ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂತ ಚಿಂತಕ ಅಭಿಯಾನದಲ್ಲಿ ಪ್ರವೀಣ್ ತೊಗಾಡಿಯಾ

By Prithviraj
|
Google Oneindia Kannada News

ರೂ. 500 ಹಾಗು ರೂ.1000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯ ಮಾಡಿದ ನಂತರ ಹಣವಿನಿಮಯಕ್ಕಾಗಿ ಜನರ ಪಡಿಪಾಟಿಲು ಹೇಳತೀರದ್ದು, ಬ್ಯಾಂಕುಗಳ ಮುಂದೆ ಸರತಿ ಸಾಲುಗಳಲ್ಲಿ ನಿಂತು ಹಣ ಪಡೆದುಕೊಳ್ಳಲು ಮುಗಿಬೀಳುತ್ತಿರುವ ದೃಶ್ಯಗಳು ದೇಶದಾದ್ಯಂತ ಎಲ್ಲ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಇನ್ನು ಸುಲಭವಾಗಿ ನಗದು ಪಡೆಯಬಹುದಾಗಿದ್ದ ಎಟಿಎಂ ಯಂತ್ರಗಳು ಎರಡು ದಿನಗಳ ನಂತರ ಆರಂಭವಾದರೂ ಹಣದ ಕೊರತೆಯಿಂದ ಹಲವು ಎಟಿಂಎಂ ಕೇಂದ್ರಗಳು ಸೇವೆ ಸ್ಥಗಿತಗೊಳಿಸಿರುವುದರಿಂದ ಹಣಕ್ಕಾಗಿ ಜನರು ಪಡುತ್ತಿರುವ ಪಾಡು ಹೇಳತೀರದ್ದು.

ಕೊಲ್ಕತ್ತಾದಲ್ಲಿ ಶುಕ್ರವಾರ 22ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಿದ್ದು, ಬಾಲಿವುಡ್ ನ ಹಲವು ಕಲಾವಿದರು ವಿಶ್ವದ ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸಲು ಕೋಲ್ಕತ್ತಾಗೆ ಬಂದಿಳಿಯುತ್ತಿದ್ದಾರೆ.

ಮುಂದಿನ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರನ್ನು ಅಮೆರಿಕ ಜನ ಆಯ್ಕೆ ಮಾಡಿದ್ದರೂ ಸಹ ಟ್ರಂಪ್ ಅವರ ಗೆಲುವನ್ನು ಖಂಡಿಸಿ ಹಲವು ಮಂದಿ ಅವರ ವಿರುದ್ಧ ಪ್ರತಿಭಟನೆ ದಾಖಲಿಸುತ್ತಿದ್ದಾರೆ.

ವಿ ಹೆಚ್ ಪಿ ಮುಖಂಡ ಪ್ರವೀಣ್ ತೊಗಾಡಿಯಾ ಭಾಗಿ

ವಿ ಹೆಚ್ ಪಿ ಮುಖಂಡ ಪ್ರವೀಣ್ ತೊಗಾಡಿಯಾ ಭಾಗಿ

ಶುಕ್ರವಾರ ಬೆಂಗಳೂರಿನ ವಿಜಯನಗರದ ಸಾಯಿಬಾಬಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಹಿಂತಚಿಂತಕ ಅಭಿಯಾನದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಅವರು

ಬ್ಯಾಂಕ್ ಗೆ ರಾಹುಲ್ ಭೇಟಿ

ಬ್ಯಾಂಕ್ ಗೆ ರಾಹುಲ್ ಭೇಟಿ

ಕೇಂದ್ರ ಸರ್ಕಾರ ರೂ.500 ಹಾಗು ರೂ.1000 ನೋಟುಗಳನ್ನು ಅಮಾನ್ಯ ಮಡಿರುವ ಹಿನ್ನೆಲೆಯಲ್ಲಿ ಹಳೆ ನೋಟುಗಳನ್ನು ಬದಲಿಸಿಕೊಳ್ಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನವದೆಹಲಿಯ ಸಂಸತ್ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಭೇಟಿ ನೀಡಿದ ವೇಳೆ ವಿಪರೀತ ನೂಕುನುಗ್ಗಲು ಉಂಟಾಗಿತ್ತು.

