ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ರೈಲುಗಳ ನಿರ್ವಹಣೆ ಖಾಸಗಿಯವರಿಗೆ; ಶೀಘ್ರದಲ್ಲೇ ಬಿಡ್

|
Google Oneindia Kannada News

ನವದೆಹಲಿ, ಜೂನ್ 30 : ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು ಭಾರತೀಯ ರೈಲ್ವೆ ಮತ್ತೆ ಖಾಸಗೀಕರಣದತ್ತ ಮುಖಮಾಡಿದೆ.

ರೈಲ್ವೆ ಮಂಡಳಿ ಅಧ್ಯಕ್ಷ ವಿ. ಕೆ. ಯಾದವ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಜುಲೈನಲ್ಲಿ ಖಾಸಗಿಯವರು ರೈಲುಗಳನ್ನು ಓಡಿಸಲು ಇಲಾಖೆಯು ಬಿಡ್ ಆಹ್ವಾನಿಸಲಿದೆ" ಎಂದು ಹೇಳಿದ್ದಾರೆ.

ತೇಜಸ್ ಎಕ್ಸ್‌ಪ್ರೆಸ್; ದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆತೇಜಸ್ ಎಕ್ಸ್‌ಪ್ರೆಸ್; ದೇಶದ 2ನೇ ಖಾಸಗಿ ರೈಲಿಗೆ ಹಸಿರು ನಿಶಾನೆ

150 ರೈಲುಗಳನ್ನು ಖಾಸಗಿಯವರಿಗೆ ವಹಿಸಲು ತೀರ್ಮಾನಿಸಲಾಗಿದೆ. ಒಟ್ಟು 2 ಹಂತದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ರೈಲುಗಳನ್ನು ಓಡಿಸಲು ಬಿಡ್ ಆಹ್ವಾನಿಸಲಾಗುತ್ತದೆ.

ಬೆಂಗಳೂರು-ಬೆಳಗಾವಿ ನಡುವೆ ಜೂ.26ರಿಂದಲೇ ರಾತ್ರಿ ರೈಲು ಸಂಚಾರ ಬೆಂಗಳೂರು-ಬೆಳಗಾವಿ ನಡುವೆ ಜೂ.26ರಿಂದಲೇ ರಾತ್ರಿ ರೈಲು ಸಂಚಾರ

ಇಂಡಿಗೊ, ವಿಸ್ತಾರಾ, ಸ್ಪೈಸ್ ಜೆಟ್, ಆರ್‌. ಕೆ. ಕೇಟರಿಂಗ್ ಮತ್ತು ಮೇಕ್ ಮೈ ಟ್ರಿಪ್ ಮುಂತಾದ ಸಂಸ್ಥೆಗಳು ರೈಲುಗಳ ನಿರ್ವಹಣೆಗೆ ಆಸಕ್ತಿ ತೋರಿಸಿವೆ. ಶೀಘ್ರದಲ್ಲೇ ಬಿಡ್ ಪ್ರಕ್ರಿಯೆ ಆರಂಭವಾಗಲಿದೆ.

ರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟ ರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟ

ಏಪ್ರಿಲ್‌ನಲ್ಲಿ ನಡೆಯಬೇಕಿತ್ತು

ಏಪ್ರಿಲ್‌ನಲ್ಲಿ ನಡೆಯಬೇಕಿತ್ತು

ಭಾರತೀಯ ರೈಲ್ವೆ 150 ರೈಲುಗಳನ್ನು ಖಾಸಗಿಯವರಿಗೆ ವಹಿಸಲು ಹಿಂದೆಯೇ ತೀರ್ಮಾನಿಸಿತ್ತು. ಏಪ್ರಿಲ್ ತಿಂಗಳಿನಲ್ಲಿ ಈ ಕುರಿತು ಮೊದಲ ಹಂತದ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಲಾಕ್ ಡೌನ್ ಪರಿಣಾಮ ವಿಳಂಬವಾಯಿತು. ಈಗ ಜುಲೈನಲ್ಲಿ ಬಿಡ್ ನಡೆಯಲಿದೆ.

ಎರಡು ಹಂತದ ಪ್ರಕ್ರಿಯೆ

ಎರಡು ಹಂತದ ಪ್ರಕ್ರಿಯೆ

ಒಟ್ಟು 2 ಹಂತದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಅರ್ಹತೆಗಾಗಿ ವಿನಂತಿ ಮಾಡುವುದು. 2ನೇ ಹಂತದಲ್ಲಿ ಪ್ರಸ್ತಾವನೆಗಾಗಿ ವಿನಂತಿ ಮಾಡುವುದು. 2ನೇ ಹಂತದಲ್ಲಿ ಆದಾಯ ಸೃಷ್ಟಿ ಹೇಗೆ? ಮಾರ್ಗಗಳು ಯಾವುದು? ಎಂಬ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ.

ಶುಲ್ಕ ಮತ್ತು ಸೌಲಭ್ಯದ ವಿವರ

ಶುಲ್ಕ ಮತ್ತು ಸೌಲಭ್ಯದ ವಿವರ

ಖಾಸಗಿ ಸಂಸ್ಥೆಗಳು ರೈಲು ನಿರ್ವಹಣೆಯನ್ನು ವಹಿಸಿಕೊಂಡ ಮೇಲೆ ಮೂಲ ಸೌಕರ್ಯ ಬಳಕೆ ಮಾಡುವುದಕ್ಕೆ ಗುತ್ತಿಗೆ ಹಾಗೂ ಸಾಗಣೆ ಶುಲ್ಕವನ್ನು ಭಾರತೀಯ ರೈಲ್ವೆಗೆ ನೀಡಬೇಕಾಗುತ್ತದೆ. 2ನೇ ಹಂತದಲ್ಲಿ ನಡೆಯುವ ಆರ್‌ಎಫ್‌ಪಿ ಪ್ರಕ್ರಿಯೆಯಲ್ಲಿ ಇವುಗಳನ್ನು ಅಂತಿಮಗೊಳಿಸಲಾಗುತ್ತದೆ.

ಈಗಾಗಲೇ ಸಂಚಾರ ನಡೆಯುತ್ತಿದೆ

ಈಗಾಗಲೇ ಸಂಚಾರ ನಡೆಯುತ್ತಿದೆ

ಲಕ್ನೋ-ದೆಹಲಿ, ಅಹಮದಾಬಾದ್-ಮುಂಬೈ ಮಾರ್ಗದಲ್ಲಿ ಖಾಸಗಿ ರೈಲು ಈಗಾಗಲೇ ಸಂಚಾರ ನಡೆಸುತ್ತಿದೆ. ಮೊದಲ ಹಂತದಲ್ಲಿ ಇದು ಯಶಸ್ವಿಯಾದ ಬಳಿಕ 150 ರೈಲುಗಳನ್ನು ಖಾಸಗಿಯಾವರಿಗೆ ವಹಿಸಲು ತೀರ್ಮಾನಿಸಲಾಗಿದೆ.

English summary
Indian Railways has decided to handover 150 trains to private companies for operating. Railways may invite bids in the month of July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X