ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆಗೆ ಕೊರೊನಾ ಹೊಡೆತ; ವಾರಕ್ಕೆ 450 ಕೋಟಿ ನಷ್ಟ

|
Google Oneindia Kannada News

ಹೈದರಾಬಾದ್, ಮಾರ್ಚ್ 19 : ಕೊರೊನಾದಿಂದ ಉಂಟಾಗಿರುವ ಆತಂಕದಿಂದಾಗಿ ಜನರ ಸಂಚಾರ ಕಡಿಮೆಯಾಗಿದೆ. ವಿವಿಧ ರಾಜ್ಯಗಳ ಸಾರಿಗೆ ನಿಗಮಗಳು ಮಾತ್ರವಲ್ಲ, ಭಾರತೀಯ ರೈಲ್ವೆಗೂ ಪ್ರಯಾಣಿಕರ ಕೊರತೆ ಬಿಸಿ ತಟ್ಟಿದೆ.

ಕಳೆದ ಒಂದು ವಾರದಲ್ಲಿ ಭಾರತೀಯ ರೈಲ್ವೆ ಸುಮಾರು 450 ಕೋಟಿ ನಷ್ಟವನ್ನು ಅನುಭವಿಸಿದೆ. 184 ರೈಲುಗಳ ಸಂಚಾರವನ್ನು ಪ್ರಯಾಣಿಕರ ಕೊರತೆಯ ಕಾರಣ ರದ್ದುಗೊಳಿಸಲಾಗಿದೆ. ಬುಧವಾರ 99 ರೈಲುಗಳು ರದ್ದಾಗಿವೆ.

ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ

ಮಂಗಳವಾರ ದೇಶದ ಪ್ರಮುಖ ಮಾರ್ಗಗಳ 85 ರೈಲುಗಳನ್ನು ರದ್ದು ಮಾಡಲಾಗಿತ್ತು. ಪಶ್ಚಿಮ ಮತ್ತು ಸೆಂಟ್ರಲ್ ವಲಯಗಳಲ್ಲಿಯೇ ಅಧಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

 ವೈರಲ್ ವಿಡಿಯೋ : ಸಂಚಾರಿ ಪೊಲೀಸರಿಂದ ಕೊರೊನಾ ಜಾಗೃತಿ ವೈರಲ್ ವಿಡಿಯೋ : ಸಂಚಾರಿ ಪೊಲೀಸರಿಂದ ಕೊರೊನಾ ಜಾಗೃತಿ

Railway Suffers 454 Core Loss Due To Coronaoutbreak

ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಕೆ ಮಾಡಿದರೆ ರೈಲ್ವೆಯಲ್ಲಿನ ಬುಕ್ಕಿಂಗ್ ಕ್ಯಾನ್ಸಲ್ ಶೇ 80ಕ್ಕೆ ಏರಿಕೆಯಾಗಿದೆ. ರದ್ದುಗೊಂಡ ರೈಲುಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ಯಾವುದೇ ಶುಲ್ಕವಿಲ್ಲದೇ ಪೂರ್ಣ ಹಣವನ್ನು ವಾಪಸ್ ನೀಡಲಾಗುತ್ತಿದೆ.

ಕೊರೊನಾ ಆತಂಕ: ಮೇಘಾಲಯದಲ್ಲಿ ಪ್ರವಾಸಿ ಸ್ಥಳಗಳು ಬಂದ್?ಕೊರೊನಾ ಆತಂಕ: ಮೇಘಾಲಯದಲ್ಲಿ ಪ್ರವಾಸಿ ಸ್ಥಳಗಳು ಬಂದ್?

ವಿವಿಧ ವಲಯಗಳ ಹಿರಿಯ ಅಧಿಕಾರಿಗಳ ಜೊತೆ ರೈಲ್ವೆ ಇಲಾಖೆ ಸಭೆಯನ್ನು ನಡೆಸಿದೆ. ಕೊರೊನಾ ಹರಡದಂತೆ ತಡೆಯಲು ರೈಲ್ವೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಗಿದೆ. ಜನರಿಗೆ ಅರಿವು ಮೂಡಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಕೊರೊನಾ ತಡೆಗೆ 'Covid -19 rapid response team' ಎಂಬ 6 ಜನರ ತಂಡವೊಂದನ್ನು ರಚನೆ ಮಾಡಲಾಗಿದೆ. ಪ್ರತಿ ರೈಲ್ವೆ ವಲಯದಿಂದ ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಉಳಿದ ಸಿಬ್ಬಂದಿಗೆ ಅವರು ಸೂಚನೆಗಳನ್ನು ನೀಡಲಿದ್ದಾರೆ.

English summary
Due to coronavirus outbreak railways have seen a decline of Rs 454 crore in its earnings over the last week. 184 trains have been cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X