ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷ ಹುದ್ದೆಗೇರುತ್ತಿರುವ ರಾಹುಲ್ ಗಾಂಧಿಗಿರುವ 8 ದೊಡ್ದ ಸವಾಲುಗಳು

|
Google Oneindia Kannada News

130ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೇರಲು ರಾಹುಲ್ ಗಾಂಧಿಗೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ. ಡಿಸೆಂಬರ್ ಹನ್ನೊಂದರಂದು ಅಧಿಕೃತವಾಗಿ ಎಐಸಿಸಿಯ ಅಧ್ಯಕ್ಷರಾಗಿ ರಾಹುಲ್ ಹೆಸರು ಘೋಷಣೆಯಾಗಲಿದೆ.

'ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದ್ಕೊಂಡ್ರಾ' ಎನ್ನುವ ಕ್ಷೀಣಿಸಿದ ಕೂಗಿನ ನಡುವೆಯೂ, ಪಕ್ಷದ ಹಿರಿಯ ಮುಖಂಡರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರಾಹುಲ್ ಗಾಂಧಿ, ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾಗಿದೆ.

ರಾಹುಲ್‌ಗೆ ಪ್ರಣಬ್ ತಿಲಕ, ಸಿದ್ದರಾಮಯ್ಯ ಅಪ್ಪುಗೆಯ ಪುಳಕ!ರಾಹುಲ್‌ಗೆ ಪ್ರಣಬ್ ತಿಲಕ, ಸಿದ್ದರಾಮಯ್ಯ ಅಪ್ಪುಗೆಯ ಪುಳಕ!

ಏನೋ ಮಾಡಲು ಹೋಗಿ,ಇನ್ನೇನೋ ಮಾಡಿ, ಅದರಿಂದ ಎದುರಾಗುವ ಟೀಕೆ, ಟಿಪ್ಪಣಿ, ಅಪಹಾಸ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ರಾಜಕೀಯವಾಗಿ ಉತ್ತಮವಾಗಿ ನೆಲೆಕಾಣುತ್ತಿರುವ ರಾಹುಲ್, 'ಪಪ್ಪು' ಎನ್ನುವ ಹೆಸರಿನಿಂದ ದಿನದಿಂದ ದಿನಕ್ಕೆ ದೂರವಾಗುತ್ತಿರುವುದು ಕಾಂಗ್ರೆಸ್ ಪಾಲಿಗೆ ಒಳ್ಳೆಯ ಸುದ್ದಿ.

ಸಾಮಾಜಿಕ ಜಾಲತಾಣದ ಮೂಲಕ ದಿನದಿಂದ ದಿನಕ್ಕೆ ಜನಪ್ರಿಯತೆ ಗೊಳ್ಳುತ್ತಿರುವ ರಾಹುಲ್ ಗಾಂಧಿ, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕಿದ್ದ ಈ ಹಿಂದಿನ ಚರಿಸ್ಮಾವನ್ನು ಮತ್ತೆ ತರುವ ಕೆಲಸಕ್ಕೆ ತುರ್ತಾಗಿ ಮುಂದಾಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಮೋದಿ ಕಾಲೆಳೆಯೋ ರಭಸದಲ್ಲಿ 'ಲೆಕ್ಕ' ತಪ್ಪಿದ ರಾಹುಲ್ ಗಾಂಧಿ!ಮೋದಿ ಕಾಲೆಳೆಯೋ ರಭಸದಲ್ಲಿ 'ಲೆಕ್ಕ' ತಪ್ಪಿದ ರಾಹುಲ್ ಗಾಂಧಿ!

ಅಧ್ಯಕ್ಷ ಹುದ್ದೆಗೇರಿದ ನಂತರ ಮುಂದಿನ ಹತ್ತು ತಿಂಗಳು ರಾಹುಲ್ ಗಾಂಧಿಗೆ ನಿರ್ಣಾಯಕವಾಗಲಿದೆ. ತನ್ನ ಮುಂದಿರುವ ಎಂಟು ಗುರುತರ ಸವಾಲುಗಳನ್ನು ರಾಹುಲ್ ಎದುರಿಸಲು ಶಕ್ತರಾಗಿದ್ದಾರಾ? ಎಂಟು ಸವಾಲುಗಳು, ಮುಂದೆ ಓದಿ..

ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಪ್ರಮುಖ ಜವಾಬ್ದಾರಿ

ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಪ್ರಮುಖ ಜವಾಬ್ದಾರಿ

2014ರ ಲೋಕಸಭಾ ಚುನಾವಣೆಯ ನಂತರ ಪಂಜಾಬ್ ಹೊರತು ಪಡಿಸಿ ಮಿಕ್ಕೆಲ್ಲಾ ಕಡೆ ಕಾಂಗ್ರೆಸ್ ಸೋಲು ಅನುಭವಿಸುತ್ತಾ ಬರುತ್ತಿದೆ. ಕಾಂಗ್ರೆಸ್ ಸದ್ಯ ಆರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಕಾಂಗ್ರೆಸ್ಸಿನ ಮುಖಂಡರನ್ನು ಹುರಿದುಂಬಿಸುವ ಮತ್ತು ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಪ್ರಮುಖ ಜವಾಬ್ದಾರಿ ರಾಹುಲ್ ಗಾಂಧಿ ಮೇಲಿದೆ. (ಚಿತ್ರ: ಪಿಟಿಐ)

ಹೊಸ ದೃಷ್ಟಿಕೋನದಿಂದ ಪಕ್ಷವನ್ನು ಮುನ್ನಡೆಸುವ ಕೆಲಸ

ಹೊಸ ದೃಷ್ಟಿಕೋನದಿಂದ ಪಕ್ಷವನ್ನು ಮುನ್ನಡೆಸುವ ಕೆಲಸ

ಹೊಸ ದೃಷ್ಟಿಕೋನದಿಂದ ಪಕ್ಷವನ್ನು ಮುನ್ನಡೆಸುವ ಕೆಲಸ ರಾಹುಲ್ ಗಾಂಧಿಯವರಿಂದ ಆಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್, ಗುಜರಾತ್ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣಗಳನ್ನು ದೇಶದೆಲ್ಲಡೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತು. ಭವಿಷ್ಯದಲ್ಲೂ ಇದನ್ನು ಮುಂದುವರಿಸಿಕೊಂಡು ಹೋಗುವಂತಹ ತಂಡವನ್ನು ರಾಹುಲ್ ಕಟ್ಟಬೇಕಾಗಿದೆ.

ಮಹಾತ್ಮಾ ಗಾಂಧಿ ಅಲಂಕರಿಸಿದ ಸ್ಥಾನಕ್ಕೆ ರಾಹುಲ್ ಗಾಂಧಿಮಹಾತ್ಮಾ ಗಾಂಧಿ ಅಲಂಕರಿಸಿದ ಸ್ಥಾನಕ್ಕೆ ರಾಹುಲ್ ಗಾಂಧಿ

'ಮೋದಿ ಅಲೆ'ಯ ವಿರುದ್ದ ಸಟೆದು ನಿಲ್ಲುವ ಶಕ್ತಿಯ

'ಮೋದಿ ಅಲೆ'ಯ ವಿರುದ್ದ ಸಟೆದು ನಿಲ್ಲುವ ಶಕ್ತಿಯ

ರಾಹುಲ್ ಗಾಂಧಿ ತುರ್ತಾಗಿ ಗಮನಿಸಬೇಕಾಗಿರುವುದು ದೇಶದೆಲ್ಲಡೆ ಇರುವ ಮೋದಿ ಹವಾ. ಮೂರು ವರ್ಷದ ಹಿಂದೆ ಮತ್ತು ಇಂದಿನ ಪರಿಸ್ಥಿತಿಗೆ ಹೋಲಿಸಿದರೆ, ಮೋದಿ ವರ್ಚಸ್ಸಿನಲ್ಲಿ ಸ್ವಲ್ಪಮಟ್ಟಿನ ಇಳಿಕೆಯಾಗಿದ್ದರೂ, ಈಗಲೂ ಅವರೇ ಜನಪ್ರಿಯ ನಾಯಕರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ 'ಮೋದಿ ಅಲೆ'ಯ ವಿರುದ್ದ ಸಟೆದು ನಿಲ್ಲುವ ಶಕ್ತಿಯನ್ನು ಹೊಂದಬೇಕಾಗಿದೆ.

ಹಿರಿಯ, ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು

ಹಿರಿಯ, ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು

ರಾಹುಲ್ ಗಾಂಧಿಗಿರುವ ಇನ್ನೊಂದು ಪ್ರಮುಖ ಸವಾಲೆಂದರೆ ಪಕ್ಷದಲ್ಲಿರುವ ಹಿರಿಯ ಮತ್ತು ಕಿರಿಯ ಮುಖಂಡರು. ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಹುಲ್ ಮುನ್ನಡೆಯಬೇಕಾಗಿದೆ. ಕೆಲವೊಂದು ಮಾಹಿತಿಯ ಪ್ರಕಾರ, ರಾಹುಲ್ ಹಿರಿಯ ಮುಖಂಡರಿಗೆ ಇನ್ಮುಂದೆ ಮಣೆಹಾಕುವುದಿಲ್ಲ ಎನ್ನುವ ಸುದ್ದಿಯಿಂದಾಗಿ, ಪಕ್ಷದ ಚಟುವಟಿಕೆಗಳಲ್ಲಿ ಹಿರಿಯರು ಹೆಚ್ಚಾಗಿ ತಲೆಹಾಕದೇ ಇರುವ ಸಾಧ್ಯತೆಯಿದೆ. ಇದನ್ನು ರಾಹುಲ್ ಸಂಭಾಳಿಸಬೇಕಾಗಿದೆ.

