ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ನಿನಿಂದಲೇ ಚಿಯರ್ಸ್ ಹೇಳಲಿದ್ದಾರೆ ರಾಹುಲ್ ಗಾಂಧಿ

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 31 : ಅಪನಗದೀಕರಣದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಈಬಾರಿ ಲಂಡನ್ನಿನಿಂದಲೇ ಭಾರತೀಯರಿಗೆ 'ಹ್ಯಾಪಿ ನ್ಯೂ ಇಯರ್' ಹೇಳಲಿದ್ದಾರೆ. ಖಾಸಗಿ ಭೇಟಿಗಾಗಿ ರಾಹುಲ್ ಅವರು ಈಗಾಗಲೆ ಲಂಡನ್ನಿಗೆ ತೆರಳಿದ್ದಾರೆ.

ಪ್ರತಿಬಾರಿ ತಾವು ವಿದೇಶಕ್ಕೆ ತೆರಳುವಾಗ ಟ್ವಿಟ್ಟರಲ್ಲಿ ಒಂದು ಸಂದೇಶವನ್ನು ಬಿಟ್ಟು ಹೋಗುತ್ತಿದ್ದರು. ಆದರೆ ಈಬಾರಿ ಸದ್ದಿಲ್ಲದೆ ಟ್ವೀಟ್ ಕೂಡ ಮಾಡದೆ, ಲಂಡನ್ನಿಗೆ ತೆರಳಿದ್ದು, ಅಲ್ಲಿಂದಲೇ ಚಿಯರ್ಸ್ ಹೇಳುವುದು ಹೆಚ್ಚೂಕಡಿಮೆ ಖಚಿತವಾಗಿದೆ. [ರಾಹುಲ್ ಕೇಳಿದ 5 ಪ್ರಶ್ನೆಗಳಿಗೆ ಮೋದಿ ಉತ್ತರಿಸುವರೆ?]

Rahul to say cheers to Indians from London

ಬಲ್ಲ ಮೂಲಗಳ ಪ್ರಕಾರ, ಬುಧವಾರವೇ ಅವರು ಲಂಡನ್ ವಿಮಾನ ಹತ್ತಿದ್ದು, ಒಂದು ವಾರ ಅಲ್ಲೇ ತಂಗಲಿದ್ದಾರೆ. ಆದರೆ, ಈ ಬಗ್ಗೆ ಪಕ್ಷದ ವಕ್ತಾರರು ಏನನ್ನೂ ಖಚಿತವಾಗಿ ಹೇಳುತ್ತಿಲ್ಲ. ಹೊಸವರ್ಷಾರಂಭವಾದ ನಂತರವೇ ವಿದೇಶಕ್ಕೆ ತೆರಳಬಹುದು ಎಂದು ಹಾರಿಕೆ ಹೇಳಿಕೆ ನೀಡುತ್ತಿದ್ದಾರೆ.

ನೋಟು ನಿಷೇಧ ಮಾಡಿದ್ದಕ್ಕಾಗಿ ನರೇಂದ್ರ ಮೋದಿ ವಿರುದ್ಧ ಪುಂಖಾನುಪುಂಖವಾಗಿ ವಾಗ್ದಾಳಿ ಮಾಡಿರುವ ರಾಹುಲ್ ಗಾಂಧಿ, ಅವರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೂ ಹೊರಿಸಿದ್ದಾರೆ. ಹೊಸವರ್ಷದ ಮುನ್ನಾದಿನ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಹೊತ್ತಿನಲ್ಲಿ ರಾಹುಲ್ ವಿದೇಶಕ್ಕೆ ಹಾರಿದ್ದಾರೆ. [ಮೋದಿಗೆ ಸಹಾರಾದಿಂದ 40 ಕೋಟಿ ಲಂಚ : ರಾಹುಲ್ ಆರೋಪ]

ಕಳೆದ ವರ್ಷ ಇದೇ ಸಮಯದಲ್ಲಿ ಅವರು ರಜಾದಿನಗಳನ್ನು ಕಳೆಯಲೆಂದು ಯುರೋಪಿಗೆ ತೆರಳಿದ್ದರು. ಈಕುರಿತು ಅವರು ತಮ್ಮ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಟ್ವೀಟ್ ಕೂಡ ಮಾಡಿದ್ದರು. ಆದರೆ, ಈಗ ಏಕೆ ಟ್ವೀಟನ್ನು ಕೂಡ ಮಾಡಿಲ್ಲ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. [ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾದ ರಾಹುಲ್ 'ಭೂಕಂಪ'ದ ಮಾತು]

English summary
Congress vice-president Rahul Gandhi will be celebrating New Year in London. According to sources, he has already left for London on a private visit. Unlike his trips in the recent past, Rahul has refrained from tweeting his year-end travel plans this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X