ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗೆ ಕೇಂಬ್ರಿಡ್ಜ್ ಅನಾಲಿಟಿಕಾ ಲಿಂಕ್: ಸಚಿವರಿಂದ ಗಂಭೀರ ಆರೋಪ

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 22: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ಟಿಟ್ಟರ್ ಖಾತೆಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ರಾಹುಲ್ ಗಾಂಧಿಯವರ ಸಂಪೂರ್ಣ ಸಾಮಾಜಿಕ ಜಾಲತಾಣಗಳ ಪ್ರಚಾರವನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಸಹಾಯದಿಂದ ನಿರ್ವಹಿಸಲಾಗುತ್ತಿದೆ. ಈ ಸಂಬಂಧ ಅವರ ನಡುವೆ ಸಭೆಗಳೂ ನಡೆದಿವೆ ಎಂದು ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಜಾಣ ಮೌನವಹಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಗೆ ಹೊಸ ಕಟ್ಟುಕಥೆಯೇ ಪರಿಹಾರ : ರಾಹುಲ್ ವ್ಯಂಗ್ಯಸಮಸ್ಯೆಗೆ ಹೊಸ ಕಟ್ಟುಕಥೆಯೇ ಪರಿಹಾರ : ರಾಹುಲ್ ವ್ಯಂಗ್ಯ

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಕೇಂಬ್ರಿಡ್ಜ್ ಅನಾಲಿಟಿಕಾದ ಸೇವೆಯನ್ನು ಕಾಂಗ್ರೆಸ್ ಆಗಲಿ, ಕಾಂಗ್ರೆಸ್ ಅಧ್ಯಕ್ಷರಾಗಲಿ ಪಡೆದುಕೊಂಡಿಲ್ಲ ಎಂದು ಹೇಳಿದ್ದರು.

ಫೇಸ್ ಬುಕ್ ಮಾಹಿತಿ ಸೋರಿಕೆ; ರವಿಶಂಕರ್ ಪ್ರಸಾದ್ ವರ್ಸಸ್ ರಮ್ಯಾಫೇಸ್ ಬುಕ್ ಮಾಹಿತಿ ಸೋರಿಕೆ; ರವಿಶಂಕರ್ ಪ್ರಸಾದ್ ವರ್ಸಸ್ ರಮ್ಯಾ

Rahuls entire social media campaign managed by Cambridge Analytica: Ravi Shankar Prasad

"ಕೇಂಬ್ರಿಜ್ ಅನಾಲಿಟಿಕಾ ಲಿಂಕ್ ಇರುವ ವೆಬ್ಸೈಟ್ 2010 ರಲ್ಲಿ ಅದರ ಸೇವೆಯನ್ನು ಬಿಜೆಪಿ - ಜೆಡಿ(ಯು) ಪಡೆದಿದ್ದಾಗಿ ತೋರಿಸುತ್ತಿವೆ. ಸಂಸ್ಥೆಯ ಭಾರತೀಯ ಪಾಲುದಾರ ಕಂಪನಿ ಒವ್ಲೆನೆ ಬಿಸಿನೆಸ್ ಇಂಟೆಲಿಜೆನ್ಸ್ (ಒಬಿಐ) ಸಂಸ್ಥೆಯನ್ನು ಬಿಜೆಪಿ ಮಿತ್ರಪಕ್ಷದ ಸಂಸರೊಬ್ಬರ ಮಗ ನಡೆಸುತ್ತಿದ್ದಾರೆ. ಒಬಿಐ ಕಂಪನಿಯ ಸೇವೆಗಳನ್ನು ರಾಜನಾಥ್ ಸಿಂಗ್ ಅವರು 2009 ರಲ್ಲಿ ಬಳಸಿದರು," ಎಂದು ಅವರು ವಾಗ್ದಾಳಿ ನಡೆಸಿದ್ದರು. ಇದಕ್ಕೀಗ ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

English summary
Rahul Gandhi's entire social media campaign has been managed with the help of Cambridge Analytica and they have had meetings also,” said union minister Ravi Shankar Prasad at press briefing in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X