ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ ನಲ್ಲಿ ಎಲ್ಲರಿಗೂ ಸುರೇಶ್ ಪ್ರಭು ನೀಡಿದ್ದೇನು?

By Mahesh
|
Google Oneindia Kannada News

ಬೆಂಗಳೂರು, ಫೆ.27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೊದಲ ಪರಿಪೂರ್ಣ ರೈಲ್ವೆ ಬಜೆಟ್‌ ಹಾಗೂ ಸುರೇಶ್ ಪ್ರಭು ಅವರು ರೈಲ್ವೆ ಸಚಿವರಾಗಿ ಚೊಚ್ಚಲ ಬಜೆಟ್ ಗುರುವಾರ(ಫೆ.26) ಮಧ್ಯಾಹ್ನ ಮಂಡಿಸಿದರು. ಪ್ರಭು ಅವರ 'ಪಂಚವಾರ್ಷಿಕ' ಯೋಜನೆ ತತ್ತ್ವದ ಬಜೆಟ್ ಗೆ ವಿಪಕ್ಷಗಳು ಹಾಗೂ ಜನ ಸಾಮಾನ್ಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನಸಾಮಾನ್ಯರ ಮೆಚ್ಚುಗೆಯ ಬಜೆಟ್ ನೀಡಿದ್ದೇನೆ. ಬಜೆಟ್ ಒಂದು ವರ್ಷಕ್ಕಲ್ಲ, ಐದು ವರ್ಷಗಳಿಗೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ. ರೈಲ್ವೆ ಇಲಾಖೆ ನಷ್ಟದಲ್ಲಿ ಚಲಿಸುತ್ತಿದ್ದರೂ ಪ್ರತಿ ವರ್ಷ ಬಜೆಟ್ ಬಂದಾಗ ನಿರೀಕ್ಷೆಗಳು ಗರಿಗೆದರುತ್ತವೆ. [ರೈಲ್ವೆ ಬಜೆಟ್ 2015: ಸುರೇಶ್ ಪ್ರಭು ಪ್ರಥಮ ಚುಂಬನ]

ದೇಶದ ಸಂಚಾರ ಸಂಪರ್ಕ ನಾಡಿಯಾಗಿರುವ ರೈಲಿನಲ್ಲಿ ದಿನನಿತ್ಯ 2.3 ಕೋಟಿ ಜನ ಸಂಚರಿಸುತ್ತಾರೆ. ಅದರೆ, ಈ ಬಾರಿ ಬಜೆಟ್ ಜನ ಸಾಮಾನ್ಯರಿಗಂತೂ ಗೊಂದಲದ ಗೂಡಾಗಿದೆ.

ರೈಲ್ವೆ ಬಜೆಟ್ ಎಂದರೆ ನೂರಾರು ಹೊಸ ಯೋಜನೆ, ಹೊಸ ರೈಲುಗಳ ಘೋಷಣೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಪ್ರಭು ಸಕತ್ ಟ್ವಿಸ್ಟ್ ನೀಡಿದ್ದಾರೆ. ಟಿಕೆಟ್ ದರ ಏರಿಕೆ ಮಾಡದಿದ್ದರೂ ಸರಕು ಸಾಗಣೆ ದರ ಏರಿಸಿ ಪರೋಕ್ಷವಾಗಿ ಸಿಮೆಂಟ್ ಸೇರಿದಂತೆ ಪೂರಕ ಉದ್ಯಮಗಳಿಗೆ ಹೊಡೆತ ನೀಡಿದ್ದಾರೆ. ಇದರ ಬಿಸಿ ಜನ ಸಾಮಾನ್ಯರಿಗೂ ತಟ್ಟದೆ ಬಿಡದು. ಹಾಗದರೆ, ಬಜೆಟ್ ನಲ್ಲಿ ಎಲ್ಲರಿಗೂ ಏನು ಸಿಕ್ಕಿತು. ನಿಮ್ಮ ಮುಂದೆ ಚಿತ್ರ ಸರಣಿಯಲ್ಲಿ ಮಿಕ್ಕ ವಿವರಣೆ ಇದೆ

ಜನ ಸಾಮಾನ್ಯರಿಗೆ ಸಿಕ್ಕಿದ್ದೇನು?

