ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆ ಆದಾಯ ವೃದ್ಧಿಗೆ ಬೆಸ್ಟ್ ಐಡಿಯಾ ಕೊಡಿ, 10 ಲಕ್ಷ ಗೆಲ್ಲಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಭಾರತೀಯ ರೈಲ್ವೆ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಈ ಬಾರಿ ಪ್ರಯಾಣಿಕರನ್ನು ನೆಚ್ಚಿಕೊಂಡಿದೆ. ಮುಖ್ಯವಾಗಿ ಯಾರು ಇಲಾಖೆಯ ಆದಾಯ ಹೆಚ್ಚಿಸುವ ಐಡಿಯಾ ನೀಡುತ್ತಾರೋ ಅವರಿಗೆ 10 ಲಕ್ಷ ರೂ. ಬಹುಮಾನ ನೀಡುವ ಮೂಲಕ ಬೆನ್ನು ತಟ್ಟುವ ಜನ್ ಭಾಗೀದಾರ್ ಯೋಜನೆ ರೂಪಿಸಿದೆ.

ಮುಖ್ಯವಾಗಿ ಆದಾಯ ವೃದ್ಧಿಗೆ ವಿಶೇಷ ಐಡಿಯಾಗಳು, ವ್ಯವಹಾರ ವೃದ್ಧಿಯ ಹೊಸ ಚಿಂತನೆ, ಪ್ರಯಾಣಿಕರನ್ನು ಸೆಳೆಯುವ ಯೋಜನೆಗಳು ಇದ್ದರೆ ರೈಲ್ವೆ ಇಲಾಖೆಯ ಜತೆ ಹಂಚಿಕೊಂಡು ಆದಾಯ ಹೆಚ್ಚಿಸುವ ಮೂಲಕ ಬಹುಮಾನ ಗೆಲ್ಲಿ ಎಂದು ರೈಲ್ವೆ ಇಲಾಖೆ ಮೈ ಗವರ್ನಮೆಂಟ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಪ್ರಯಾಣಿಕರಿಂದ 'ಅನುಭೂತಿ' ಕಾಣದ ಶತಾಬ್ಧಿ ರೈಲು ಪ್ರಯಾಣಿಕರಿಂದ 'ಅನುಭೂತಿ' ಕಾಣದ ಶತಾಬ್ಧಿ ರೈಲು

ಇಲಾಖೆಯ ಅಭಿವೃದ್ಧಿ ರೈಲ್ವೆ ಇಲಾಖೆ ಆದಾಯ ಹೆಚ್ಚಿಸುವ ದೃಷ್ಟಿಕೋನವನ್ನಿಟ್ಟುಕೊಂಡು, ಆ ಮೂಲಕ ಪ್ರಯಾಣಿಕರಿಗೂ ಅನುಕೂಲ ಮಾಡಿಕೊಡಬಹುದಾದ ಜನ್ ಭಾಗೀದಾರ್ ಎಂದು ಇಲಾಖೆ ಹೇಳಿಕೊಂಡಿದೆ. ಮುಖ್ಯವಾಗಿ ಆನ್ ಲೈನ್ ಮೂಲಕ ಇಂತಹ ಯೋಜನೆ ರೂಪಿಸಲಾಗಿದೆ.

Railways offers Rs10 lakhs for great idea!

ಇದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಇನ್ನೋವೆಟಿವ್ ಮೈಗವರ್ನಮೆಂಟ್ ಮಾಡುತ್ತಿದೆ. ಕೊಡುವ ಐಡಿಯಾಗಳು ಭಾರತೀಯ ರೈಲ್ವೆ ಇಲಾಖೆಗೆ ನೆರವಾಗಬೇಕು ಅದನ್ನು ಅಳವಡಿಸಿಕೊಳ್ಳುವುದು ಕೂಡ ಬಹಳ ಸುಳವಾಗಬೇಕು ಎನ್ನುವುದು ಇಲಾಖೆಯ ಈ ಸ್ಪರ್ಧೆಯ ಮುಖ್ಯ ನಿರ್ಬಂಧನೆಯಲ್ಲಿ ಒಂದಾಗಿದೆ.

mygovt.in ವೆಬ್ ಸೈಟ್ ಮೂಲಕ ಲಾಗಿನ್ ಆಗಬೇಕು. ಅರ್ಜಿ ಭರ್ತಿ ಮಾಡಿದ ಬಳಿಕ ಇ-ಮೇಲ್ ಒಂದು ಸಂಬಂಧಪಟ್ಟ ಅರ್ಜಿದಾರನಿಗೆ ಬರುತ್ತದೆ. ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನಾಂಕವಾಗಿರುತ್ತದೆ. ಯಾರೂ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದ್ದು ವಯಸ್ಸು 18 ಮೀರಿರಬೇಕು.

English summary
Indian railways offered Rs10 lakhs cash prize for general public who gives best idea or suggestion for improve the income of the railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X