ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ : ಅಂಕಿ ಸಂಖ್ಯೆಯಲ್ಲಿ ಕುತೂಹಲಕಾರಿ ಅಂಶ

By Mahesh
|
Google Oneindia Kannada News

ನವದೆಹಲಿ, ಫೆ.26: ಭಾರತ ದೇಶದ ಸಂಚಾರ ಸಂಪರ್ಕ ನಾಡಿಯಾಗಿ ದಿನ ನಿತ್ಯದ ಮಿತ್ರನಾಗಿರುವ ರೈಲುಗಳಲ್ಲಿ ದಿನವೊಂದಕ್ಕೆ 23 ಮಿಲಿಯನ್ ಪ್ರಯಾಣಿಕರು ಸಂಚರಿಸುತ್ತಾರೆ. ರೈಲ್ವೆ ಇಲಾಖೆ ನಷ್ಟದಲ್ಲಿ ಚಲಿಸುತ್ತಿದ್ದರೂ ಪ್ರತಿ ವರ್ಷ ಬಜೆಟ್ ಬಂದಾಗ ನಿರೀಕ್ಷೆಗಳು ಗರಿಗೆದರುತ್ತವೆ.

ಸಚಿವ ಸುರೇಶ್ ಪ್ರಭು ಅವರು ಪ್ರಥಮ ಬಾರಿಗೆ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಎನ್ ಡಿಎ ಸರ್ಕಾರದ ಪೂರ್ಣಪ್ರಮಾಣದ ಬಜೆಟ್ ಇದಾಗಿದೆ. ಈ ಸಂದರ್ಭದಲ್ಲಿ ಭಾರತೀಯ ರೈಲ್ವೆ ಅಂಕಿ ಸಂಖ್ಯೆಯಲ್ಲಿ ಕುತೂಹಲಕಾರಿ ಅಂಶಗಳನ್ನು ಇಲ್ಲಿ ನೀಡಲಾಗಿದೆ. [ರೈಲ್ವೆ ಬಜೆಟ್ 2015: ಸುರೇಶ್ ಪ್ರಭು ಪ್ರಥಮ ಚುಂಬನ ಅಪ್ದೇಟ್ಸ್]

* ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ 2.3 ಕೋಟಿ. ಸುಮಾರು 12,617 ರೈಲುಗಳು ದೇಶದೆಲ್ಲೆಡೆ ಇರುವ 7,172 ಸ್ಟೇಷನ್ಸ್ ಗಳನ್ನು ಸಂಪರ್ಕಿಸಲಿದೆ.
* ಭಾರತೀಯ ರೈಲ್ವೆ ಇಲಾಖೆ ಆದಾಯ ವಾರ್ಷಿಕವಾಗಿ 1.4 ಲಕ್ಷ ಕೋಟಿ ರು(ಸುಮಾರು 23 ಬಿಲಿಯನ್ ಯುಎಸ್ ಡಿ)
* ಸುಮಾರು 359 ರೈಲ್ವೆ ಯೋಜನೆಗಳು ಬಾಕಿ ಉಳಿದಿದ್ದು, ಅವುಗಳನ್ನು ಪೂರ್ಣಗೊಳಿಸಲು 1.82 ಲಕ್ಷ ಕೋಟಿ ರೂ.ನಷ್ಟು ಅಗಾಧ ಹಣ ಬೇಕಾಗಿದೆ.
* ಕಳೆದ ಮೂರು ದಶಕಗಳಲ್ಲಿ 676ಕ್ಕೂ ಅಧಿಕ ಯೋಜನೆ ಘೋಷಣೆಯಾಗಿದ್ದು ಅದರಲ್ಲಿ 317 ಪೂರ್ಣಗೊಳಿಸಲಾಗಿದೆ. [ರೈಲ್ವೆ ಬಜೆಟ್ 2015: ಕರ್ನಾಟಕದ ನಿರೀಕ್ಷೆಗಳೇನು?]
* ಪ್ರತಿ ವರ್ಷ ಬಜೆಟ್ ನಲ್ಲಿ ಸರಾಸರಿ 160 ಹೊಸ ರೈಲುಗಳನ್ನು ಘೋಷಿಸಲಾಗುತ್ತಿತ್ತು. 2015ನೇ ಸಾಲಿನ ಬಜೆಟ್ ನಲ್ಲಿ ಈ ಸಂಖ್ಯೆ ಬೆರಳೆಣಿಕೆಯಷ್ಟಿದೆ.
* ಸಬ್ಸಿಡಿ ಪ್ರಯಾಣಿಕರ ದರ ಜಾರಿಯಲ್ಲಿರುವುದರಿಂದ ಪ್ರತಿ ವರ್ಷ 26,000 ರು ನಷ್ಟ ಅನುಭವಿಸಬೇಕಾಗಿದೆ.

Railway Budget 2015, Indian Railways in numbers

* 1950-51ರಲ್ಲಿ ಸರಕು ಸಾಗಣೆ ಶೇ 89ರಷ್ಟು ಬಳಕೆಯಾಗುತ್ತಿತ್ತು ಈಗ ಶೇ 39ಕ್ಕೆ ಇಳಿದಿದೆ. ಅದರೆ, ಶೇ 67ರಷ್ಟು ಆದಾಯ ಇದರಿಂದಲೇ ಬರುತ್ತಿದೆ.
* ಪ್ರತಿ ದಿನ 2.65 ಮಿಲಿಯನ್ ಟನ್ ನಷ್ಟು ಸರಕು ಸಾಗಣೆ ರೈಲಿನಲ್ಲಿ ಕಂಡು ಬರುತ್ತದೆ.
* ರೈಲ್ವೆ ನಿರ್ವಹಣೆ ಅನುಪಾತ ಶೇ 94ರಷ್ಟಿದೆ. ಅಂದರೆ, ಪ್ರತಿ 100 ಪೈಸೆ(1ರು) ಗೆ 6 ಪೈಸೆ ಉಳಿತಾಯ ಹೊಂದಲಾಗುತ್ತಿದೆ.
* ರೈಲ್ವೆ ಇಲಾಖೆಯ ಉದ್ಯೋಗಿಗಳ ಸಂಖ್ಯೆ 13.1 ಲಕ್ಷ ಮೀರುತ್ತದೆ.
* ಸ್ವಾತಂತ್ರ್ಯದ ನಂತರ ಸರಾಸರಿ ಕ್ರಮಿಸುವ ದೂರ ಪ್ರತಿ ವರ್ಷ 200 ಕಿ.ಮೀ ನಷ್ಟು ಹೆಚ್ಚಳವಾಗಿದೆ.

ಒನ್ ಇಂಡಿಯಾ ಸುದ್ದಿ

English summary
Railway Minister Suresh Prabhu will present his first Budget on Thursday. Here are some numbers related to the Railway Budget. Here is interesting facts, Indian Railways in numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X