ಮೋದಿಯವರಿಗೆ ವಯಸ್ಸಾಯಿತು ಅಂತ ವ್ಯಂಗ್ಯವಾಡಿದ ರಾಹುಲ್

Posted By:
Subscribe to Oneindia Kannada

ಜೌನಪುರ, ಮಾರ್ಚ್ 06 : "ನಾವು ಯುವಕರ ಸರಕಾರ ರಚಿಸುತ್ತೇವೆ. ಮೋದಿ(66)ಯವರಿಗೆ ಈಗ ವಯಸ್ಸಾಯಿತು. ಅವರೀಗ ಹಿರಿಯರ ಕೂಟ ಸೇರಿಕೊಂಡಿದ್ದಾರೆ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (46) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಡಿಕೊಂಡಿದ್ದಾರೆ.

ಉತ್ತರಪ್ರದೇಸದ ಜೌನಪುರ ಜಿಲ್ಲೆಯ ಜೌನಪುರದಲ್ಲಿ ಸೋಮವಾರ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಪರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಮೋದಿಯವರ ಮೇಲೆ ತಮ್ಮ ಟೀಕಾಪ್ರಹಾರವನ್ನು ಎಂದಿನಂತೆ ಮುಂದುವರಿಸಿದರು.[ವಾರಣಾಸಿಯಲ್ಲಿ ಸ್ಟಾರ್ ವಾರ್: ಮೋದಿ, ರಾಹುಲ್, ಮಾಯಾವತಿ, ಅಖಿಲೇಶ್ ಪ್ರಚಾರ]

Rahul mocks Modi at an election rally in Jaunpur, Uttar Pradesh

ಮೋದಿಯವರ ಅಚ್ಛೇದಿನದ ಪಿಚ್ಚರ್ ಫ್ಲಾಪ್ ಆಗಿದೆ. ಆದ್ದರಿಂದ ಈಗ ನೋಡಲು ಸಿಗುವುದಿಲ್ಲ. ನೀವು ಕೆಲಸ ಮಾಡುತ್ತೀರಿ, ಅದರ ಲಾಭವನ್ನು ನರೇಂದ್ರ ಮೋದಿಯವರು ಆ 50 ಕುಟುಂಬಗಳಿಗೆ ನೀಡುತ್ತಾರೆ. ಆದರೆ, ಒಂದು ತಿಳಿದುಕೊಳ್ಳಿ, ನಿಮ್ಮ ಕೆಲಸದ ಲಾಭವನ್ನು ನಾವು ನಿಮಗೇ ನೀಡುತ್ತೇವೆ ಎಂದು ಅವರು ವಚನ ನೀಡಿದರು.

ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್, ಮೋದಿಯವರು ಎಲ್ಲ ಕೆಲಸವನ್ನು ಸ್ವಯಂ ಆಗಿ ಮಾಡುತ್ತಾರೆ. ಇಸ್ರೋ ರಾಕೆಟ್ ಕಳಿಸಿದರೆ, ಮೋದಿಯವರು ನಾನೇ ಕಳಿಸಿದೆ ಅನ್ನುತ್ತಾರೆ ಎಂದು ಪ್ರಧಾನಿಯನ್ನು ವ್ಯಂಗ್ಯ ಮಾಡಿದರು.

ಮೋದಿಯವರು ಅಮೆರಿಕಕ್ಕೆ ಹೋಗಿ ಬರಾಕ್ ಒಬಾಮಾ (ಅಧ್ಯಕ್ಷರಾಗಿದ್ದಾಗ) ಅವರನ್ನು ತಬ್ಬಿಕೊಳ್ಳುತ್ತಿದ್ದರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಹೇಳುತ್ತಿದ್ದರು, ಇನ್ನು ನಿಮ್ಮ ಅಗತ್ಯ ನನಗಿಲ್ಲ, ನೀವಿಲ್ಲೇ ಕುಳಿತುಕೊಂಡಿರಿ, ನಾನು ಹೋಗಿ ಬರುತ್ತೇನೆ ಎಂದು ಹೇಳಿ ರಾಹುಲ್ ನಗೆಯುಕ್ಕಿಸಿದರು.[ಬಾತ್ ರೂಂಗೆ ಕಳ್ಳನೋಟ ಬೀರುವುದೇ ಮೋದಿಗೆ ಕೆಲಸ: ರಾಹುಲ್ ವಾಗ್ದಾಳಿ]

ಒಬಾಮಾ ಅವರ ಪತ್ನಿ ತಮ್ಮ ಅಡುಗೆಮನೆಯಲ್ಲಿ ಏನನ್ನಾದರೂ ತಯಾರಿಸುತ್ತಿರುವಾಗ ಆ ಪಾತ್ರೆಯನ್ನು ನೋಡಿ, ಪಾತ್ರೆ ಎಷ್ಟು ಸುಂದರವಾಗಿದೆಯಲ್ಲ ಅಂತ ಉದ್ಘರಿಸಬೇಕು ಮತ್ತು ಆ ಪಾತ್ರೆಯ ಮೇಲೆ ಬರೆದಿರಬೇಕು ಮೇಡ್ ಇನ್ ಜೌನಪುರ ಎಂದು ರಾಹುಲ್ ಅವರು ತಮ್ಮ ವಾಕ್ಚಾತುರ್ಯವನ್ನು ಮೆರೆದರು.

ಮಾರ್ಚ್ 8ರಂದು ಉತ್ತರಪ್ರದೇಶದಲ್ಲಿ 7ನೇ ಹಂತದ ಮತದಾನ ನಡೆಯುತ್ತಿದ್ದು, ಏಳು ಜಿಲ್ಲೆಗಳಲ್ಲಿ 40 ಅಭ್ಯರ್ಥಿಗಳ ಹಣಬರಹವನ್ನು ಉತ್ತರಪ್ರದೇಶದ ಮತದಾರರು ನಿರ್ಧರಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rahul Gandhi has mocked Narendra Modi at an election rally in Jaunpur, Uttar Pradesh on Monday by saying, Modi has become old now. He also said Modi's achche din picture has flopped. 7th phase of voing in Uttar Pradesh will take place on 8th March.
Please Wait while comments are loading...