ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ರಾಜಸ್ಥಾನದಲ್ಲಿ ಮತ್ತೆ ಕಣ್ಮಿಟುಕಿಸಿದ ರಾಹುಲ್ ಗಾಂಧಿ

|
Google Oneindia Kannada News

Recommended Video

ರಾಜಸ್ಥಾನದಲ್ಲಿ ಮತ್ತೆ ಕಣ್ಮಿಟುಕಿಸಿದ ರಾಹುಲ್ ಗಾಂಧಿ | Oneindia kannada

ಜೈಪುರ, ಆಗಸ್ಟ್ 13: ಮುಂಗಾರು ಅಧಿವೇಶನದ ಅವಿಶ್ವಾಸ ನಿರ್ಣಯದ ಸಮಯದಲ್ಲಿ ಕಣ್ಮಿಟುಕಿಸಿ, ಮೋದಿಯವರನ್ನು ಅಪ್ಪಿಕೊಂಡು ಸುದ್ದಿಯಾಗಿದ್ದ ರಾಹುಲ್ ಗಾಂಧಿ, ಇದೀಗ ಮತ್ತೊಮ್ಮೆ ಕಣ್ಮಿಟುಕಿಸಿ ಸುದ್ದಿಯಾಗಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ವೇದಿಕೆಯ ಮೇಲಿದ್ದ ರಾಹುಲ್ ಗಾಂಧಿಯವರು, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲೆಟ್ ಅವರಿಗೆ ಕಣ್ಮಿಟುಕಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ!

ರಾಹುಲ್ ಅಪ್ಪುಗೆ, ಮೋದಿ ಮಾತು, ರಮ್ಯಾ ಮೇಡಂ ಸರಣಿ ಟ್ವೀಟು! ರಾಹುಲ್ ಅಪ್ಪುಗೆ, ಮೋದಿ ಮಾತು, ರಮ್ಯಾ ಮೇಡಂ ಸರಣಿ ಟ್ವೀಟು!

2019 ರ ಲೋಕಸಭಾ ಚುನಾವಣೆ ಮತ್ತು ರಾಜಸ್ಥಾನದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅವರ ಅಪಾರ ಅಭಿಮಾನಿಗಳಿಗೆ ಅವರ ಕಣ್ಮಿಟುಕನ್ನು ನೋಡುವ ಭಾಗ್ಯ ಲಭಿಸಿತು!

ನಾಟಕೀಯ ಹಾವಭಾವ!

ರಾಹುಲ್ ಗಾಂಧಿ ಅವರು ವೇದಿಕೆಯಲ್ಲಿದ್ದ ಸಚಿನ್ ಪೈಲೆಟ್ ಅವರತ್ತ ಕಣ್ಮಿಟುಕಿಸಿ ನಕ್ಕರು. ತಕ್ಷಣವೇ ಪೈಲೆಟ್ ಅವರು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಅವರನ್ನು ತಬ್ಬಿಕೊಂಡರು. ಇದೊಂದು ನಾಟಕೀಯ ಹಾವಭಾವ ಎಂದು ವಿಡಿಯೋ ನೋಡಿದವರು ವರ್ಣಿಸಿದ್ದಾರೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ಇಬ್ಬರೂ ಮುಖ್ಯಮಂತ್ರಿ ರೇಸ್ ನಲ್ಲಿದ್ದು, ರಾಹುಲ್ ಗಾಂಧಿಯವರ ಈ ನಡೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ಅವರ ಅಭಿಮಾನಿಗಳಿಗೇ ಬಿಟ್ಟ ವಿಚಾರ!

ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?

