ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ನಿಲ್ದಾಣದಲ್ಲಿ ವೈ-ಫೈ; ಪ್ರಿಪೇಯ್ಡ್‌ ಯೋಜನೆ ಬಿಡುಗಡೆ

|
Google Oneindia Kannada News

ನವದೆಹಲಿ, ಮಾರ್ಚ್ 05: ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ದೇಶದ 4000ಕ್ಕೂ ಹೆಚ್ಚು ರೈಲು ನಿಲ್ದಾಣದಲ್ಲಿ ವೈ-ಫೈ ಸೇವೆಯನ್ನು ಆರಂಭಿಸಿದೆ. ಪ್ರಯಾಣಿಕರು ಹೆಚ್ಚು ವೇಗದ ವೈ-ಫೈ ಸೇವೆ ಉಪಯೋಗಿಸಲು ಪ್ರೀಪೇಯ್ಡ್ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ಭಾರತೀಯ ರೈಲ್ವೆ ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ರೈಲು ನಿಲ್ದಾಣದಲ್ಲಿ ವೈ-ಫೈ ಸೌಲಭ್ಯವನ್ನು ಬಳಕೆ ಮಾಡಲು ರೈಲ್ ಟೆಲ್ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರು ಒಂದು ದಿನದಲ್ಲಿ ಮೊದಲ 30 ನಿಮಿಷ 1 ಎಂಬಿಪಿಎಸ್ ವೇಗದಲ್ಲಿ ಉಚಿತವಾಗಿ ವೈ-ಫೈ ಬಳಸಬಹುದು.

ಕೊಟ್ಟೂರು ಹಬ್ಬ; ಮೂರು ದಿನ ವಿಶೇಷ ರೈಲು ಸಂಚಾರಕೊಟ್ಟೂರು ಹಬ್ಬ; ಮೂರು ದಿನ ವಿಶೇಷ ರೈಲು ಸಂಚಾರ

ವೇಗದ ವೈ-ಫೈ ಸೌಲಭ್ಯಗಳು 34 ಎಂಬಿಪಿಎಸ್ ತನಕ ಲಭ್ಯವಿದೆ. ಇದಕ್ಕಾಗಿ ಪ್ರಯಾಣಿಕರು ಪ್ರಿಪೇಯ್ಡ್‌ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ದೇಶದ 4 ಸಾವಿರಕ್ಕೂ ಅಧಿಕ ರೈಲು ನಿಲ್ದಾಣದಲ್ಲಿ ರೈಲ್ ವೈರ್ ಎಂಬ ಯೋಜನೆಯಡಿ ರೈಲ್ ಟೆಲ್ ವೈ-ಫೈ ಸೌಲಭ್ಯವನ್ನು ನೀಡುತ್ತಿದೆ.

 ವೈಫೈ ಕಾಲಿಂಗ್ ಸೇವೆ ಮೂಲಕ ಕಾಲ್‌ ಡ್ರಾಪ್‌ಗೆ ಅಂತ್ಯ ಹಾಡಿದ ಏರ್‌ಟೆಲ್‌ ವೈಫೈ ಕಾಲಿಂಗ್ ಸೇವೆ ಮೂಲಕ ಕಾಲ್‌ ಡ್ರಾಪ್‌ಗೆ ಅಂತ್ಯ ಹಾಡಿದ ಏರ್‌ಟೆಲ್‌

Railtel Launches Prepaid Plans In Railway Station Wi Fi Use

ಪ್ರಿಪೇಯ್ಡ್ ಯೋಜನೆಯನ್ನು ಉಪಯೋಗಿಸಲು ಪ್ರಯಾಣಿಕರು ನೆಟ್ ಬ್ಯಾಂಕಿಂಗ್, ವ್ಯಾಲೆಟ್, ಕ್ರೆಡಿಟ್ ಕಾರ್ಡ್ ಹೀಗೆ ಸುಲಭವಾಗಿ ಹಣವನ್ನು ಪಾವತಿ ಮಾಡುವ ಅವಕಾಶವನ್ನು ನೀಡಲಾಗಿದೆ. ಜನರು ತಮಗೆ ಅಗತ್ಯವಿರುವ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಬಹುದು.

ನೈರುತ್ಯ ರೈಲ್ವೆ ವಿಭಾಗದ 278 ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ನೈರುತ್ಯ ರೈಲ್ವೆ ವಿಭಾಗದ 278 ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ

ರೈಲ್ವೆ ನಿಲ್ದಾಣವನ್ನು ಡಿಲಿಟಲೀಕರಣಗೊಳಿಸುವ ಉದ್ದೇಶದಿಂದ ವೈ-ಫೈ ವ್ಯವಸ್ಥೆಯನ್ನು ಮಾಡಲಾಗಿದೆ. ಭಾರತೀಯ ರೈಲ್ವೆ ಇಲಾಖೆ ಮಾಹಿತಿಯಂತೆ 5950 ನಿಲ್ದಾಣಗಳಲ್ಲಿ ಉತ್ತಮ ಗುಣಮಟ್ಟದ ವೇಗದ ಇಂಟರ್ ನೆಟ್ ವ್ಯವಸ್ಥೆ ಇದೆ. ನಿಲ್ದಾಣಕ್ಕೆ ಬರುವ ಜನರು ಎಸ್‌ಎಂಎಸ್ ಮೂಲಕ ಬರುವ ಓಟಿಪಿ ಆಧರಿಸಿ ವೈ-ಫೈ ಉಪಯೋಗಿಸಬಹುದಾಗಿದೆ.

ಕೋವಿಡ್ ಲಾಕ್ ಡೌನ್ ಪರಿಸ್ಥಿತಿಗೂ ಮೊದಲು ತಿಂಗಳಿಗೆ 2.9 ಕೋಟಿ ಜನರು ರೈಲು ನಿಲ್ದಾಣದ ವೈ-ಫೈ ಸೌಲಭ್ಯವನ್ನು ಉಪಯೋಗಿಸುತ್ತಿದ್ದರು. ರೈಲುಗಳ ಸಂಚಾರ ಸಹಜ ಸ್ಥಿತಿಗೆ ಬಂದರೆ ವೈ-ಫೈ ಬಳಕೆಯಿಂದಲೇ ವಾರ್ಷಿಕ 10-15 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದೆ.

ಪ್ರಿಪೇಯ್ಡ್ ಯೋಜನೆಯನ್ನು ಪ್ರಾಯೋಗಿಕವಾಗಿ ಉತ್ತರ ಪ್ರದೇಶದ 20 ರೈಲು ನಿಲ್ದಾಣಗಳಲ್ಲಿ ಪರಿಚಯಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಬೇರೆ ನಿಲ್ದಾಣಗಳಲ್ಲಿ ಪರಿಚಯಿಸಲು ತೀರ್ಮಾನಿಸಲಾಗಿದೆ.

English summary
RailTel has launched prepaid plans for its Railwire Wi-Fi at 4000 plus railway stations across India. For using the Wi-Fi facility at a higher speed of upto 34 mbps user needs to choose a plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X