೆ. ಆ ಮೂಲಕ ಎರಡು ವರ್ಷಗಳ ನಂತರದಲ್ಲಿ ಎಲ್ಲಾ ರೈಲು ಸೇವೆಗಳನ್ನು ನೀಡಲಾಗುತ್ತಿದೆ.

ದೇಶದಲ್ಲಿ ಕೋವಿಡ್-19 ರೋಗದಿಂದಾಗಿ ಸ್ಥಗಿತಗೊಂಡಿರುವ ಎಲ್ಲಾ ರೈಲುಗಳ ಸೇವೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರೈಲ್ವೆ ಮಂಡಳಿಯು ವಲಯ ರೈಲ್ವೆಗಳಿಗೆ ನಿರ್ದೇಶನ ನೀಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೆಮು ರೈಲು ಸೇವೆ ಆರಂಭಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೆಮು ರೈಲು ಸೇವೆ ಆರಂಭ

ಕೋವಿಡ್ -19 ಪಿಡುಗಿಗೂ ಮೊದಲು ದೇಶದಲ್ಲಿ ಒಟ್ಟು 2,800 ಪ್ಯಾಸೆಂಜರ್ ರೈಲುಗಳು ಸೇವೆ ಒದಗಿಸುತ್ತಿದ್ದವು. ಈ ಪೈಕಿ ಪ್ರಸ್ತುತ 2300 ರೈಲುಗಳು ಮಾತ್ರ ಸೇವೆಯಲ್ಲಿವೆ. ಮುಂದಿನ ಎರಡು ವಾರಗಳಲ್ಲಿ ಇನ್ನುಳಿದ 500 ರೈಲುಗಳು ಕಾರ್ಯಾಚರಣೆಯನ್ನು ಪುನರಾರಂಭಿಸಲಿವೆ. ಈ 500 ರೈಲುಗಳಲ್ಲಿ 100 ಎಕ್ಸ್‌ಪ್ರೆಸ್ ರೈಲುಗಳಾದರೆ, 400 ಇಂಟರ್-ಸಿಟಿ ಪ್ಯಾಸೆಂಜರ್ ರೈಲುಗಳಾಗಿವೆ.

ದೇಶದಲ್ಲಿ 500 ರೈಲುಗಳ ಕಾರ್ಯಾಚರಣೆ ಪುನಾರಂಭ

ದೇಶದಲ್ಲಿ 500 ರೈಲುಗಳ ಕಾರ್ಯಾಚರಣೆ ಪುನಾರಂಭ

100 ಎಕ್ಸ್‌ಪ್ರೆಸ್ ರೈಲುಗಳ ಪುನರಾರಂಭವು 300 ನಗರಗಳ ಪ್ರಯಾಣಿಕರಿಗೆ ಸಹಾಯವಾಗಲಿದೆ. 400 ಇಂಟರ್-ಸಿಟಿ ಪ್ಯಾಸೆಂಜರ್ ರೈಲುಗಳ ಪ್ರಾರಂಭದಿಂದ 150ಕ್ಕೂ ಹೆಚ್ಚು ನಗರಗಳ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ ಎಂದು ಭಾರತೀಯ ರೈಲ್ವೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ಯಾಸೆಂಜರ್ ರೈಲುಗಳಿಗೆ ಖಾಸಗಿ ನಿರ್ವಾಹಕರಿಲ್ಲ

ಪ್ಯಾಸೆಂಜರ್ ರೈಲುಗಳಿಗೆ ಖಾಸಗಿ ನಿರ್ವಾಹಕರಿಲ್ಲ

ಭಾರತದಲ್ಲಿ ಖಾಸಗಿ ನಿರ್ಹಾಹಕರಿಂದ ಪ್ಯಾಸೆಂಜರ್ ರೈಲುಗಳ ನಿರ್ವಹಣೆಗೆ ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟವಾಗಿ ಹೇಳಿದೆ. ಸದ್ಯಕ್ಕಂತೂ ಖಾಸಗಿ ನಿರ್ವಾಹಕರಿಂದ ನಿಯಮಿತವಾಗಿ ಪ್ಯಾಸೆಂಜರ್ ರೈಲುಗಳನ್ನು ಓಡಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ದೇಶದಲ್ಲಿ ರೈಲ್ವೆಗಳ ಖಾಸಗೀಕರಣಕ್ಕೂ ಚಿಂತನೆ

ದೇಶದಲ್ಲಿ ರೈಲ್ವೆಗಳ ಖಾಸಗೀಕರಣಕ್ಕೂ ಚಿಂತನೆ

ಭಾರತೀಯ ಸಂಚಾರ ವ್ಯವಸ್ಥೆಯ ಜೀವಾಳವಾಗಿರುವ ರೈಲ್ವೆ ಸೇವೆಯನ್ನು ಖಾಸಗಿ ಒಡೆತನಕ್ಕೆ ಒಪ್ಪಿಸುವ ಯೋಜನೆಯನ್ನು ಈ ಹಿಂದೆ ಕೇಂದ್ರ ಸರ್ಕಾರವೇ ಹಾಕಿಕೊಂಡಿತ್ತು. ಖಾಸಗಿ ಕಂಪನಿಗಳ ಮೂಲಕ ರೈಲ್ವೆಗಳ ನಿರ್ವಹಣೆಯನ್ನು ಮಾಡುವುದಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಭಾರತೀಯ ರೈಲ್ವೆಯನ್ನು ಖಾಸಗಿ ಹಿಡಿತಕ್ಕೆ ನೀಡಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಈ ಯೋಜನೆಯಿಂದ ಹಿಂದೆ ಸರಿದಿತ್ತು.

ಹಂತ ಹಂತವಾಗಿ ಖಾಸಗಿ ರೈಲುಗಳ ಸೇವೆ ಆರಂಭ

ಹಂತ ಹಂತವಾಗಿ ಖಾಸಗಿ ರೈಲುಗಳ ಸೇವೆ ಆರಂಭ

ದೇಶದ ಹಳಿಗಳ ಮೇಲೆ ಖಾಸಗಿ ರೈಲುಗಳನ್ನು ಓಡಿಸುವ ಯೋಜನೆಗೆ ಕೇಂದ್ರ ಸರ್ಕಾರವು ಯೋಜನೆ ಹಾಕಿಕೊಂಡಿದೆ. ಹಂತ ಹಂತವಾಗಿ ಖಾಸಗಿ ರೈಲುಗಳಿಗೆ ಅನುಮತಿ ನೀಡುವುದಕ್ಕೆ ಚಿಂತಿಸಲಾಗಿದೆ. ಮೊದಲ ಹಂತದಲ್ಲಿ 2023-24ನೇ ಸಾಲಿನಲ್ಲಿ 12 ಖಾಸಗಿ ರೈಲುಗಳಿಗೆ ಅನುಮತಿ ನೀಡಲಾಗುತ್ತದೆ, ಅದರಂತೆ 2027ರ ವೇಳೆಗೆ ಒಟ್ಟು 151 ಖಾಸಗಿ ರೈಲುಗಳು ಹಳಿಗೆ ಇಳಿಯಲಿವೆ.

English summary
Indian Railways to resume operation of all trains after 2 years. Know More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X