• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೂಗಲ್ ಟ್ರೆಂಡ್ಸ್: ನರೇಂದ್ರ ಮೋದಿಯನ್ನು ಹಿಂದಿಕ್ಕಿದ ರಾಹುಲ್ ಗಾಂಧಿ

|
   Narendra Modi v/s Rahul Gandhi : ಇಬ್ಬರಲ್ಲಿ ಯಾರು ಜನಪ್ರಿಯರು? ಇಲ್ಲಿದೆ ಗೂಗಲ್ ರಿಪೋರ್ಟ್ |Oneindia Kannada

   ನವದೆಹಲಿ, ಜನವರಿ 08: ಲೋಕಸಭೆ ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸಲಿರುವ ಸಾಮಾಜಿಕ ಜಾಲ ತಾಣಗಳು, ಸರ್ಚ್ ಇಂಜಿನ್ ಗಳ ಹುಡುಕಾಟದಲ್ಲಿ ಸದಾ ಕಾಲ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಗ್ಗಿದೆಯೆ? ಗೂಗಲ್ ಟ್ರೆಂಡ್ಸ್ ಪ್ರಕಾರ ಹೌದು.

   2019ರ ಚುನಾವಣೆಗೂ ಮುನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಇಂಟರ್ನೆಟ್ ಹುಡುಕಾಟ ಸಮರದಲ್ಲಿ ರಾಹುಲ್ ಗಾಂಧಿಗೆ ಜಯವಾಗಿದೆ ಎಂದು ಸರ್ಚ್ ಇಂಜಿನ್ ದೈತ್ಯ ಗೂಗಲ್ ನ ಟ್ರೆಂಡ್ಸ್, ನ್ಯೂಸ್ ಇನ್ನಿತರ ಟೂಲ್ಸ್ ನೀಡಿರುವ ಮಾಹಿತಿ ಹೇಳಿದೆ.

   ಸಮೀಕ್ಷೆ: ಸ್ವಾತಂತ್ರ್ಯಾನಂತರ ಭಾರತ ಕಂಡ ಅತ್ಯುತ್ತಮ ಪ್ರಧಾನಮಂತ್ರಿಗಳ ಪಟ್ಟಿ

   ಗೂಗಲ್ ಟ್ರೆಂಡ್ಸ್ : ಜನವರಿ 01, 2018 ರಿಂದ ಜನವರಿ 6, 2019ರ ಅವಧಿಯಲ್ಲಿ 0-100ರ ಎಣಿಕೆಯಂತೆ ರಾಹುಲ್ ಹಾಗೂ ಮೋದಿ ನಡುವಿನ ಜನಪ್ರಿಯತೆ ಅಳತೆಗೋಲಿನ ಲೆಕ್ಕಾಚಾರದಂತೆ ರಾಹುಲ್ ಅವರಿಗೆ 45 ಅಂಕ ಹಾಗೂ ಮೋದಿ ಅವರಿಗೆ 34 ಅಂಕ ಲಭಿಸಿದೆ.

   ಕಳೆದ ಒಂದು ವರ್ಷದ ಅವಧಿಯಲ್ಲಿ ವಿಶ್ವದಾದ್ಯಂತ ಇರುವ ಭಾರತೀಯರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ಗೂಗಲ್ ನ್ಯೂಸ್ ಹೇಳಿದೆ.

   'ಪ್ರಧಾನಿ ಹಸ್ತಕ್ಷೇಪ ಮಾಡಿದರಾ, ಇಲ್ಲವಾ? ಇಷ್ಟುದ್ದ ಭಾಷಣ ಏಕೆ?'

   ಈ ಕುರಿತು ಗೂಗಲ್ ನ್ಯೂಸ್ ವರದಿ ನೀಡಿದ್ದು, "ವಿಶ್ವದಾದ್ಯಂತ ಇರುವ ಭಾರತೀಯರಲ್ಲಿ 100 ಜನರ ಪೈಕಿ 45 ಜನ ಗೂಗಲ್‌ನಲ್ಲಿ ರಾಹುಲ್ ಗಾಂಧಿಯನ್ನು ಹುಡುಕಿದರೆ, 34 ಜನ ಪ್ರಧಾನಿ ನರೇಂದ್ರ ಮೋದಿ ಕುರಿತ ಮಾಹಿತಿಯನ್ನು ಹುಡುಕಿದ್ದಾರೆ.

