ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡಿ' ಗ್ರೂಪ್ ರೈಲ್ವೆ ನೌಕರರಿಗೆ ಅಧಿಕಾರಿಗಳ ಮನೆ ಕೆಲಸದಿಂದ ಮುಕ್ತಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಪದೇ ಪದೇ ಸಂಭವಿಸುತ್ತಿರುವ ರೈಲು ಅಪಘಾತಗಳು, ರೈಲು ಹಳಿ ತಪ್ಪುವಂಥ ಘಟನೆಗಳಿಗೆ ಮೂಲ ಕಾರಣವೊಂದನ್ನು ಪತ್ತೆ ಹಚ್ಚಿರುವ ರೈಲ್ವೆ ಇಲಾಖೆ, ಈ ಸಮಸ್ಯೆಯನ್ನು ಪರಿಹರಿಸಲು ದಿಟ್ಟ ಆದೇಶವೊಂದನ್ನು ಜಾರಿಗೊಳಿಸಿದೆ.

ಪದೇ ಪದೇ ಉಂಟಾಗುತ್ತಿರುವ ರೈಲು ಅಪಘಾತಗಳನ್ನು ಗಂಭೀರವಾಗಿ ತೆಗೆದುಕೊಂಡ ರೈಲ್ವೆ ಇಲಾಖೆಯು, ರೈಲ್ವೆ ಮಂಡಳಿ ಅಶ್ವಿನ್ ಲೊಹಾನಿ ನೇತೃತ್ವದ ತನಿಖೆಯನ್ನು ನಡೆಸಿ ಅದರ ತನಿಖಾ ವರದಿಯನ್ನು ನೀಡಿದೆ.

ಕಳೆದ ಎರಡು ವರ್ಷಗಳಲ್ಲಿ 350 ರೈಲು ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 650 ಜನರು ಅಸುನೀಗಿದ್ದಾರೆ. ಇಷ್ಟಾದರೂ ಈ ಸಮಸ್ಯಗೆ ಪರಿಹಾರ ಸಿಕ್ಕಿಲ್ಲ.

ಹಳಿಗಳಿಗೆ ನಕ್ಸಲೀಯರು ಘಾಸಿಗೊಳಿಸಿದ್ದರಿಂದ ಅಪಘಾತವಾಯಿತು. ಪ್ರತಿಕೂಲ ಹವಾಮಾನದಿಂದ ಅಪಘಾತವಾಯಿತು. ಅಥವಾ ರೈಲು ಚಾಲಕರಿಂದ ಅಪಘಾತವಾಗಿತು ಎಂಬ ಆರೋಪಗಳೂ ಪ್ರತೀಬಾರಿ ರೈಲು ಅಪಘಾತವಾದಾಗ ಕೇಳಿಬರುತ್ತಿದ್ದವು.

ಆದರೆ, ಇದರ ಸತ್ಯಾಸತ್ಯತೆಯನ್ನು ಅರಿಯಲು ಹೊರಟ ರೈಲ್ವೆ ಇಲಾಖೆಯು ಅಪಘಾತಗಳಿಗೆ ಪರೋಕ್ಷವಾಗಿರುವ ಪ್ರಮುಖ ಕಾರಣಗಳನ್ನು ಪತ್ತೆ ಮಾಡಿದೆ. ಇದು ಲಾಗಾಯ್ತಿನಿಂದ ಚಾಲ್ತಿಯಲ್ಲಿದ್ದ ವಿಚಾರವಾದರೂ, ಈ ಬಗ್ಗೆ ಸೂಕ್ತವಾದ ಆಂತರಿಕ ತನಿಖೆ ನಡೆಸಿ ದಿಟ್ಟ ಕ್ರಮವೊಂದನ್ನು ತೆಗೆದುಕೊಂಡಿದೆ ರೈಲ್ವೆ ಇಲಾಖೆ.

ಇಲಾಖೆ ಕಂಡುಕೊಂಡ ಆ ಕಾರಣಗಳೇನು, ಕೈಗೊಂಡ ಕ್ರಮವೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನೌಕರಿಗಿಂತ ಚಾಕರಿಯೇ ಹೆಚ್ಚು

ನೌಕರಿಗಿಂತ ಚಾಕರಿಯೇ ಹೆಚ್ಚು

ರೈಲ್ವೆ ಇಲಾಖೆಯಲ್ಲಿ ಹಳಿ ನಿರ್ವಹಣೆ ಮಾಡುವ ಸಿಬ್ಬಂದಿಯು ಡಿ ಗ್ರೂಪ್ ನೌಕರರೆಂದು ಪರಿಗಣಿಸುತ್ತಾರೆ. ಈ ನೌಕರನ್ನು ಇಲಾಖೆಯ ಉನ್ನತ ಅಧಿಕಾರಿಗಳು ತಮ್ಮ ಮನೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಹಳಿಗಳ ನಿರ್ವಹಣೆ ಅಥವಾ ರಿಪೇರಿ ಅಥವಾ ಹಳಿಗಳ ನಿಗಾ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಬಹುತೇಕ ಅಪಘಾತಗಳ ಹಿಂದೆ ಇರುವ ಮೂಲ ಕಾರಣ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

ಉನ್ನತ ಶ್ರೇಣಿಯ ಅಧಿಕಾರಿಗಳೇ ಮಾರಕವಾಗಿದ್ದಾರೆ!

