ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಇನ್ಮುಂದೆ ತಿಂಡಿ-ಊಟ ದುಬಾರಿ

|
Google Oneindia Kannada News

ನವದೆಹಲಿ, ನವೆಂಬರ್ 15: ಶತಾಬ್ಧಿ, ರಾಜಧಾನಿ, ಡುರೊಂಟೋ ಎಕ್ಸ್ ಪ್ರೆಸ್ ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡುವ ತಿಂಡಿ, ಊಟದ ಬೆಲೆಯನ್ನು ತುಸು ಹೆಚ್ಚಿಸಲು ಭಾರತೀಯ ರೈಲ್ವೆ ಬೋರ್ಡ್ ನಿರ್ಧರಿಸಿದೆ. ಸದ್ಯದಲ್ಲೇ ಈ ಕುರಿತಂತೆ ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬರಲಿದೆ.

IRCTCಅಡುಗೆ ಸೇವಾ ದರವನ್ನು ಏರಿಕೆ ಮಾಡಿರುವುದರಿಂದ ಪ್ರಯಾಣಿಕರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಹೊಸ ಆದೇಶದ ಪ್ರಕಾರ, ಫಸ್ಟ್ ಕ್ಲಾಸ್ ಎಸಿಯಲ್ಲಿ ಚಹಾ ಬೆಲೆ 35ರು(6 ರು ಏರಿಕೆ) ಆಗಲಿದೆ, ಉಪಾಹಾರದ ಬೆಲೆ 140 ರು(7ರು ಏರಿಕೆ), ಊಟ ಹಾಗೂ ಡಿನ್ನರ್ ಬೆಲೆ 245(15 ರು ಏರಿಕೆ) ರು ಆಗಲಿದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!ವಂದೇ ಭಾರತ್ ಎಕ್ಸ್ ಪ್ರೆಸ್ ಮೆನು : ಮಫಿನ್, ಡೊನಟ್ಸ್, ಫೈವ್ ಸ್ಟಾರ್ ಡಿನ್ನರ್!

ಸೆಕೆಂಡ್ ಕ್ಲಾಸ್ ಎಸಿ, ಮೂರನೇ ದರ್ಜೆ ಎಸಿ, ಚೇರ್ ಕಾರ್ ದರ್ಜೆಯಲ್ಲಿ ಚಹಾ: 20 ರು(5 ರು ಏರಿಕೆ), ಉಪಾಹಾರ:105ರು(8 ರು ಏರಿಕೆ),
ಊಟ ಹಾಗೂ ಡಿನ್ನರ್:185 ರು(10 ರು ಏರಿಕೆ) ಆಗಲಿದೆ.

Railway to raise meal prices of Rajdhani, Shatabdi, Duronto trains

ಈ ರೈಲುಗಳಲ್ಲಿ ಪ್ರಾದೇಶಿಕ ಅಭಿರುಚಿಗೆ ತಕ್ಕಂತೆ ಸ್ನಾಕ್ಸ್ ನೀಡಲು ಕೂಡಾ ಇಲಾಖೆ ಮುಂದಾಗಿದೆ. ಈ ದರ ಪರಿಷ್ಕರಣೆ ಪ್ರಿಪೇಯ್ಡ್ ಆಹಾರ ಪದಾರ್ಥಗಳಿಗೂ ಅನ್ವಯವಾಗಲಿದೆ. ನೂತನ ದರ ಪಟ್ಟಿ ಜಾರಿಗೊಳ್ಳಲು ಇನ್ನೂ ಎರಡು ತಿಂಗಳುಗಳ ಕಾಲ ಹಿಡಿಯಬಹುದು ಎಂದು ತಿಳಿದು ಬಂದಿದೆ.

ಆದರೆ, ಹೊಸ ಸ್ನಾಕ್ಸ್ ಮೇಲೆ 50 ಪ್ಲಸ್ ಜಿಎಸ್ಟಿ ಹೆಚ್ಚುವರಿಯಾಗಿ ತೆರಬೇಕಾಗುತ್ತದೆ. ಗುಜರಾತಿ ಪ್ರಯಾಣಿಕರು ತಮ್ಮ ಊರಿನ ತಿನಿಸುಗಳಾದ ಧೋಕ್ಲಾ, ಫಾಫ್ಡಾ, ಬೆಂಗಾಲಿಗಳು ಫಿಶ್ ಫ್ರೈ, ಕೇರಳದವರು ಅಪ್ಪಂ, ಬೆಂಗಳೂರಿಗರು ಬಿಸಿಬೇಳೆಬಾತ್ ಆರ್ಡರ್ ಮಾಡಿದರೆ ಹೆಚ್ಚುವರಿ ಬೆಲೆ ತೆರಬೇಕಾಗುತ್ತದೆ. ಈ ಬಗ್ಗೆ ಇನ್ನೂ ಅಂತಿಮ ಆದೇಶ ಹೊರಬೀಳಬೇಕಿದೆ.

English summary
The Railway Board has decided to hike prices of meals on board Rajdhani, Shatabdi and Duronto trains, resulting in slight increase in their fares, according to a government order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X