ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ವಿಡಿಯೋ ಟ್ವೀಟ್ ಮಾಡಿದ ಕೇಂದ್ರ ಸಚಿವಗೆ ನೆಟ್ಟಿಗರಿಂದ ತಪರಾಕಿ

|
Google Oneindia Kannada News

ನವದೆಹಲಿ, ಫೆಬ್ರವರಿ 11: ತಾವು ಬಿಡುಗಡೆಗೊಳಿಸಿದ ಹೊಸ ರೈಲ್ವೆ 'ವಂದೆ ಭಾರತ್ ಎಕ್ಸ್‌ಪ್ರೆಸ್‌'ನ ತಿದ್ದಿದ ವಿಡಿಯೋ ಒಂದನ್ನು ಟ್ವೀಟ್ ಮಾಡಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ನಗೆಪಾಟಲಿಗೆ ಈಡಾಗಿದ್ದಾರೆ.

ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ

ವಂದೆ ಭಾರತ್ ರೈಲಿನ ವಿಡಿಯೋ ಟ್ವೀಟ್‌ ಮಾಡಿರುವ ಪಿಯೂಷ್ ಗೋಯಲ್, ಇದು ವಿಮಾಣವೂ ಹೌದು, ಹಕ್ಕಿಯೂ ಹೌದು ಎಂದು ಬರೆದುಕೊಂಡಿದ್ದಾರೆ, ವಿಡಿಯೋನಲ್ಲಿ ರೈಲು ಬಹು ವೇಗವಾಗಿ ಹೋಗುತ್ತಿದೆ. ಆದರೆ ಇದು ತಿದ್ದಿದ ವಿಡಿಯೋ ಆಗಿದ್ದು, ನೆಟ್ಟಿಗರು ಗೋಯಲ್ ವಿರುದ್ಧ ತಿರುಗಿಬಿದ್ದಿದ್ದಾರೆ.

ಗೋಯಲ್ ಹಾಕಿರುವ ವಿಡಿಯೋ ತಿದ್ದಿದ್ದಾಗಿದ್ದು, ಫಾಸ್ಟ್‌ ಫಾರ್ವರ್ಡ್‌ ತಂತ್ರಜ್ಞಾನ ಬಳಸಿ ರೈಲಿನ ವೇಗವನ್ನು ಹೆಚ್ಚು ಮಾಡಲಾಗಿದೆ. ಅದನ್ನು ಟ್ವಿಟ್ಟರ್‌ಗೆ ಹಾಕಿರುವ ಪಿಯೂಷ್ ರೈಲಿನ ವೇಗವನ್ನು ಕೊಂಡಾಡಿದ್ದಾರೆ.

Railway minister Piyush Goyal tweeted doctored video

ಸಚಿವರು ಹಾಕಿರುವ ತಿದ್ದಿರುವ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಗೋಯಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯು ಜನರಿಗೆ ಸುಳ್ಳು ಹೇಳುವ ಮೂಲಕ ಮರುಳು ಮಾಡುವುದು ಮುಂದುವರೆದಿದೆ ಎಂದು ಹೇಳಿದ್ದಾರೆ.

TV5 ವಿರುದ್ಧ ಪ್ರತಿಭಟನೆ ನಿಲ್ಲಿಸಲು ಕಾರ್ಯಕರ್ತರಿಗೆ ಕುಮಾರಸ್ವಾಮಿ ಮನವಿ TV5 ವಿರುದ್ಧ ಪ್ರತಿಭಟನೆ ನಿಲ್ಲಿಸಲು ಕಾರ್ಯಕರ್ತರಿಗೆ ಕುಮಾರಸ್ವಾಮಿ ಮನವಿ

ಗೋಯಲ್ ಹಾಕಿರುವ ತಿದ್ದಿದ ವಿಡಿಯೋದ ನಿಜವಾದ ವಿಡಿಯೋ ಹಾಕಿರುವ ಕೆಲವರು ಇದು ಮಾನ್ಯ ಸಚಿವರ ನಿಜವಾದ ರೈಲು, ಉಳಿದ ರೈಲುಗಳ ವೇಗಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಸತ್ಯ ತೆರೆದಿಟ್ಟಿದ್ದಾರೆ.

ಕೆಲವರು ವಿಡಿಯೋವನ್ನು ಇನ್ನಷ್ಟು ಫಾಸ್ಟ್‌ ಫಾರ್ವರ್ಡ್ ಮಾಡಿ ಇದನ್ನು ಬಳಸಿ, ಈಗ ನಿಮ್ಮ ರೈಲು ಜಪಾನ್‌ನ ಬುಲೆಟ್ ಟ್ರೇನ್‌ಗಿಂತಲೂ ವೇಗವಾಗಿ ಓಡುತ್ತಿರುವಂತೆ ಕಾಣುತ್ತದೆ ಎಂದು ಕಾಲೆಳೆದಿದ್ದಾರೆ.

English summary
Railway minister Piyush Goyal tweeted doctored video and tweeps slap by comments. He tweeted Vande Bharat rails video in which it going faster. but fact is that is doctored, video is fast forwarded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X