• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನ ಸಾಮಾನ್ಯರಿಗೆ ಪ್ರಭು ರೈಲು ಬಜೆಟ್ಟಿನಿಂದ ಸಿಕ್ಕಿದ್ದೇನು?

By Mahesh
|

ಬೆಂಗಳೂರು, ಫೆ. 25: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಪರವಾಗಿ ಎರಡನೇ ಬಾರಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬಜೆಟ್ ಮಂಡಿಸಿ ಗೆದ್ದಿದ್ದಾರೆ. ಗುರುವಾರ (ಫೆಬ್ರವರಿ 25) ಮಂಡನೆಯಾದ ಬಜೆಟ್ಟಿನಿಂದ ಜನ ಸಾಮಾನ್ಯರಿಗೆ ಸಿಕ್ಕಿದ್ದೇನು?

ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲು, ಮೆಟ್ರೋ, ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಎಲ್ಲವೂ ಹುಸಿಯಾಗಿದೆ. ಗೌತಮ ಬುದ್ಧನ ನೆನೆಯುತ್ತಾ ಬಜೆಟ್ ಭಾಷಣ ಮುಕ್ತಾಯಗೊಳಿಸಿದ ಸುರೇಶ್ ಪ್ರಭು ಅವರು 'ಆಸೆಯೇ ದುಃಖಕ್ಕೆ ಮೂಲ' ಎಂಬ ವಾಕ್ಯವನ್ನು ಉಲ್ಲೇಖಿಸದಿದ್ದರೂ ಎಲ್ಲರಿಗೂ ಅದು ಅನ್ವಯವಾಗುವಂತಿತ್ತು.[ಹೊಸತನವಿಲ್ಲದ ಗೂಡ್ಸ್ ಗಾಡಿ ಓಡಿಸಿದ ಪ್ರಭು]

ಹೈ ಸ್ಪೀಡ್ ರೈಲು, ಪಾರ್ಸೆಲ್ ರೈಲು, ವಿಶೇಷ ರೈಲು ಎಂಬ ದೊಡ್ಡ ದೊಡ್ಡ ಪದಗಳ ನಡುವೆ ಜನ ಸಾಮಾನ್ಯರು ಬಜೆಟ್ ನಿಂದ ಏನು ಪಡೆದುಕೊಳ್ಳಬಹುದು ಎಂಬ ಪ್ರಶ್ನೆ ಇತ್ತು. ಮುಖ್ಯವಾಗಿ ಪ್ರಯಾಣ ದರ ಏರಿಕೆ ಮಾಡಿಲ್ಲ. ಸ್ಮಾರ್ಟ್ ಕೋಚ್, ಸ್ವಚ್ಛತೆ, ಆಹಾರ ಪೂರೈಕೆಗೆ ಹೆಚ್ಚಿನ ಅದ್ಯತೆ ಸಿಕ್ಕಿದೆ. ಮುಂದೆ ಓದಿ...

ಟಿಕೆಟ್ ರಿಸರ್ವ್ ಮಾಡದ ಪ್ರಯಾಣಿಕರಿಗೆ

ಟಿಕೆಟ್ ರಿಸರ್ವ್ ಮಾಡದ ಪ್ರಯಾಣಿಕರಿಗೆ

ಟಿಕೆಟ್ ರಿಸರ್ವ್ ಮಾಡದ ಪ್ರಯಾಣಿಕರಿಗೆ ಬಹುದೂರ ಪ್ರಯಾಣಿಸಲು ಅಂತ್ಯೋದಯ ಎಕ್ಸ್ ಪ್ರೆಸ್, ದೀನ್ ದಯಾಳ್ ಕೋಚ್ ಗಳಲ್ಲಿ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ದೀನ್ ದಯಾಳ್ ಎಕ್ಸ್ ಪ್ರೆಸ್ ಗೆ ಎರಡರಿಂದ ನಾಲ್ಕು ಹೆಚ್ಚಿನ ಕೋಚು ಅಳವಡಿಕೆ, ಕುಡಿಯುವ ನೀರು, ಮೊಬೈಲ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

ಪ್ರಯಾಣಿಕರ ತೃಪ್ತಿ, ಉದ್ಯೋಗ ಸೃಷ್ಟಿ ನಮ್ಮ ಗುರಿ

ರೈಲ್ವೆ ಬಜೆಟ್ ಮೋದಿ ಅವರ ಕನಸು, ಆಶಯದಂತೆ ರೂಪಿಸಲಾಗಿದೆ. ಪ್ರಯಾಣಿಕರ ತೃಪ್ತಿ, ಉದ್ಯೋಗ ಸೃಷ್ಟಿ ನಮ್ಮ ಗುರಿಯಾಗಿದೆ. ನವ ಆರ್ಜಾನ್, ನವ್ ಮಾನಕ್, ನವ ಸಂರಚನ ಯೋಜನೆ

ವಿಷನ್ 202೦ಯಂತೆ ಇಲಾಖೆ ಗುರಿ

ವಿಷನ್ 202೦ಯಂತೆ ಇಲಾಖೆ ಗುರಿಗಳು ಹೀಗಿದೆ

ಟಿಕೆಟ್ ಬುಕ್ಕಿಂಗ್ ನಲ್ಲಿ ಹೊಸ ವ್ಯವಸ್ಥೆ ಜಾರಿ

* ಬಾರ್ ಕೋಡ್, ಸ್ಕಾನರ್ ಟಿಕೆಟ್ ನೀಡಿಕೆ.

* ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಪಾಸ್

* ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಪ್ರತ್ಯೇಕ ಬೋಗಿ

ಹೊಸ ಡಬ್ಬಲ್ ಡೆಕ್ಕರ್ ಸೇವೆ

ಹೊಸ ಡಬ್ಬಲ್ ಡೆಕ್ಕರ್ ಸೇವೆಯಿಂದ ಶೇ40ರಷ್ಟು ಹೆಚ್ಚು ಜನ ಪ್ರಯಾಣಿಸಬಹುದು.

ಸ್ಮಾರ್ಟ್ ಕೋಚ್ ಯೋಜನೆ

ಸ್ಮಾರ್ಟ್ ಕೋಚ್ ಯೋಜನೆ ಅಡಿಯಲ್ಲಿ ಬಯೋ ವ್ಯಾಕ್ಯೂಮ್ ಟಾಯ್ಲೆಟ್ಸ್, ಪಿಎ ಸಿಸ್ಟಮ್ ಸೇರಿದಂತೆ ಅನೇಕ ವ್ಯವಸ್ಥೆ ಜಾರಿ

ಕ್ಲೀನ್ ಮೈ ಕೋಚ್ ಸೇವೆ

ಕ್ಲೀನ್ ಮೈ ಕೋಚ್ ಸೇವೆ

ಪ್ರಯಾಣಿಕರು ಎಸ್ ಎಂಎಸ್ ಮೂಲಕ ಕ್ಲೀನ್ ಮೈ ಕೋಚ್ ಸೇವೆಗೆ ಆಗ್ರಹಿಸಬಹುದಾಗಿದೆ. 30,000 ಬಯೋ ಟಾಯ್ಲೆಟ್ ಅಳವಡಿಕೆ. ರೈಲ್ ಮಿತ್ರ ಯೋಜನೆ ಮೂಲಕ ಅಂಗವಿಕಲರಾಗಿ ಸಾರಥಿ ಸೇವೆ ಸೌಲಭ್ಯ. ದಿವ್ಯಾಂಗರಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಲಾಗಿದೆ.

ತತ್ಕಾಲ್ ಕೌಂಟರ್ ನಲ್ಲಿ ಸಿಸಿಟಿವಿ

ತತ್ಕಾಲ್ ಕೌಂಟರ್ ನಲ್ಲಿ ಸಿಸಿಟಿವಿ

ತತ್ಕಾಲ್ ಕೌಂಟರ್ ನಲ್ಲಿ ಸಿಸಿಟಿವಿ ಅಳವಡಿಕೆ. ಪಾರದರ್ಶಕ ಆಡಳಿತ ವ್ಯವಸ್ಥೆ. ಪಿಆರ್ ಎಸ್ ವೆಬ್ ಸೈಟ್ ನಲ್ಲಿ ಹೆಚ್ಚಿನ ಸುರಕ್ಷತೆಗೆ ಆದ್ಯತೆ. ಟಿಕೆಟಿಂಗ್ ಸಂಪೂರ್ಣ ಡಿಜಲೀಕರಣ. ಎನ್ನಾರೈಗಳಿಗೂ ಟಿಕೆಟ್ ಪಡೆಯುವ ಸುಲಭ ಸರಳ ಸೌಲಭ್ಯ.

ಹಮ್ ಸಫರ್, ತೇಜಸ್, ಉದಯ್ ರೈಲು

ಹಮ್ ಸಫರ್, ತೇಜಸ್, ಉದಯ್ ರೈಲು

ಹಮ್ ಸಫರ್, ತೇಜಸ್, ಉದಯ್ ಹೊಸ ರೈಲುಗಳ ಘೋಷಣೆ. ಹಮ್ ಸಫರ್ ಪೂರ್ತಿ ಎಸಿ, ಐಚ್ಛಿಕ ಊಟ. ತೇಜಸ್ 130 ಕಿ.ಮೀ ವೇಗವಾಗಿ ಚಲಿಸುವ ರೈಲು, ಸ್ಥಳೀಯ ಊಟ, ವೈಫ ನೀಡಲಿದೆ. ಉತ್ರಿಕ್ಷ್ ಡಬ್ಬಲ್ ಡೆಕ್ಕರ್ ಯಾತ್ರಿ (ಉದಯ್) ಎಕ್ಸ್ ಪ್ರೆಸ್ ರಾತ್ರಿ ಚಲಿಸುವ ರೈಲಿನ ಮೂಲಕ ಶೇ 40ರಷ್ಟು ಪ್ರಯಾಣಿಕರ ಹೆಚ್ಚಳ ಕಾಣಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Railway Minister Suresh Prabhu in his Rail Budget 2016 speech stressed that each time a traveller undertakes a journey the "satisfaction quotient must go up." Here are the announcements which make common man happy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more