ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

200 ಪ್ರಯಾಣಿಕ ರೈಲುಗಳಿಗೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಶುರು

|
Google Oneindia Kannada News

ನವದೆಹಲಿ, ಮೇ 21: ''ಲಾಕ್‌ಡೌನ್‌ ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದ್ದು, ಜೂನ್‌ 1 ರಿಂದ ದೇಶದೆಲ್ಲೆಡೆ ಸುಮಾರು 200 ಪ್ರಯಾಣಿಕ ರೈಲುಗಳು ಸಂಚಾರ ಆರಂಭಿಸಲಿವೆ'' ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ(ಮೇ 19) ತಿಳಿಸಿದ್ದು ನೆನಪಿರಬಹುದು. ಈ 200 ನಾನ್ ಎಸಿ ರೈಲುಗಳು ಪ್ರತಿದಿನ ಸಂಚರಿಸಲಿದ್ದು, ಈ ರೈಲಿಗಳಿಗೆ ಮೇ 21ರ ಬೆಳಗ್ಗೆ 10 ಗಂಟೆಯಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ.

Recommended Video

ನಮ್ಮ‌ ಪೊಲೀಸರ ಕೆಲಸದ‌ ಬಗ್ಗೆ ನಮ್ಮ ಇಂಡಿಯನ್ ಆರ್ಮಿ ಹೆಮ್ಮೆ ಪಟ್ಟು ಏನ್ ಹೇಳಿದೆ ನೋಡಿ | Oneindia Kannada

ಲಾಕ್ ಡೌನ್ 4.0 ಜಾರಿಯಲ್ಲಿರುವಾಗಲೇ ಶ್ರಮಿಕ್ ರೈಲು ಮತ್ತು ವಿಶೇಷ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಪ್ರಯಾಣಿಕರ ರೈಲು ಸಂಚಾರ ಪೂರ್ಣಪ್ರಮಾಣದಲ್ಲಿ ಇನ್ನೂ ಸಂಚಾರ ಆರಂಭಿಸಿಲ್ಲ. ಹಂತ ಹಂತವಾಗಿ ಜನ್ ಶತಾಬ್ದಿ, ಸಂಪರ್ಕ್ ಕ್ರಾಂತಿ, ಡುರೊಂಟೋ ಎಕ್ಸ್ ಪ್ರೆಸ್ ಗಳು ಹಳಿಗಿಳಿಯಲಿವೆ. 200 ರೈಲುಗಳ ಪಟ್ಟಿಯನ್ನು ಟ್ವೀಟ್ ಮಾಡಲಾಗಿದೆ.

Railways releases list of 200 trains to be run from June 1; Bookings open

ರೈಲು ಟಿಕೆಟ್ ಬುಕ್ಕಿಂಗ್ ರದ್ದು, ಹಣ ವಾಪಸ್; ಹೊಸ ಮಾರ್ಗಸೂಚಿ ರೈಲು ಟಿಕೆಟ್ ಬುಕ್ಕಿಂಗ್ ರದ್ದು, ಹಣ ವಾಪಸ್; ಹೊಸ ಮಾರ್ಗಸೂಚಿ

ರಿಸರ್ವ್ಡ್ ಟಿಕೆಟ್ ಪಡೆಯಿರಿ: ಜನರಲ್ ಕೋಚ್ ಗಳಲ್ಲೂ ಕೂಡಾ ರಿಸರ್ವ್ಡ್ ಸೀಟ್ ಪಡೆಯುವುದು ಮುಖ್ಯವಾಗಿದೆ. ಈ ರೈಲುಗಳಲ್ಲಿ ಅನ್ ರಿಸರ್ವ್ಡ್ ಕೋಚ್ ಗಳಿರುವುದಿಲ್ಲ. ಐಆರ್ ಸಿಟಿಸಿ ವೆಬ್ ತಾಣ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಆನ್ ಲೈನ್ ಇ ಟಿಕೆಟ್ ಪಡೆದುಕೊಳ್ಳಬೇಕು. ರೈಲು ನಿಲ್ದಾಣದಲ್ಲಿ ಟಿಕೆಟ್ ನೀಡಲಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ನಾನ್ ರಿಸರ್ವ್ಡ್ ಟಿಕೆಟ್, ಪ್ರಯಾಣದ ವೇಳೆ ಟಿಕೆಟ್ ನೀಡಲಾಗುವುದಿಲ್ಲ, ತತ್ಕಾಲ್, ಪ್ರೀಮಿಯಂ ಟಿಕೆಟ್ ಬುಕ್ಕಿಂಗ್ ಕೂಡಾ ಸಾಧ್ಯವಿಲ್ಲ. ಎಲ್ಲಾ ಪ್ರಯಾಣಿಕರಿಗೂ ಆರೋಗ್ಯ ಸೇತು ಅಪ್ಲಿಕೇಷನ್, ಮಾಸ್ಕ್ ಕಡ್ಡಾಯವಾಗಿದೆ.

Railways releases list of 200 trains to be run from June 1; Bookings open

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ? ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಜೂನ್‌ 01 ರಿಂದ ಎಸಿ ಅಲ್ಲದೆ, ನಾನ್- ಎಸಿ, ದ್ವಿತೀಯ ದರ್ಜೆಯ 200 ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಶ್ರಮಿಕ ರೈಲುಗಳು ಎಂದಿನಂತೆ ವಲಸೆ ಕಾರ್ಮಿಕರನ್ನು ನಿಗದಿತ ತಾಣಕ್ಕೆ ಸೇರಿಸುತ್ತಿವೆ. ಮೇ 1ರಿಂದ ಇಲ್ಲಿ ತನಕ 1595 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದು, 21 ಲಕ್ಷ ವಲಸಿಗರನ್ನು ಅವರ ಊರಿಗೆ ತಲುಪಿಸಿದೆ.

Railways releases list of 200 trains to be run from June 1; Bookings open

English summary
The ministry of railways on Wednesday allowed the resumption of 100 pairs of regular passenger trains from June 1 with both AC and non-AC coaches, revising its earlier order allowing only non-AC trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X