ಜನ ಸಾಮಾನ್ಯರಿಗೆ ಸಿಕ್ಕಿದ್ದೇನು?

* ಜನ ಸಾಮಾನ್ಯರಿಗೆ ಬಜೆಟ್ ಹಿತಕರವಾಗಿದೆ. ಪ್ರಯಾಣ ದರ ಏರಿಕೆ ಮಾಡಿಲ್ಲ. ತತ್ಕಾಲ್ ಟಿಕೆಟ್ ದರವೂ ಏರಿಲ್ಲ.
* ತ್ವರಿತ ಗತಿಯಲ್ಲಿ ಟಿಕೆಟ್ ಪಡೆಯಲು ಆನ್ ಲೈನ್ ಹಾಗೂ ಮೊಬೈಲ್ ಫೋನ್ ಸೇವೆ ಒದಗಿಸಲಾಗಿದೆ.
* ಅನೀರಿಕ್ಷಿತ ಪ್ರಯಾಣದ ಸಂದರ್ಭದಲ್ಲಿ 5 ನಿಮಿಷದಲ್ಲೇ ಕಾಯ್ದಿರಿಸದ ಟಿಕೆಟ್ ಗಳು ಪ್ರಯಾಣಿಕರಿಗೆ ಲಭ್ಯ
* ಸ್ವಚ್ಛತೆ, ಸುರಕ್ಷತೆಗೆ ಅದ್ಯತೆ ನೀಡಲಾಗಿದೆ. ಬಯೋ ಟಾಯ್ಲೆಟ್ ಗಳು ಜನಪ್ರಿಯಗೊಳ್ಳುವ ನಿರೀಕ್ಷೆ

ಉದ್ಯೋಗ, ನೇಮಕಾತಿ ಅವಕಾಶ

ಉದ್ಯೋಗ, ನೇಮಕಾತಿ ಅವಕಾಶ

ರೈಲ್ವೆ ನಿಲ್ದಾಣ, ಸಂಶೋಧನಾ ಕೇಂದ್ರ, ಕೋಚ್ ಫ್ಯಾಕ್ಟರಿ ಸೇರಿದಂತೆ ಹೊಸ ಯೋಜನೆಗಳಿಗೆ ನೇಮಕಾತಿ ನಡೆಯಬೇಕಿದೆ. ಹೀಗಾಗಿ ಸುಮಾರು 50,000 ಉದ್ಯೋಗ ಅವಕಾಶ ಕೊಂಕಣ್ ರೈಲ್ವೆ ಒಂದರಲ್ಲೇ ಸಿಗಲಿದೆ.

ಮಹಿಳಾ ಸುರಕ್ಷತೆ

ಮಹಿಳಾ ಸುರಕ್ಷತೆ

* ನಿರ್ಭಯ ಫಂಡ್ ನಿಂದ 1,000 ಕೋಟಿ ರು ಪಡೆದುಕೊಂಡು ರೈಲಿನಲ್ಲಿ ಸಂಚರಿಸುವ ಮಹಿಳೆಯರಿಗೆ ಭದ್ರತೆ ಒದಗಿಸಲಾಗುವುದು.
* ಮಹಿಳಾ ಕೋಚ್ ಗಳಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ
* ಅಂಗವಿಕಲರು, ವೃದ್ಧರು, ಮಹಿಳೆಯರು ಆನ್ ಲೈನ್ ಮೂಲಕದ ವ್ಹೀಲ್ ಚೇರ್ ಬುಕ್ಕಿಂಗ್ ಮಾಡಿಕೊಳ್ಳಬಹುದು.
* ಗರ್ಭಿಣಿಯರಿಗೆ ಲೋಯರ್ ಬರ್ಥ್ ನಲ್ಲೇ ಸೀಟು ಕಾಯ್ದಿರಿಸಲು ವ್ಯವಸ್ಥೆ.
* 24X7 ಸಹಾಯವಾಣಿ 138 ಹಾಗೂ 182 ಟೋಲ್ ಫ್ರೀ ನಂಬರ್ ದೂರುಗಳಿಗೆ ನೀಡಲಾಗಿದೆ.