   2014ರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು. 0-100ರ ಎಣಿಕೆಯಲ್ಲಿ 37 ಅಂಕ ಗಳಿಸಿದ್ದರು. ಆಗ ರಾಹುಲ್ ಗಾಂಧಿ ಕೇವಲ 4 ಅಂಕ ಗಳಿಸಿದ್ದರು. ರಾಹುಲ್ ಅವರನ್ನು ಸಾಮಾಜಿಕ ಜಾಲ ತಾಣಗಳಲ್ಲಿ 'ಪಪ್ಪು' ಎಂದು ಕರೆಯಲಾಯಿತು. ಬಿಜೆಪಿಯ ಸಾಮಾಜಿಕ ಜಾಲ ತಾಣ ತಂಡವು ಹಲವಾರು ಮೀಮ್ಸ್, ಟ್ರಾಲ್ಸ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

   ಗೂಗಲ್ ಟ್ರೆಂಡ್ಸ್ ಹಾಗೂ ಗೂಗಲ್ ನ್ಯೂಸ್ ಮಾಹಿತಿ

   ಗೂಗಲ್ ಟ್ರೆಂಡ್ಸ್ ಹಾಗೂ ಗೂಗಲ್ ನ್ಯೂಸ್ ಮಾಹಿತಿ

   ಈ ಕುರಿತು ಗೂಗಲ್ ನ್ಯೂಸ್ ವರದಿ ನೀಡಿದ್ದು, "ವಿಶ್ವದಾದ್ಯಂತ ಇರುವ ಭಾರತೀಯರಲ್ಲಿ 100 ಜನರ ಪೈಕಿ 45 ಜನ ಗೂಗಲ್‌ನಲ್ಲಿ ರಾಹುಲ್ ಗಾಂಧಿಯನ್ನು ಹುಡುಕಿದರೆ, 34 ಜನ ಪ್ರಧಾನಿ ನರೇಂದ್ರ ಮೋದಿ ಕುರಿತ ಮಾಹಿತಿಯನ್ನು ಹುಡುಕಿದ್ದಾರೆ.

   2014ರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು. 0-100ರ ಎಣಿಕೆಯಲ್ಲಿ 37 ಅಂಕ ಗಳಿಸಿದ್ದರು. ಆಗ ರಾಹುಲ್ ಗಾಂಧಿ ಕೇವಲ 4 ಅಂಕ ಗಳಿಸಿದ್ದರು. ರಾಹುಲ್ ಅವರನ್ನು ಸಾಮಾಜಿಕ ಜಾಲ ತಾಣಗಳಲ್ಲಿ 'ಪಪ್ಪು' ಎಂದು ಕರೆಯಲಾಯಿತು. ಬಿಜೆಪಿಯ ಸಾಮಾಜಿಕ ಜಾಲ ತಾಣ ತಂಡವು ಹಲವಾರು ಮೀಮ್ಸ್, ಟ್ರಾಲ್ಸ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

