ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್‌ ಬಗ್ಗೆ ಮಾತನಾಡಿದ ಜೇಟ್ಲಿಗೆ ಟ್ವೀಟ್ ಟಾಂಗ್ ಕೊಟ್ಟ ರಾಹುಲ್

|
Google Oneindia Kannada News

ನವದೆಹಲಿ, ಆಗಸ್ಟ್‌ 29: ರಫೇಲ್ ಹಗರಣದಲ್ಲಿ ಕೇಂದ್ರವನ್ನು ಸಿಕ್ಕಿಹಾಕಿಸಿಯೇ ಸಿದ್ದ ಎಂದು ರಾಹುಲ್ ಗಾಂಧಿ ಶಪತ ಮಾಡಿದಂತಿದೆ. ಅವರು ಭಾರತದಲ್ಲಿದ್ದರೂ, ವಿದೇಶದಲ್ಲಿದ್ದರೂ ರಫೇಲ್ ಡೀಲ್‌ನದ್ದೇ ಜಪ ಮಾಡುತ್ತಿದ್ದಾರೆ.

ಇಂದು ಟ್ವೀಟ್ ಮೂಲಕ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ರಫೇಲ್ ಡೀಲ್ ವಿಚಾರದ ಬಗ್ಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.

Rahul Gandhi tweet to Arun Jaitley about Rafale deal

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಅರುಣ್ ಜೇಟ್ಲಿ, ರಫೇಲ್‌ ಡೀಲ್‌ನಲ್ಲಿ ಹಗರಣ ಆಗಿಲ್ಲ, ಯುಪಿಎ ಸರ್ಕಾರಕ್ಕಿಂತಲೂ ಕಡಿಮೆ ಮೊತ್ತಕ್ಕೆ ರಫೇಲ್ ವಿಮಾನಗಳನ್ನು ಖರೀದಿಸುತ್ತೇವೆ ಎಂದಿದ್ದರು. ಆದರೆ ಇದಕ್ಕೆ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಕಾಲೆಳೆದಿದ್ದಾರೆ.

'ಯುಪಿಎಗಿಂತ ಶೇಕಡಾ 20ರಷ್ಟು ಕಡಿಮೆ ಬೆಲೆಗೆ ವಿಮಾನ ಖರೀದಿಸ್ತಿದ್ದೇವೆ''ಯುಪಿಎಗಿಂತ ಶೇಕಡಾ 20ರಷ್ಟು ಕಡಿಮೆ ಬೆಲೆಗೆ ವಿಮಾನ ಖರೀದಿಸ್ತಿದ್ದೇವೆ'

ರಫೇಲ್ ಡೀಲ್ ಅನ್ನು 'ರಫೇಲ್ ರಾಬರಿ' ಎಂದು ಕರೆದಿರುವ ಅವರು, 'ರಫೇಲ್ ಹಗರಣ ವಿವಾದ ಇತ್ಯರ್ಥ ಪಡಿಸಲು ಜಂಟಿ ಸಂಸದೀಯ ಸಮಿತಿ ಒಂದನ್ನು ಏಕೆ ಮಾಡಬಾರದು' ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸಲಹೆ ನೀಡಿದ್ದಾರೆ.

ಹರಕೆ ತೀರಿಸಲು ಮಾನಸ ಸರೋವರ ಯಾತ್ರೆ ಹೊರಟ 'ಶಿವಭಕ್ತ' ರಾಹುಲ್ ಗಾಂಧಿಹರಕೆ ತೀರಿಸಲು ಮಾನಸ ಸರೋವರ ಯಾತ್ರೆ ಹೊರಟ 'ಶಿವಭಕ್ತ' ರಾಹುಲ್ ಗಾಂಧಿ

ಮುಂದುವರೆದು, ಸಂಸದೀಯ ಸಮಿತಿ ಮಾಡಲು ಸಮಸ್ಯೆ ಏನೆಂದರೆ, ನಿಮ್ಮ ಪರಮೋಚ್ಛ ನಾಯಕ ಅವರ ಗೆಳೆಯನ ಸಹಾಯಕ್ಕೆ ನಿಂತಿದ್ದಾರೆ ಎಂದು ಪರೋಕ್ಷವಾಗಿ ಮೋದಿ ಅವರು ಅನಿಲ್ ಅಂಬಾನಿಯ ಬೆಂಬಲಕ್ಕೆ ನಿಂತಿದ್ದಾರೆ ಎಂದಿದ್ದಾರೆ.

ನವಭಾರತಕ್ಕೆ ಸ್ವಾಗತ... ರಾಹುಲ್ ಗಾಂಧಿ ವ್ಯಂಗ್ಯಭರಿತ ಟ್ವೀಟ್!ನವಭಾರತಕ್ಕೆ ಸ್ವಾಗತ... ರಾಹುಲ್ ಗಾಂಧಿ ವ್ಯಂಗ್ಯಭರಿತ ಟ್ವೀಟ್!

ಟ್ವೀಟ್‌ನ ಕೊನೆಯಲ್ಲಿ ಜೇಟ್ಲಿ ಅವರನ್ನು ಮೆದುವಾಗಿ ಛೇಡಿಸಿರುವ ರಾಹುಲ್ ಗಾಂಧಿ, ಈ ಬಗ್ಗೆ ವಿಚಾರಿಸಿಕೊಂಡು ವಾಪಾಸ್ ಬಂದು ಪ್ರತಿಕ್ರಿಯೆ ನೀಡಿ, ನಾವು ಕಾಯುತ್ತಿರುತ್ತೇವೆ' ಎಂದಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ಬೇರೆ ಮಂತ್ರಿಗಳೆಲ್ಲಾ ನಾಮಕಾವಸ್ತೆ ಎಂದು ಕಾಲೆಳೆದಿದ್ದಾರೆ.

ರಾಹುಲ್ ಅವರು ಈ ಟ್ವೀಟ್ ಮಾಡಿದ ಎರಡು ಗಂಟೆಯಲ್ಲಿಯೇ ಟ್ವೀಟ್ ಅನ್ನು 7.3 ಸಾವಿರ ಜನ ಲೈಕ್ ಮಾಡಿದ್ದಾರೆ. 2.8 ಸಾವಿರ ಬಾರಿ ರೀಟ್ವೀಟ್ ಆಗಿದ್ದರೆ. ಸಾವಿರಕ್ಕೂ ಮಿಕ್ಕು ಕಮೆಂಟ್‌ಗಳು ಬಂದಿವೆ.

English summary
AICC president Rahul Gandhi today tweeted to Finance minister Arun Jaitley about rafale deal. Rahul suggest Arun Jaitley to form a joint Parliamentary Committee to sort rafale deal issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X