ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಏಕೈಕ ಪರ್ಯಾಯ: ಕಾಂಗ್ರೆಸ್

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 4: ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏಕೈಕ ಪರ್ಯಾಯ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ವಿಪಕ್ಷಗಳ ಒಗ್ಗಟ್ಟು ದೇಶದಲ್ಲಿ ಬದಲಾವಣೆಯ ಅಲೆ ತರಲಿದೆ ಎಂದು ಸುರ್ಜೇವಾಲಾ ವಿಶ್ಲೇಷಿಸಿದ್ದಾರೆ.

Rahul only alternative to Modi: Congress

"ಇವತ್ತು ದೇಶದಲ್ಲಿ ಎರಡು ಮಾದರಿಗಳಿವೆ. ದಿನಕ್ಕೆ ಆರು ಬಾರಿ ಬಟ್ಟೆ ಬದಲಿಸುವ, ರಾಜ್ಯಗಳ ಹಿತಾಸಕ್ತಿಗಿಂತ ಬಟ್ಟೆಗೆ ಪ್ರಾಧಾನ್ಯತೆ ನೀಡುವ ಮೋದಿ ಮಾದರಿ ಇದೆ. ಇನ್ನೊಂದು ರಾಹುಲ್ ಗಾಂಧಿ ಮಾದರಿ. ಈ ಮಾದರಿಯಲ್ಲಿ ಸರಳತೆ ಮತ್ತು ಸ್ಪಷ್ಟತೆ ಇದೆ," ಎಂದು ಪಿಟಿಐ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
"ಮೋದಿಗೆ ರಾಹುಲ್ ಗಾಂಧಿ ಏಕೈಕ ಪರ್ಯಾಯ. ಮುಂದಿನ ಪ್ರಧಾನಿಯಾಗಿ ರಾಹುಲ್ ಗಾಂಧಿಯವರನ್ನು ನೋಡಲು ದೇಶದ ಜನರು ಉದ್ದೇಶಿಸಿದ್ದಾರೆ," ಎಂದು ಅವರು ಹೇಳಿದರು.

ಇನ್ನು ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲಾ, ಎನ್.ಡಿ.ಎ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಟಿಡಿಪಿ ಬಿಜೆಪಿ ಬಗ್ಗೆ ಅಸಮಧಾನ ಹೊಂದಿವೆ. ಕಾಂಗ್ರೆಸ್ ವಿಪಕ್ಷಗಳನ್ನು ಒಟ್ಟುಗೂಡಿಸಲು ಯತ್ನಿಸುತ್ತಿದ್ದು 2019ರ ಲೋಕಸಭೆ ಚುನಾವಣೆ ದೇಶದಲ್ಲಿ ಬದಲಾವಣೆಯ ಗಾಳಿ ತರಲಿದೆ ಎಂದಿದ್ದಾರೆ.

ಇನ್ನು ಈ ವರ್ಷ ದೇಶದಲ್ಲಿ ನಡೆಯಲಿರುವ 8 ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ, "ದೇಶದ ಅತ್ಯುತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಭರವಸೆ ನಮಗಿದೆ. ಇತ್ತೀಚೆಗೆ ನಡೆದ ರಾಜಸ್ಥಾನ ಉಪಚುನಾವಣೆಯ ಫಲಿತಾಂಶ ಟ್ರೇಲರ್ ಮಾತ್ರ. ಮಧ್ಯ ಪ್ರದೇಶ, ಛತ್ತೀಸ್ ಗಢ ಸೇರಿದಂತೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ," ಎಂದು ಅವರು ತಿಳಿಸಿದ್ದಾರೆ.

English summary
Rahul Gandhi is the only alternative to Prime Minister Narendra Modi, Congress spokesperson Randeep Surjewala said today as he emphasised that "unity of opposition" would bring forth a "wave of change" in the 2019 Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X