ಮರೆತುಹೋಗಿಲ್ಲ ಅಪ್ಪುಗೆ-ಕಣ್ಮಿಟುಕು ಪ್ರಹಸನ

ಅವಿಶಸ್ವಾಸ ನಿರ್ಣಯದ ಸಮಯದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿದ ರಾಹುಲ್ ಗಾಂಧಿ, ನಂತರ ಕಣ್ಮಿಟುಕಿಸಿದ್ದು ಸುದ್ದಿಯಾಗಿತ್ತು. ಆ ಸುದ್ದಿ ಮರೆಯಾಗುವ ಮುನ್ನವೇ ಮತ್ತೊಮ್ಮೆ ವೇದಿಕೆಯಲ್ಲಿ ಕಣ್ಮಿಟುಕಿಸಿ ರಾಹುಲ್ ಗಾಂಧಿ ಸುದ್ದಿಯಾಗಿದ್ದಾರೆ. ರಾಹುಲ್ ಗಾಂಧಿಯವರ ಕಣ್ಮಿಟುಕು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಚರ್ಚೆಯಾಗುತ್ತಿದೆ.

ಅಪ್ಪುಗೆ, ಕಣ್ಣೇಟು... ರಾಹುಲ್ ವರ್ತನೆಗೆ ಸಂಸತ್ತಿನಲ್ಲಿ ಭೂಕಂಪ!ಅಪ್ಪುಗೆ, ಕಣ್ಣೇಟು... ರಾಹುಲ್ ವರ್ತನೆಗೆ ಸಂಸತ್ತಿನಲ್ಲಿ ಭೂಕಂಪ!

ಟಾಂಗ್ ನೀಡಿದ್ದ ಪ್ರಧಾನಿ ಮೋದಿ

"ಅದು ಬಾಲಿಶ ನಡೆಯೇ, ಅಲ್ಲವೇ ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟ ವಿಚಾರ. ನೀವು ಆ ಕಣ್ಮಿಟುಕಿನ ವಿಡಿಯೋ ನೋಡಿದರೆ ನಿಮಗದು ಅರ್ಥವಾಗುತ್ತದೆ. ನಾನೊಬ್ಬ ಪ್ರಾಮಾಣಿಕ ಕೆಲಸಗಾರ. ಕೆಲವರಿಗೆ ಯಾರನ್ನು ದ್ವೇಷಿಸಬೇಕು, ಹೇಗೆ ದ್ವೇಷಿಸಬೇಕು ಮತ್ತು ಯಾರನ್ನು ಪ್ರೀತಿಸಬೇಕು, ಯಾವಾಗ ಪ್ರೀತಿಸಬೇಕು ಮತ್ತ ಅದನ್ನು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಹೇಗೆ ಅಭಿವ್ಯಕ್ತಿಪಡಿಸಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಅಂಥವರ ಬಗ್ಗೆ ನಾನು ಏನು ಹೇಳಲು ಸಾಧ್ಯ" ಎಂದು ರಾಹುಲ್ ಗಾಂಧಿ ಅವರ ನಡೆಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯೆ ನೀಡಿದ್ದರು.

ರಾಷ್ಟ್ರಗೀತೆಗೆ ಅವಮಾನ

ರಾಹುಲ್ ಗಾಂಧಿ ರಾಷ್ಟ್ರಗೀತೆ ಆರಂಭವಾದಾಗಲೂ ತಮಾಷೆ ಮಾಡುತ್ತ, ನಗುತ್ತಿದ್ದರು. ಅವರಿಗೆ ರಾಷ್ಟ್ರಗೀತೆಗೆ ಗೌರವಿಸುವುದು ಗೊತ್ತಿಲ್ಲ ಎಂದು ಕೆಲವರು ಟ್ವಿಟ್ಟರ್ ನಲ್ಲಿ ಆರೋಪಿಸಿದ್ದಾರೆ. ರಾಷ್ಟ್ರಗೀತೆ ಆರಂಭವಾದರೂ ತಮ್ಮ ಸಹೋದ್ಯೋಗಿಗಳೊಂದಿಗೆ ಅವರು ನಗುತ್ತಿದ್ದರು, ರಾಹುಲ್ ಗಾಂಧಿ ದೇಶಕ್ಕೆ ಮತ್ತು, ರಾಷ್ಟ್ರಗೀತೆಗೆ ನೀಡುವ ಗೌರವವಿದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

English summary
Rahul Ganadhi winks again in a rall in Rajasthan ahead of state assembly elections as well as Lok Sabha Elections 2019. The video becomes viral on social media now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X