ಶುಕ್ರವಾರವೂ ಮುಚ್ಚಿತ್ತು ಎಟಿಎಂ

ಶುಕ್ರವಾರವೂ ಮುಚ್ಚಿತ್ತು ಎಟಿಎಂ

ದಿನನಿತ್ಯದ ಖರ್ಚಿಗಾಗಿ ಹಣ ಪಡೆಯಲು ಸಾರ್ವಜನಿಕರು ತೊಂದರೆ ಪಡಿಪಾಟಿಲು ಪಡುತ್ತಿದ್ದಾರೆ. ಎಟಿಎಂ ಸೇವೆ ಸ್ಥಗಿತಗೊಂಡ ಎರಡು ದಿನದ ನಂತರ ಎಟಿಎಂ ಸೇವೆ ಆರಂಭವಾಗಿದ್ದರೂ ಸಹ ರಾಂಚಿ ನಗರ ಎಟಿಂ ಮುಂದೆ ಹಣವಿಲ್ಲ ಎಂಬ ಬೋರ್ಡ್ ನೇತುಹಾಕಲಾಗಿತ್ತು.

ಅಭಿಮಾನಿಗೆ ಪ್ರೀತಿಯ ಹಸ್ತಲಾಘವ

ಅಭಿಮಾನಿಗೆ ಪ್ರೀತಿಯ ಹಸ್ತಲಾಘವ

ಕೊಲ್ಕತ್ತಾದಲ್ಲಿ ನಡೆಯುತ್ತಿರುವ 22ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಬಾಲಿವುಟ್ ನಟ ಶಾರುಖ್ ಖಾನ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರಿಗೆ ಹಸ್ತಲಾಘವ ನೀಡಿದರು.

ಒಟ್ಟೊಟ್ಟಿಗೆ ಫೋಟೊಗೆ ಫೋಸ್

ಒಟ್ಟೊಟ್ಟಿಗೆ ಫೋಟೊಗೆ ಫೋಸ್

ಕೊಲ್ಕತ್ತಾದಲ್ಲಿ ಶುಕ್ರವಾರ ನಡೆದ 22ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಟ್ ನಟ ಸಂಜಯ್ ದತ್ ಹಾಗು ನಟಿ ಕಾಜೋಲ್ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ.

ಟ್ರಂಪ್ ಟವರ್ ಗೆ ಬಿಗಿ ಭದ್ರತೆ

ಟ್ರಂಪ್ ಟವರ್ ಗೆ ಬಿಗಿ ಭದ್ರತೆ

ಡೊನಾಲ್ಡ್ ಟ್ರಂಪ್ ಅವರು ಗೆಲುವನ್ನು ವಿರೋಧಿಸಿ ಅಮೆರಿಕ ಸಂಯುಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಹಲವು ಪ್ರತಿಭಟನೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಲ್ಲಿರುವ ಟ್ರಂಪ್ ಟವರ್ ಗೂ ಪ್ರತಿಭಟನಾಕಾರರು ಮುತ್ತಿಗೆ ಹಾಕಬಹುದೆಂಬ ಭೀತಿಯಿಂದ ಪೊಲೀಸ್ ಭದ್ರತೆ ಒದಗಿಸಿರುವುದು

ಶತಕದ ಸಂಭ್ರಮ

ಶತಕದ ಸಂಭ್ರಮ

ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಚೇತೇಶ್ವರ ಪೂಜಾರ ಅವರ ಆಟವನ್ನು ಪೂಜಾರ ಅವರ ಪತ್ನಿ ಗ್ಯಾಲರಿಯಲ್ಲಿ ಕುಳಿತು ಸಂಭ್ರಮಿಸಿದರು

ಈ ಸ್ನೇಹ ಹೀಗೆ ಮುಂದುವರೆಯಲಿ...

ಈ ಸ್ನೇಹ ಹೀಗೆ ಮುಂದುವರೆಯಲಿ...

ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಮಾತುಕತೆ ವೇಳೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಹಸ್ತ ಲಾಘವ ನೀಡಲು ಮುಂದಾಗುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

English summary
Congress vice-president Rahul Gandhi stood in solidarity with others in a serpentine queue outside a branch of the State Bank of India on Parliament Street, to exchange his old notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X