ಹಿರಿಯ ನಾಗರಿಕರಿಗೆ

ಹಿರಿಯ ನಾಗರಿಕರಿಗೆ

* ಹಿರಿಯ ನಾಗರಿಕರಿಗೆ ಮೀಸಲಿರುವ ಲೋಯರ್ ಬರ್ಥ್ ಸೀಟುಗಳ ಸಂಖ್ಯೆ ಹೆಚ್ಚಳ.
* ರೈಲ್ವೆ ಬೋಗಿಯ ಮಧ್ಯಭಾಗದ ಸೀಟುಗಳು ಹಿರಿಯ ನಾಗರಿಕರಿಗೆ ಮೀಸಲು.
* ಪ್ರಮುಖ ನಿಲ್ದಾಣಗಳಲ್ಲಿ ಲಿಫ್ಟ್ ಹಾಗೂ ಎಸ್ಕಲೇಟರ್ ಗಳ ಅಳವಡಿಕೆ.
* ಆನ್ ಲೈನ್ ಮೂಲಕ ವ್ಹೀಲ್ ಚೇರ್ ಬುಕ್ಕಿಂಗ್ ವ್ಯವಸ್ಥೆ.
* ಹಿರಿಯ ನಾಗರಿಕರಿಗೆ ನೆರವಾಗುವಂತೆ ಟಿಟಿಇಗಳಿಗೆ ಸೂಚನೆ. ಇನ್ನೂ ಇದೆ

ರೈತರಿಗೆ, ರಕ್ಷಣಾ ಇಲಾಖೆಗೆ

ರೈತರಿಗೆ, ರಕ್ಷಣಾ ಇಲಾಖೆಗೆ

ಕಿಸನ್ ಯಾತ್ರಾ ವಿಶೇಷ ರೈಲು ಯೋಜನೆ ಪ್ರಕಟ. ರೈತರ ಹಣ್ಣು ಸಂಸ್ಕಾರಕ ಘಟಕಕ್ಕೆ ನೆರವಾಗುವ ಕಾರ್ಗೋ ರೈಲುಗಳನ್ನು ಘೊಷಿಸಲಾಗಿದೆ.600ಕ್ಕೂ ಅಧಿಕ ತಾಣಗಳಲ್ಲಿ ರಕ್ಷಣಾ ಸಾರಿಗೆ ವ್ಯವಸ್ಥೆ ಸುಲಭ ಸಂಚಾರಕ್ಕೆ ವ್ಯವಸ್ಥೆ.

ಅಂಗವಿಕಲರಿಗೆ

ಅಂಗವಿಕಲರಿಗೆ

* ಆಯ್ದ ನಿಲ್ದಾಣಗಳಲ್ಲಿ ಆನ್ ಲೈನ್ ಮೂಲಕ ವ್ಹೀಲ್ ಚೇರ್ ಬುಕ್ಕಿಂಗ್.
* ಪ್ರಮುಖ ನಿಲ್ದಾಣಗಳಲ್ಲಿ ಲಿಫ್ಟ್ ಹಾಗೂ ಎಸ್ಕಲೇಟರ್ ಗಳನ್ನು ಅಳವಡಿಸಲಾಗುತ್ತದೆ.
* ಬ್ರೈಲ್ ಅಧಾರಿತ ಕೋಚ್ ಗಳನ್ನು ಅಳವಡಿಸಲು ಯೋಜನೆ.
* ಬೋಗಿಗಳಿಗೆ ಪ್ರವೇಶಿಸಲು ವಿಶೇಷ ಬಾಗಿಲುಗಳ ನಿರ್ಮಾಣ.

