ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣದ ಹಂಗು ತೊರೆದು ಪ್ರಯಾಣಿಕನ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ

|
Google Oneindia Kannada News

ನವದೆಹಲಿ, ಜೂ. 24: ರೈಲ್ವೆ ನಿಲ್ದಾಣಗಳಲ್ಲಿ ನಿರ್ಲಕ್ಷ್ಯದಿಂದ ಇಲ್ಲವೇ ವಿಧಿಯ ಆಟವೇ ಎಂಬಂತೆ ಪ್ರಾಣಕ್ಕೆ ಎರವಾಗುವಂತಹ ಘಟನೆಗಳು ನಡೆಯುತ್ತಿರುತ್ತವೆ ಇವು ಒಮ್ಮೆಲೇ ಜೀವ ಹಿಂಡುತ್ತವೆ. ಈ ವೇಳೆ ಆಪತ್ಭಾಂಧವರಂತೆ ಕೆಲವರು ರಕ್ಷಣೆ ಮಾಡುತ್ತಾರೆ. ಅವರು ದೇವರ ರೂಪವೇ ಸರಿ ಎಂದು ಬದುಕುಳಿದವರು ಉದ್ಘರಿಸುವುದು ಸಾಮಾನ್ಯ.

ಇಂತಂಹದ್ದೇ ಘಟನೆಯೊಂದನ್ನು ಭಾರತೀಯ ರೈಲ್ವೆ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ವಾರಕೊಮ್ಮೆಯಾದರು ವ್ಯಕ್ತಿಗಳು ರೈಲಿಗೆ ಅಚನಾಕ್ಕಾಗಿ ರೈಲಿಗೆ ಸಿಲುಕಿ ದುರಂತ ಅಂತ್ಯ ಕಾಣುವುದು. ಇಲ್ಲವೇ ಕಂಬಿಗಳ ಮೇಲೆ ಹಾಗೂ ರೈಲು ಹತ್ತಲು ಹೋಗಿ ಕೆಳಗೆ ಸಿಲುಕಿ ಮೃತರಾಗುವ ಹೃದಯವಿದ್ರಾವಕ ಘಟನೆಗಳು ಸಂಭವಿಸುತ್ತವೆ.

ಭಾರತೀಯ ರೈಲ್ವೆ ಆಧುನೀಕರಣಕ್ಕೆ ವಿಶ್ವ ಬ್ಯಾಂಕ್‌ ನೆರವುಭಾರತೀಯ ರೈಲ್ವೆ ಆಧುನೀಕರಣಕ್ಕೆ ವಿಶ್ವ ಬ್ಯಾಂಕ್‌ ನೆರವು

ಈ ವೇಳೆ ರೈಲ್ವೇ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಹಲವರನ್ನು ಬದುಕಿಸಿದ್ದು, ಇದೆ. ಇತಹ ಘಟನೆ ಈಗ ನಡೆದಿದೆ.

Railway employee save the life of a passenger

ರೈಲು ಬರುವ ವೇಳೆಗೆ ರೈಲ್ವೆ ಫ್ಲಾಟ್ ಮೇಲೆ ತಿರುಗಾಡುತ್ತಿದ್ದ ರೈಲ್ವೆ ಸಿಬ್ಬಂದಿ ಸತೀಶ್ ಕುಮಾರ್ ಎಂಬುವವರು ಪ್ರಯಾಣಿಕ ರೈಲ್ವೆ ಹಳಿ ಮೇಲೆ ಬಿದ್ದಿರುವುದನ್ನು ಕಂಡು ತಕ್ಷಣವೇ ರೈಲು ಬರುತ್ತಿರುವುದನ್ನು ಗಮನಿಸದೇ ಹಾರಿ ಹಳಿಯ ಮೇಲೆ ಬಿದ್ದಿದ್ದ ಆ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 2.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸತೀಶ್‌ ಅವರ ಅವರ ಧೈರ್ಯ ಹಾಗೂ ಸಮಯಪ್ರಜ್ಞೆ ಜೀವಪರ ತುಡಿತವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಜೂನ್ 21, ಇಂದಿನಿಂದ ರೈಲಿನಲ್ಲಿ ರಾಮಾಯಣ ಯಾತ್ರೆ- ಟಿಕೆಟ್ ದರ ಇತ್ಯಾದಿ ವಿವರಜೂನ್ 21, ಇಂದಿನಿಂದ ರೈಲಿನಲ್ಲಿ ರಾಮಾಯಣ ಯಾತ್ರೆ- ಟಿಕೆಟ್ ದರ ಇತ್ಯಾದಿ ವಿವರ

ರೈಲು ನಿಲ್ದಾಣದ 24 ಸೆಕೆಂಡುಗಳ ಸಿಸಿಟಿವಿ ದೃಶ್ಯಗಳಲ್ಲಿ, ರೈಲ್ವೆ ಸಿಬ್ಬಂದಿ ಎಚ್ ಸತೀಶ್ ಕುಮಾರ್ ಮುಂಬರುವ ಗೂಡ್ಸ್ ರೈಲಿಗೆ ಹಸಿರು ನಿಶಾನೆ ತೋರಲು ಪ್ಲಾಟ್‌ಫಾರ್ಮ್‌ನತ್ತ ನಡೆದುಕೊಂಡು ಹೋಗುತ್ತಿದ್ದರು. ಆಗ ಇದ್ದಕ್ಕಿದ್ದಂತೆ ತಿರುಗಿದಾಗ ಬಿದ್ದಿರುವ ಹಳಿಯ ಮೇಲೆ ಇದ್ದ ವ್ಯಕ್ತಿಯನ್ನು ಓಡಿಹೋಗಿ ರಕ್ಷಿಸಿದರು. ಆದರೆ ಆ ವ್ಯಕ್ತಿ ಅಚಾನಕ್ಕಾಗಿ ಬಿದ್ದನೋ ಅಥವಾ ಆತ್ಮಹತ್ಯೆಗೆ ಯತ್ನಿಸಿದನೋ ತಿಳಿದು ಬಂದಿಲ್ಲ ಎನ್ನಲಾಗಿದೆ.

Railway employee save the life of a passenger

ಈ ವಿಡಿಯೋವನ್ನು ಕರ್ನಾಟಕದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂಡ ಕೂ ಮಾಡಿದ್ದು, ಭಾರತೀಯ ರೈಲ್ವೆ ಸಿಬ್ಬಂದಿಯಾದ ಎಚ್.ಸತೀಶ್ ಅವರು ತನ್ನ ಜೀವದ ಹಂಗು ತೊರೆದು, ಹಳಿಗಳ ಮೇಲೆ ಬಿದ್ದಿದ್ದ ವ್ಯಕ್ತಿಯ ಜೀವವನ್ನು ಉಳಿಸುವುದರ ಮೂಲಕ ಇಂದು ರಿಯಲ್ ಹೀರೋ ಆಗಿದ್ದಾರೆ. ಇಂತಹ ಧೈರ್ಯಶಾಲಿ ಹಾಗೂ ಪರಿಶ್ರಮಿ ಸಿಬ್ಬಂದಿಯಿಂದಲೇ ಇಂದಿಗೂ ನೂರಾರು ಜನರ ಜೀವ ಉಳಿಯುತ್ತಿದೆ. ನಿಮ್ಮ ಈ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ ಎಂದು ಹೇಳಿದ್ದಾರೆ.

English summary
When the train arrived at the railway flat, a railway crew member, Satish Kumar, saw the passenger on the railway track and immediately jumped on the train and saved the life of the man who was on the train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X