   ರಾಹುಲ್ ಅವರ ಜನಪ್ರಿಯತೆ ಎಲ್ಲಿ ಹೆಚ್ಚು

   ರಾಹುಲ್ ಅವರ ಜನಪ್ರಿಯತೆ ಎಲ್ಲಿ ಹೆಚ್ಚು

   ಮೋದಿ ಅವರು ಗುಜರಾತಿನಲ್ಲಿ ಇಂದಿಗೂ ಹೆಚ್ಚು ಜನಪ್ರಿಯ ನಾಯಕರಾಗಿ ಮುಂದುವರೆದಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ತಮಿಳುನಾಡು, ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರಪ್ರದೇಶ ಹಾಗೂ ಹರ್ಯಾಣದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ ಎಂದು ಗೂಗಲ್ ಟ್ರೆಂಡ್ ಹೇಳಿದೆ. ಇತ್ತೀಚಿಗೆ ಪಂಚರಾಜ್ಯಗಳ ಚುನಾವಣೆಯಲ್ಲಿ ರಾಹುಲ್ ಅವರು ತಂತ್ರಜ್ಞಾನ ಬಳಸಿ ಹೆಚ್ಚೆಚ್ಚು ಜನರನ್ನು ಸಂಪರ್ಕಿಸಿದ್ದರು. ಸಿಎಂ ಆಯ್ಕೆ, ಅಭ್ಯರ್ಥಿ ಆಯ್ಕೆ ಎಲ್ಲಕ್ಕೂ ಜನಾಭಿಪ್ರಾಯ ಸಂಗ್ರಹ ಮಾಡಿದ್ದರು.

   ಟ್ವಿಟ್ಟರ್ ನಲ್ಲಿ ಮೋದಿ ಜನಪ್ರಿಯತೆ ಹೆಚ್ಚು

   ಟ್ವಿಟ್ಟರ್ ನಲ್ಲಿ ಮೋದಿ ಜನಪ್ರಿಯತೆ ಹೆಚ್ಚು

   ಮೋದಿ ಅವರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದಾರೆ. ಆದರೆ, ಜನವರಿ ಹಾಗೂ ಏಪ್ರಿಲ್ 2018ರ ನಡುವಿನಲ್ಲಿ ಗಾಂಧಿ ಅವರ ಟ್ವೀಟ್ ಗಳ ರೀಟ್ವೀಟ್ ಸಂಖ್ಯೆ ಅತ್ಯಧಿಕವಾಗಿತ್ತು ಎಂದು ಮಿಶಿಗನ್ ವಿವಿ ಹೇಳಿದೆ. ಮೋದಿ ಅವರು 44 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೆ, ರಾಹುಲ್ ಗಾಂಧಿ ಅವರು 7.6 ಮಿಲಿಯನ್ ಹಿಂಬಾಲಕರನ್ನು ಮಾತ್ರ ಹೊಂದಿದ್ದಾರೆ.

   ಸತತ ಸೋಲಿನ ಬಳಿಕ ಗೆಲುವು ಕಂಡ ಕಾಂಗ್ರೆಸ್

   ಸತತ ಸೋಲಿನ ಬಳಿಕ ಗೆಲುವು ಕಂಡ ಕಾಂಗ್ರೆಸ್

   2017ರಲ್ಲಿ ಕಾಂಗ್ರೆಸ್ಸಿಗೆ ಉತ್ತರಪ್ರದೇಶದಲ್ಲಿ ಭಾರಿ ಸೋಲುಂಟಾಯಿತು. ಸಮಾಜವಾದಿ ಪಕ್ಷದ ಜತೆ ಮೈತ್ರಿ ಫಲ ನೀಡಲಿಲ್ಲ. ಪಂಜಾಬಿನಲ್ಲಿ ಕ್ಯಾ. ಅಮರೀಂದರ್ ಸಿಂಗ್ ಜತೆಗೂಡಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. ಗುಜರಾತ್ ಚುನಾವಣೆಯಲ್ಲಿ ಮೋದಿಗೆ ಭಾರಿ ಪೈಪೋಟಿ ನೀಡಿದ್ದ ಕಾಂಗ್ರೆಸ್ ಇತ್ತೀಚಿಗೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಕಂಡಿದ್ದು ರಾಹುಲ್ ಜನಪ್ರಿಯತೆಯ ಗ್ರಾಫ್ ಏರಲು ಕಾರಣವಾಯಿತು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Congress President Rahul Gandhi has emerged as the most searched politician in the online news segment, beating his political nemesis Prime Minister Narendra Modi. According to Google Trends, on a scale of 0-100, Rahul scored 45, while Modi scored 34 between January 1, 2018, and January 6, 2019
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more