ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ?

|
Google Oneindia Kannada News

ನವದೆಹಲಿ, ಮಾರ್ಚ್ 29 : ಭಾರತೀಯ ರೈಲ್ವೆ ಸುಮಾರು 20 ಸಾವಿರ ಕೋಚ್‌ಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಬೇಕು ಎಂದು ಎಲ್ಲಾ ವಲಯಗಳ ಮ್ಯಾನೇಜರ್‌ಗಳಿಗೆ ಪತ್ರ ಬರೆದಿದೆ. ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.

ಸೋಮವಾರ ಭಾರತೀಯ ರೈಲ್ವೆ ಎಲ್ಲಾ ವಲಯಗಳಿಗೆ ಈ ಕುರಿತು ಪತ್ರವನ್ನು ಬರೆದಿದೆ. ಮೊದಲು 5 ಸಾವಿರ ಕೋಚ್‌ಗಳನ್ನು ಪರಿವರ್ತನೆ ಮಾಡುವ ಉದ್ದೇಶ ಹೊಂದಲಾಗಿತ್ತು. ಈಗ 20 ಸಾವಿರ ಕೋಚ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಲಾಗುತ್ತದೆ.

ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!

ರೈಲ್ವೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಕುರಿತು ತೀರ್ಮಾನ ಕೈಗೊಂಡಿದೆ. ದೇಶದ ಎಲ್ಲಾ 5 ರೈಲ್ವೆ ವಲಯದಲ್ಲಿ ಒಂದೇ ಮಾದರಿಯ ವಾರ್ಡ್‌ಗಳು ನಿರ್ಮಾಣವಾಗಲಿವೆ. ಕೆಲವು ಕೋಚ್‌ಗಳನ್ನು Quarantineಗಾಗಿ ಮಾತ್ರ ಮೀಸಲಾಗಿಡಲಾಗುತ್ತದೆ.

'ಕೊರೊನಾ ಇದುವರೆಗೂ ಸಮುದಾಯದ ಹಂತಕ್ಕೆ ಹರಡಿಲ್ಲ''ಕೊರೊನಾ ಇದುವರೆಗೂ ಸಮುದಾಯದ ಹಂತಕ್ಕೆ ಹರಡಿಲ್ಲ'

Railways May Convert Twenty Thousands Coaches Into Isolation Wards

ಹವಾನಿಯಂತ್ರಣ ರಹಿತ ಕೋಚ್‌ಗಳನ್ನು ಮಾತ್ರ ವಾರ್ಡ್‌ಗಳಾಗಿ ಪರಿವರ್ತನೆ ಮಾಡಲು ಬಳಕೆ ಮಾಡಲಾಗುತ್ತದೆ. ಐಸೋಲೇಷನ್ ವಾರ್ಡ್‌ಗಳನ್ನು ನಿರ್ಮಿಸಬೇಕು ಎಂದು ಪತ್ರದಲ್ಲಿ ಭಾರತೀಯ ರೈಲ್ವೆ ಹೇಳಿದೆ.

ಮಾರ್ಚ್ 31ರ ತನಕ ಪ್ಯಾಸೆಂಜರ್ ರೈಲು ರದ್ದು ಮಾರ್ಚ್ 31ರ ತನಕ ಪ್ಯಾಸೆಂಜರ್ ರೈಲು ರದ್ದು

ವಾರ್ಡ್‌ಗಳನ್ನು ನಿರ್ಮಿಸುವ ಜೊತೆಗೆ ಔಷಧಿಗಳನ್ನು ಸಂಗ್ರಹಿಸಲು ವ್ಯವಸ್ಥೆಗಳನ್ನು ಮಾಡುವಂತೆಯೂ ಪತ್ರದಲ್ಲಿ ಸೂಚನೆ ನೀಡಲಾಗಿದೆ. ವಾರ್ಡ್‌ಗಳಿಗೆ ಬೇಕಾದ ಆಕ್ಸಿಜನ್ ಸಿಲಿಂಡರ್‌ಗಳನ್ನು ಆರೋಗ್ಯ ಇಲಾಖೆಯು ಸರಬರಾಜು ಮಾಡಲಿದೆ.

ಕೋಚ್‌ಗಳಲ್ಲಿ ಮಧ್ಯದಲ್ಲಿರುವ ಬರ್ತ್‌ಗಳನ್ನು ತೆಗೆದುಹಾಕಲಾಗುತ್ತದೆ. ಪ್ರತಿ ಕ್ಯಾಬಿನ್‌ನಲ್ಲಿ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಕೋಚ್‌ಗಳ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಲಾಗುತ್ತದೆ.

English summary
The Railway Board has instructed zonal railways that they might be required to convert up to 20,000 coaches into isolation wards as part of its preparedness to fight the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X