ಪರಿಸರ ಸಂರಕ್ಷಣೆ

ಪರಿಸರ ಸಂರಕ್ಷಣೆ

17,000 ಬಯೋ ಟಾಯ್ಲೆಟ್ ಅಳವಡಿಸಲು ಯೋಜನೆ. ಇಂಧನ ಪುನರ್ಬಳಕೆಗೆ ಹೆಚ್ಚಿನ ಆದ್ಯತೆ. 34,388 ಬಯೋ ಟಾಯ್ಲೆಟ್ ಅಳವಡಿಕೆ.
ಸೌರಶಕ್ತಿ ಯೋಜನೆಗೆ ಒತ್ತು 1000 ಮೆ.ವ್ಯಾ ಸೌರ ಘಟಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಗತ.

ಕೈಗಾರಿಕಾ

ಕೈಗಾರಿಕಾ

ಮೇಕ್ ಇನ್ ಇಂಡಿಯಾ, ಸ್ವಚ್ಛ್ ಭಾರತ್, ಸಿಲ್ಕ್ ಇಂಡಿಯಾ, ಡಿಜಿಟಲ್ ಇಂಡಿಯಾ ಯೋಜನೆಯ ಜೊತೆಗೆ ರೈಲ್ವೆ ಯೋಜನೆಗಳು ಸಾಕಾರಗೊಳ್ಳಲಿವೆ.
* ಬುಲೆಟ್ ಟ್ರೈನ್ ಭಾರತದಲ್ಲೇ ನಿರ್ಮಾಣಕ್ಕೆ ಆದ್ಯತೆ.
* ಪಿಎಸ್ ಯು, TRANSLOC ಮೂಲಕ ಸರಕು ಸಾಗಣೆಗೆ ಆದ್ಯತೆ.

ಸುರಕ್ಷತೆ

ಸುರಕ್ಷತೆ

ಹಿರಿಯ ನಾಗರಿಕರು, ಗರ್ಭಿಣಿಯರು, ಅಂಗವಿಕಲರು, ಅಂಧರು, ಮಹಿಳೆಯರ ಸುರಕ್ಷತೆಗೆ ವಿವಿಧ ಯೋಜನೆ ಪ್ರಕಟ.
3438 ಲೆವಲ್ ಕ್ರಾಸಿಂಗ್ ಸಮಸ್ಯೆ ಬಗೆಹರಿಸಲು 6581 ಕೋಟಿ ರು ಮೀಸಲು.
ಆಡಿಯೋ ವಿಷ್ಯುವಲ್ ವಾರ್ನಿಂಗ್ ನೀಡಲು ಇಸ್ರೋ ತಂತ್ರಜ್ಞಾನ ಬಳಕೆ.
ರೈಲು ಸಂಚಾರ, ರೈಲಿನಲ್ಲಿರುವ ಖಾಲಿ ಸೀಟುಗಳ ಟ್ರ್ಯಾಕಿಂಗ್ ವ್ಯವಸ್ಥೆ

ಪ್ರವಾಸೋದ್ಯಮ

ಪ್ರವಾಸೋದ್ಯಮ

ಮಹಾತ್ಮಾ ಗಾಂಧೀಜಿ ಅವರು ಭಾರತಕ್ಕೆ ಹಿಂತಿರುಗಿದ 100ನೇವರ್ಷಾಚರಣೆ ನಿಮಿತ್ತ ವಿಶೇಷ ರಿಅಲು, ಕಿಸಾನ್ ಯಾತ್ರಾ, ತೀರ್ಥ ಯಾತ್ರಾ ವಿಶೇಷ ರೈಲು.
ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಸೀಸನಲ್ ಟಿಕೆಟ್ ನೀಡಿಕೆ.

English summary
Railway Minister Suresh Prabhu on Thursday, Feb 26 presented his maiden railway budget which received mixed response from the Opposition and the aam aadmi (common man).Take a look what Prabhu's Railway Budget 2015 has for all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X