ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೇ ಇಲಾಖೆಯಿಂದ ಪ್ರಮುಖ ನಿರ್ಧಾರ

By Sachhidananda Acharya
|
Google Oneindia Kannada News

ನವದೆಹಲಿ, ಅಕ್ಟೋಬರ್ 2: ಕಳೆದ ಎರಡು ದಿನಗಳಲ್ಲಿ ರೈಲ್ವೇ ಸುರಕ್ಷತೆಗೆ ಸಂಬಂಧಿಸಿದಂತೆ ರೈಲ್ವೇ ಇಲಾಖೆ ಸಚಿವ ಪೀಯೂಷ್ ಗೋಯಲ್ ಸರಣಿ ಮ್ಯಾರಥಾನ್ ಸಭೆಗಳನ್ನು ನಡೆಸಿದ್ದಾರೆ.

ಒಟ್ಟು 20 ಗಂಟೆಗೂ ಹೆಚ್ಚಿನ ಸಭೆ ನಡೆಸಲಾಗಿದ್ದು, ರೈಲ್ವೇ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ತೀರ್ಮಾನಗಳನ್ನು ರೈಲ್ವೇ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ರೈಲ್ವೇ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಪಾದಾಚಾರಿ ಮೇಲ್ಸೇತುವೆಗಳ ನಿರ್ಮಾಣ, ಹೆಚ್ಚಿನ ಎಸ್ಕಲೇಟರ್ ಗಳ ಅಳವಡಿಕೆ ಇವುಗಳಲ್ಲಿ ಸೇರಿವೆ.

Railway Minister Piyush Goyal orders compulsory foot overbridges, more escalators at stations

ರೈಲ್ವೇ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ತೀರ್ಮಾನಗಳು ಹೀಗಿವೆ,

  • ಎಲ್ಲಾ ಸಬ್ ಅರ್ಬನ್ ರೈಲ್ವೇ ನಿಲ್ದಾಣಕ್ಕೂ ಒಂದು ವಾರದೊಳಗೆ ಮಲ್ಟಿಡಿಸಿಪ್ಲಿನರಿ ಅಡಿಟ್ ತಂಡ ಭೇಟಿ ನೀಡಿ ಕುಂದು ಕೊರತೆಗಳನ್ನು ಪತ್ತೆ ಹಚ್ಚಬೇಕು.
  • ಮುಂಬೈನ ಎಲ್ಲಾ ಸಬ್ ಅರ್ಬನ್ ರೈಲ್ವೇ ನಿಲ್ದಾಣಗಳಲ್ಲೂ ಸಿಸಿಟಿವಿ ಅಳವಡಿಕೆ.
  • ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಸರಕಾರಗಳ ಜತೆ ಇರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು.
  • ಅಹಿತಕರ ಘಟನೆಗಳು ನಡೆಯಬಹುದಾದ ಸೂಕ್ಷ್ಮ ಪ್ರದೇಶಗಳನ್ನು ತಕ್ಷಣ ಗುರುತಿಸಿ ಈ ಬಗ್ಗೆ ಕಾರ್ಯಪ್ರವೃತ್ತವಾಗಬೇಕು.
  • ಸುರಕ್ಷತೆ ದೃಷ್ಠಿಯಿಂದ ದೇಶದಾದ್ಯಂತ ಇರುವ 40 ಯಾರ್ಡ್ಸ್ ಗಳನ್ನು 1,000 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಮ.
  • ಕೇಂದ್ರ ಕಚೇರಿಯ 200 ಸಿಬ್ಬಂದಿಗಳನ್ನು ತಳಮಟ್ಟದಲ್ಲಿ ಕಾರ್ಯನಿರ್ವಹಿಸಲು ನಿಯೋಜನೆ
  • ಮುಂಬೈನ ಜನದಟ್ಟಣೆಯ ಸಬ್ ಅರ್ಬನ್ ರೈಲ್ವೇ ನಿಲ್ದಾಣಗಳಿಗೆ ಹೆಚ್ಚಿನ ಎಸ್ಕಲೇಟರ್ ಗಳ ಅಳವಡಿಕೆ.
  • ನಿಲ್ದಾಣಗಳಲ್ಲಿ ಕಡ್ಡಾಯ ಪಾದಾಚಾರಿ ಮೇಲ್ಸೇತುವೆ ನಿರ್ಮಿಸಲು ಕ್ರಮ
  • ಎಲ್ಲಾ ಸಬ್ ಅರ್ಬನ್ ರೈಲ್ವೇ ನಿಲ್ದಾಣಗಳು ಮೇಲ್ದರ್ಜೆಗೆ
  • ದೇಶದ 75 ನಿಲ್ದಾಣಗಳಿಗೆ ಬುದ್ಧಿವಂತ ಹಾಗೂ ದಕ್ಷ ನಿಲ್ದಾಣ ನಿರ್ದೇಶಕರ ನೇಮಕ
  • ಮುಂದಿನ 15 ತಿಂಗಳಲ್ಲಿ ಮುಂಬೈನ ಎಲ್ಲಾ ರೈಲುಗಳಲ್ಲಿ ಸಿಸಿಟಿ ಕ್ಯಾಮೆರಾಗಳ ಅಳವಡಿಕೆ.
English summary
Days after a stampede at Mumbai’s Elphinstone Road railway station Railway Minister Piyush Goyal called a meeting of the Railway Board to take decisions in a bid to ease passenger congestion at railway stations across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X