ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ 16 ರೈಲು ಸಂಚಾರ ಬಂದ್

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳ ನಡುವಿನ ಮಾರ್ಗಗಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ 16 ರೈಲುಗಳ ಸೇವೆಯನ್ನು ಶಾಶ್ವತವಾಗಿ ನಿಲ್ಲಿಸಿದೆ. ಅನುವದ್ ಚಕ್ರವರ್ತಿ ಸಲ್ಲಿಸಿದ ಆರ್‌ಟಿಐಗೆ ಪ್ರತಿಕ್ರಿಯೆಯಾಗಿ ಆಗ್ನೇಯ ರೈಲ್ವೆ (ಎಸ್‌ಇಆರ್) ಇದನ್ನು ಬಹಿರಂಗಪಡಿಸಿದೆ. ರದ್ದಾದ ರೈಲುಗಳಲ್ಲಿ ರಾಂಚಿ-ಪಾಟ್ನಾ ಎಸಿ ಎಕ್ಸ್‌ಪ್ರೆಸ್ ಸೇರಿದೆ, ಇದು ಜಾರ್ಖಂಡ್ ರಾಜಧಾನಿ ರಾಂಚಿ ಮತ್ತು ಬಿಹಾರದ ರಾಜಧಾನಿ ಪಾಟ್ನಾ ನಡುವೆ ಕೊಡೆರ್ಮಾ, ಹಜಾರಿಬಾಗ್ ಪಟ್ಟಣ ಮತ್ತು ಬಾರ್ಕಕಾನಾ ಮೂಲಕ ಹಾದುಹೋಗುತ್ತದೆ. ಈ ರೈಲುಗಳನ್ನು ರದ್ದು ಮಾಡಲು ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆ ಕಾರಣವಾಗಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.

ಆಗ್ನೇಯ ರೈಲ್ವೆಯಿಂದ ಶಾಶ್ವತವಾಗಿ ನಿಲ್ಲಿಸಲ್ಪಡುವ ಇತರ ರೈಲುಗಳಲ್ಲಿ ಹೌರಾ-ಪುರುಲಿಯಾ ಎಕ್ಸ್‌ಪ್ರೆಸ್, ಖರಗ್‌ಪುರ್-ಪುರುಲಿಯಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಟಾಟಾ-ಲೋಕಮಾನ್ಯ ತಿಲಕ್ ಅಂತ್ಯೋದಯ ಎಕ್ಸ್‌ಪ್ರೆಸ್, ಶಾಲಿಮಾರ್-ಅದ್ರಾ ರಾಜ್ಯರಾಣಿ ಎಕ್ಸ್‌ಪ್ರೆಸ್, ಟಾಟಾ-ರಾಂಚಿ ಇಂಟರ್‌ಸಿಟಿ, ಜಾರ್‌ಗ್ರಾಮ-ಪುರುಲಿಯಾ ಬಿರ್ಸಾ ಮುಂಡಾ ಎಕ್ಸ್‌ಪ್ರೆಸ್ ಮತ್ತು ಖರಗಪುರ -ಹಿಜ್ಲಿ ಇಎಂಯು ಪ್ಯಾಸೆಂಜರ್ ನ ಎರಡೂ ಬದಿ ಸಂಚಾರ ನಿಲ್ಲಿಸಲಾಗಿದೆ.

ರಾಂಚಿ-ಪಾಟ್ನಾ ಎಸಿ ಎಕ್ಸ್‌ಪ್ರೆಸ್ ಜಾರ್ಖಂಡ್‌ನ ಹಜಾರಿಬಾಗ್ ಪಟ್ಟಣದ ಮೂಲಕ ಹಾದುಹೋಗುವ ಏಕೈಕ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಾಘಿದೆ. ಈಗ ಹಜಾರಿಬಾಗ್ ಟೌನ್ ನಿಲ್ದಾಣದಿಂದ ಗೂಡ್ಸ್ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಮೇ ತಿಂಗಳಲ್ಲಿ ರೈಲ್ವೇ ಹಜಾರಿಬಾಗ್ ಟೌನ್ ನಿಲ್ದಾಣವನ್ನು ದೇಶದ 6000 ನೇ ನಿಲ್ದಾಣವೆಂದು ಘೋಷಿಸಿತ್ತು. ಅಲ್ಲಿ ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲಾಗಿತ್ತು. ಆದರೆ ರೈಲ್ವೇಯ ಈ ಘೋಷಣೆಯ ನಂತರ ಈ ನಿಲ್ದಾಣದ ಮೂಲಕ ಇಲ್ಲಿಯವರೆಗೆ ಒಂದೇ ಒಂದು ಪ್ರಯಾಣಿಕ ರೈಲು ಸಂಚರಿಸಿಲ್ಲ.

