ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 15ರಿಂದ ಬೆಂಗಳೂರಿನಿಂದ ಸೇವಾ ಸರ್ವೀಸ್ ರೈಲು ಆರಂಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಭಾರತೀಯ ರೈಲ್ವೆ 10 ಹೊಸ 'ಸೇವಾ ಸರ್ವೀಸ್' ರೈಲುಗಳನ್ನು ಅಕ್ಟೋಬರ್ 15ರಿಂದ ಆರಂಭಿಸಲಿದೆ. ಈ ಪೈಕಿ 5 ರೈಲುಗಳು ಪ್ರತಿದಿನ ಸಂಚರಿಸಲಿವೆ. ಮಿಕ್ಕ ರೈಲುಗಳು ವಾರಕ್ಕೆ 6 ದಿನಗಳ ಸಂಚರಿಸಲಿವೆ ಎಂದು ಪ್ರಕಟಣೆಯಿಂದ ತಿಳಿಸಲಾಗಿದೆ.

ದೇಶದ ಪ್ರಮುಖ ನಗರಗಳಿಂದ ಸಣ್ಣ ಪಟ್ಟಣಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಇತ್ತೀಚೆಗೆ 'ಸೇವಾ ಸರ್ವೀಸ್' ರೈಲುಗಳಿಗೆ ಚಾಲನೆ ನೀಡಲಾಗಿತ್ತು. ಅ.15ರಿಂದ ದೆಹಲಿ ಹಾಗೂ ಶಾಮ್ಲಿ, ಭುವನೇಶ್ವರ್ ನಯಾಘರ್ ಪಟ್ಟಣ, ಮುರ್ಕೊಗ್ಸೆಲೆಕ್ಸ್ ಹಾಗೂ ದಿಬ್ರುಗರ್, ಕೋಟಾ ಹಾಗೂ ಝಲಾವರ್ ನಗರ, ಕೊಯಮತ್ತೂರು ಹಾಗೂ ಪಳನಿ ನಡುವೆ ಪ್ರತಿದಿನ ಸೇವಾ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ.

ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ತನಕ ವಿಸ್ತರಣೆವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ತನಕ ವಿಸ್ತರಣೆ

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿ -ಶಾಮ್ಲಿ ನಡುವಿನ ರೈಲಿಗೆ ನವದೆಹಲಿಯಲ್ಲಿ ಮಂಗಳವಾರದಂದು ಚಾಲನೆ ನೀಡಲಿದ್ದಾರೆ.

Railways to launch new Sewa Express trains from Delhi, Coimbatore, Bengaluru

ಈ ಮಾರ್ಗಗಳಲ್ಲದೆ ವಡ್ನಗರ್ ನಿಂದ ಮಹೇಸಾನಾ, ಅಸರ್ಯಾ ಇಂದ ಹಿಮ್ಮತ್ ನಗರ, ಕರೂರು ಇಂದ ಸೇಲಂ, ಯಶವಂತಪುರಂ ಇಂದ ತುಮಕೂರು, ಕೊಯಮತ್ತೂರು ಇಂದ ಪೊಲ್ಲಾಚಿ ನಡುವಿನ ಸೇವಾ ಎಕ್ಸ್ ಪ್ರೆಸ್ ರೈಲು ವಾರದ 6 ದಿನಗಳ ಸಂಚರಿಸಲಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಪ್ರಯಾಣಿಕರು ದೂರು ದಾಖಲಿಸಲು ಭಾರತೀಯ ರೈಲ್ವೆ ಹೊಸ ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಆರಂಭಿಸಿದೆ.

English summary
The Indian Railways will launch 10 ‘Sewa Service' trains from Oct 15, 2019. Railways to launch new Sewa Express trains from Delhi, Coimbatore, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X