ಉನ್ನತ ಶ್ರೇಣಿಯ ಅಧಿಕಾರಿಗಳೇ ಮಾರಕವಾಗಿದ್ದಾರೆ!

ಈ ನೌಕಕರನ್ನು ತಮ್ಮ ಮನೆಯ ಕೆಲಸದವರಂತೆ ಉಪಯೋಗಿಸಿಕೊಳ್ಳುವವರೆಲ್ಲರೂ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳೇ. ರೈಲ್ವೆ ಮಂಡಳಿಯ ಸದಸ್ಯರು, ಜನರಲ್ ಮ್ಯಾನೇಜರ್ ಗಳು, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್ ಎಂ) ಶ್ರೇಣಿಯಲ್ಲಿರುವ ಅಧಿಕಾರಿಗಳೇ ಟ್ರಾಕ್ ಮೆನ್ ಗಳನ್ನು ತಮ್ಮ ಮನೆಗಳಲ್ಲಿ ಕೆಲಸದವರನ್ನಾಗಿ ಇಟ್ಟುಕೊಂಡಿದ್ದಾರೆನ್ನಲಾಗಿದೆ.

ಇರೋ ಸಿಬ್ಬಂದಿಗಳಲ್ಲಿ ಹೆಚ್ಚಿನವರು ಆಳುಗಳಾಗಿದ್ದಾರೆ!

ಇರೋ ಸಿಬ್ಬಂದಿಗಳಲ್ಲಿ ಹೆಚ್ಚಿನವರು ಆಳುಗಳಾಗಿದ್ದಾರೆ!

ಇದಲ್ಲದೆ, ರೈಲ್ವೆ ಮಂಡಳಿಯಲ್ಲಿ ಹಲವಾರು ಟ್ರಾಕ್ ಮೆನ್ ಗಳ ಹುದ್ದೆಗಳು ಬಾಕಿಯಿವೆ. ಟ್ರಾಮ್ ಮೆನ್ ಮಾತ್ರವಲ್ಲ, ಸ್ಟೇಷನ್ ಮಾಸ್ಟರ್, ಸಿಗ್ನಲ್ ಚೆಕರ್ ಸೇರಿದಂತೆ ವಿವಿಧ ಮಾದರಿಯ ಸುಮಾರು 2 ಲಕ್ಷ ಹುದ್ದೆಗಳು ಖಾಲಿಯಿವೆ. ಈಗ ಇರುವ ಅಲ್ಪ ಸಿಬ್ಬಂದಿಗಳನ್ನೂ ಹೀಗೆ ಮನೆಗೆಲಸದವರಂತೆ ಉಪಯೋಗಿಸಿಕೊಳ್ಳುವುದರಿಂದ ಇನ್ನು ಸುರಕ್ಷತೆಯ ಮಾತು ದೂರವೇ ಉಳಿಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವೈಯಕ್ತಿಕ ಸೇವೆಯಿಂದ ಬಿಡುಗಡೆಗೆ ಸೂಚನೆ

ವೈಯಕ್ತಿಕ ಸೇವೆಯಿಂದ ಬಿಡುಗಡೆಗೆ ಸೂಚನೆ

ಈ ಎಲ್ಲಾ ವಿಚಾರಗಳನ್ನೂ ತನ್ನ ವರದಿಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಿನ್ ಲೊಹಾನಿ, ಈಗಾಗಲೇ ರೈಲ್ವೆ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಈ ಕೂಡಲೇ ತಮ್ಮ ಮನೆ ಸೇವೆಗೆ ನಿಯುಕ್ತರಾಗಿರುವ ಎಲ್ಲಾ ಟ್ರಾಕ್ ಮೆನ್ ಹಾಗೂ ಇತರ ಡಿ-ಗ್ರೂಪ್ ನೌಕರರನ್ನು ನಿತ್ಯ ಕರ್ತವ್ಯಕ್ಕೆ ನಿಯುಕ್ತಿಗೊಳಿಸುವಂತೆ ತಾಕೀತು ಮಾಡಿದ್ದಾರೆ.

English summary
In its, first major reform by Railway Board issues notice to all A-class officials to release the track men from their personal services. This is to stop railway accidents across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X