Railway Permanently Stops These 16 Trains Operating Between Jharkhand, Bihar and West Bengal

ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

18633 ರಾಂಚಿ-ಪಾಟ್ನಾ ಎಸಿ ಎಕ್ಸ್‌ಪ್ರೆಸ್

18634 ಪಾಟ್ನಾ-ರಾಂಚಿ ಎಸಿ ಎಕ್ಸ್‌ಪ್ರೆಸ್

12865 ಹೌರಾ-ಪುರುಲಿಯಾ ಎಕ್ಸ್‌ಪ್ರೆಸ್

12866 ಪುರುಲಿಯಾ-ಹೌರಾ ಎಕ್ಸ್‌ಪ್ರೆಸ್

22875 ಖರಗ್‌ಪುರ-ಪುರುಲಿಯಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್

22876 ಪುರುಲಿಯಾ-ಖರಗ್‌ಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್

22886 ಟಾಟಾ-ಲೋಕಮಾನ್ಯ ತಿಲಕ್ ಅಂತ್ಯೋದಯ ಎಕ್ಸ್‌ಪ್ರೆಸ್

22885 ಲೋಕಮಾನ್ಯ ತಿಲಕ್-ಟಾಟಾ ಅಂತ್ಯೋದಯ ಎಕ್ಸ್‌ಪ್ರೆಸ್

22861 ಶಾಲಿಮಾರ್ - ಅದ್ರಾ ರಾಜ್ಯರಾಣಿ ಎಕ್ಸ್‌ಪ್ರೆಸ್

22862 ಆದ್ರಾ - ಶಾಲಿಮಾರ್ ರಾಜ್ಯರಾಣಿ ಎಕ್ಸ್‌ಪ್ರೆಸ್

18113 ಟಾಟಾ-ರಾಂಚಿ ಇಂಟರ್‌ಸಿಟಿ

18114 ರಾಂಚಿ-ಟಾಟಾ ಇಂಟರ್‌ಸಿಟಿ

22821 ಜಾರ್ಗ್ರಾಮ - ಪುರುಲಿಯಾ ಬಿರ್ಸಾ ಮುಂಡಾ ಎಕ್ಸ್‌ಪ್ರೆಸ್

22822 ಪುರುಲಿಯಾ - ಜರ್‌ಗ್ರಾಮ ಬಿರ್ಸಾ ಮುಂಡಾ ಎಕ್ಸ್‌ಪ್ರೆಸ್

68643 ಖರಗ್‌ಪುರ-ಹಿಜ್ಲಿ ಇಎಂಯು ಪ್ಯಾಸೆಂಜರ್

68644 ಹಿಜ್ಲಿ-ಖರಗ್‌ಪುರ್ ಇಎಂಯು ಪ್ಯಾಸೆಂಜರ್

ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ತಿತಿಗತಿ

ದೇಶಾದ್ಯಂದ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಮದ್ಯೆ ಎಲ್ಲವೂ ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಹಿನ್ನೆಯಲ್ಲಿ ಕೆಲ ರೂಲು ಸಂಚಾರ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ರಾಜ್ಯದಲ್ಲಿ ಈವರೆಗೆ 17,10,058 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 22,898 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 16,87,048 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ ಬಿಹಾರದಲ್ಲಿ ಈವರೆಗೆ ಒಟ್ಟು 7,26,036 ಜನರಿಗೆ ಸೋಂಕು ತಗುಲಿದ್ದು 9661 ಜನ ಮಾಹಾಮಾರಿಗೆ ಬಲಿಯಾಗಿದ್ದಾರೆ. ಜೊತೆಗೆ 7,16,345 ಜನ ಗುಣಮುಖರಾಗಿದ್ದಾರೆ. ಇನ್ನೂ ಪಶ್ಚಿಮ ಬಂಗಾಳದಲ್ಲಿ 15,82,813 ಜನರಿಗೆ ಸೋಂಕು ತಗುಲಿದ್ದು 19,007 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 15,56,315 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

English summary
Indian Railways has permanently stopped the operation of eight pairs of trains connecting three states – Jharkhand, Bihar, and West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X