ನೆಹರೂ ಮತ್ತು ಗಾಂಧಿ ನೆರಳಿನಿಂದ ಹೊರಬರಬೇಕಿದೆ

ನೆಹರೂ ಮತ್ತು ಗಾಂಧಿ ನೆರಳಿನಿಂದ ಹೊರಬರಬೇಕಿದೆ

ನೆಹರೂ ಮತ್ತು ಗಾಂಧಿ ನೆರಳಿನಿಂದ ಹೊರಬಂದು, ತನ್ನ ವರ್ಚಸ್ಸನ್ನು ವೃದ್ದಿಗೊಳಿಸಿ ಪಕ್ಷಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಲು ರಾಹುಲ್ ಶಕ್ತರೇ? ಯುವ ಮತದಾರರನ್ನು ತನ್ನತ್ತ ಸೆಳೆಯಲು ರಾಹುಲ್ ಗಾಂಧಿ ಈ ಕೆಲಸಕ್ಕೆ ಮುಂದಾಗಬೇಕಾಗಿದೆ. ಮತದಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವುದರಲ್ಲಿ ಮೋದಿ ನಿಸ್ಸೀಮರು.

ವಿರೋಧ ಪಕ್ಷವನ್ನು ಒಗ್ಗಟ್ಟಾಗಿಸುವ ಕೆಲಸ

ವಿರೋಧ ಪಕ್ಷವನ್ನು ಒಗ್ಗಟ್ಟಾಗಿಸುವ ಕೆಲಸ

ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಎನ್ಡಿಎ ಮೈತ್ರಿಕೂಟದ ವಿರುದ್ದ ಸ್ಟ್ರಾಂಗ್ ವಿರೋಧ ಪಕ್ಷಗಳೇ ಇಲ್ಲದಂತಾಗಿದೆ. ಯುಪಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವೇಳೆಯಲ್ಲಿದ್ದ ಒಗ್ಗಟ್ಟು, ಆನಂತರ ಇಲ್ಲದಾಗಿದೆ. ಇದಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಯೇ ಸಾಕ್ಷಿ. ಮೋದಿ ಸರಕಾರದ ವಿರುದ್ದ ತಿರುಗಿಬೀಳಲು ವಿರೋಧ ಪಕ್ಷವನ್ನು ಒಗ್ಗಟ್ಟಾಗಿಸುವ ಕೆಲಸವೂ ರಾಹುಲ್ ಗಾಂಧಿಗೆ ಅತ್ಯಂತ ಪ್ರಮುಖವಾದದ್ದು. (ಚಿತ್ರ: :ಪಿಟಿಐ)

ನಾಯಕತ್ವದ ವಿರುದ್ದ ಧ್ವನಿಗಳು ಹೊರಬಂದರೆ ಸಂಭಾಳಿಸುವುದು

ನಾಯಕತ್ವದ ವಿರುದ್ದ ಧ್ವನಿಗಳು ಹೊರಬಂದರೆ ಸಂಭಾಳಿಸುವುದು

'ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದುಕೊಂಡ್ರಾ' ಎಂದು ಮಹಾರಾಷ್ಟ್ರದ ಪಕ್ಷದ ಮುಖಂಡರೊಬ್ಬರು ಬಹಿರಂಗವಾಗಿ ಪ್ರಶ್ನಿಸಿದ್ದರು. ಕಾಂಗ್ರೆಸ್ಸಿನ ಎಲ್ಲಾ ಮುಖಂಡರು ಅದಕ್ಕೆ ಅವರ ವಿರುದ್ದ ತಿರುಗಿಬಿದ್ದದ್ದೂ ಆಗಿದೆ, ಮುಂದಿನ ದಿನಗಳಲ್ಲಿ ಅಂತಹ ನೂರಾರು ಧ್ವನಿಗಳು ಹೊರಬಂದರೆ, ಅದನ್ನು ಎದುರಿಸುವ ಸಾಮರ್ಥ್ಯವನ್ನು ರಾಹುಲ್ ಹೊಂದಬೇಕಾಗಿದೆ..

ನಿರ್ಣಾಯಕ ಅಸೆಂಬ್ಲಿ ಚುನಾವಣೆಗಳು

ನಿರ್ಣಾಯಕ ಅಸೆಂಬ್ಲಿ ಚುನಾವಣೆಗಳು

ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸಲೇಬೇಕೆಂದು ಹಠ ಹಿಡಿದಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಪಾಲಿಗೆ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಮುಗಿಯುತ್ತಿದ್ದಂತೇ ಇನ್ನಷ್ಟು ರಾಜ್ಯಗಳ ಚುನಾವಣೆ ಎದುರಾಗಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದ ಅಸೆಂಬ್ಲಿ ಚುನಾವಣೆಯಲ್ಲೂ ರಾಹುಲ್ ಪಕ್ಷವನ್ನು ದಡಸೇರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. (ಚಿತ್ರ: :ಪಿಟಿಐ)

English summary
Rahul Gandhi is all set to take over the reins of the 130-year-old Indian National Congress (AICC). As the Congress president, Rahul Gandhi will have eight big challenges to overcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X