ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಬಿಹಾರದಲ್ಲಿ ಮೋದಿ ಸೂಟ್-ಬೂಟ್ ಬಗ್ಗೆ ರಾಹುಲ್ ಮಾತು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಪಾಟ್ನಾ, ಸೆ. 19 : ಬಿಹಾರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಪ್ರಚಾರ ಆರಂಭಿಸಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಸೂಟ್-ಬೂಟ್ ಹಾಕಿದವರನ್ನು ಮಾತ್ರ ಭೇಟಿಯಾಗುತ್ತಾರೆ' ಎಂದು ರಾಹುಲ್ ಟೀಕಾ ಪ್ರಹಾರ ನಡೆಸಿದರು.

    ಶನಿವಾರ ಪಶ್ಚಿಮ ಚಂಪಾರಣ್ಯದ ರಾಮ್ ನಗರ್ ಟೌನ್‌ನ ಹಜಾರಿ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ಬಿಹಾರ ಜನರು ನಮಗೆ ಬೆಂಬಲ ನೀಡಿದರೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತೇವೆ' ಎಂದು ರಾಹುಲ್ ಭರವಸೆ ನೀಡಿದರು. [ಬಿಹಾರ ಸಮೀಕ್ಷೆ: ಭರ್ಜರಿ ಜಯದತ್ತ ಬಿಜೆಪಿ ಮೈತ್ರಿಕೂಟ]

    243 ಸದಸ್ಯ ಬಲದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್‌ ಮೈತ್ರಿಕೂಟ ರಚಿಸಿಕೊಂಡಿವೆ. ಆದರೆ, ಇಂದಿನ ರಾಹುಲ್ ಗಾಂಧಿ ಸಮಾವೇಶದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪಾಲ್ಗೊಂಡಿರಲಿಲ್ಲ.

    rahul gandhi

    ರಾಹುಲ್ ಭಾಷಣದ ಮುಖ್ಯಾಂಶಗಳು [ಬಿಹಾರ ಚುನಾವಣೆ ವೇಳಾಪಟ್ಟಿ]

    * 'ಒಬ್ಬ ಮನುಷ್ಯ ತೊಟ್ಟಿರುವ ಬಟ್ಟೆ ಅವನ ಬಗ್ಗೆ ಹಲವು ವಿಚಾರಗಳನ್ನು ಹೇಳುತ್ತದೆ. ನಾನು ಸಂಸತ್ತಿನಲ್ಲಿಯೇ ಸೂಟ್-ಬೂಟ್ ಸರ್ಕಾರದ ಬಗ್ಗೆ ಹೇಳಿದ್ದೆ. ಇಂದು ನಾನು ಮೋದಿ ಅವರ ಬಗ್ಗೆ ಮಾತನಾಡುತ್ತೇನೆ'.

    * 'ಜನರು ಹೇಳುತ್ತಾರೆ ಪ್ರಧಾನಿ ಚಹಾ ಮಾರುತ್ತಿದ್ದರು ಎಂದು. ಇಂದು ಬರೀ ಸೂಟು-ಬೂಟು ತೊಟ್ಟವರ ಮಧ್ಯೆಯೇ ಮೋದಿ ಇರುತ್ತಾರೆ. 15 ಲಕ್ಷ ರೂ. ಬೆಲೆಬಾಳುವ ಸೂಟ್ ಧರಿಸುತ್ತಾರೆ'. [ಬಿಹಾರದಲ್ಲಿಯೂ ಅಭಿವೃದ್ಧಿ ಮಂತ್ರ ಪಠಿಸಲಿದೆ ಬಿಜೆಪಿ]

    * 'ಮೋದಿ ಜೀ ಇಂದು ಕೇವಲ ಸೂಟ್-ಬೂಟ್ ಹಾಕಿದವರನ್ನು ಮಾತ್ರ ಭೇಟಿಯಾಗುತ್ತಾರೆ. ಅವರು ಹೇಳುತ್ತಾರೆ ಸೂಟ್ ಬೂಟ್ ಹಾಕಿದ ಅವರ ದೋಸ್ತ್‌ಗಳು ನಮ್ಮ ದೇಶವನ್ನು ಬದಲಾವಣೆ ಮಾಡುತ್ತಾರೆ ಎಂದು'.

    * 'ಚಂಪಾರಣ್ಯಕ್ಕೆ ಬಂದಿದ್ದ ಮೋದಿ ಅವರು ಸಕ್ಕರೆ ಕಾರ್ಖನೆಯನ್ನು ಪುನಃ ಆರಂಭಿಸುವುದಾಗಿ ಹೇಳಿದ್ದರು. ಈಗ ಸಕ್ಕರೆ ಕಾರ್ಖನೆ ಪುನಃ ಆರಂಭವಾಗಿದೆಯೇ?'

    * 'ಸುಷ್ಮಾ ಸ್ವರಾಜ್ ಅವರು ಐಪಿಲ್ ಹಗರಣದ ಸೂತ್ರಧಾರ ಲಲಿತ್ ಮೋದಿ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ, ಮೋದಿ ಹೇಳುತ್ತಾರೆ ನಾ ಕಾವುಂಗಾ, ನಾ ಕಾನೇ ದುಂಗಾ'.

    * 'ನಾವು ಬಿಹಾರವನ್ನು ಮೋದಿ ಮತ್ತು ಅವರ ಸೂಟ್-ಬೂಟ್ ಧಾರಿ ದೋಸ್ತ್‌ಗಳಿಂದ ರಕ್ಷಣೆ ಮಾಡಬೇಕು. ಬಿಹಾರದಲ್ಲಿ ನಮಗೆ ಬೆಂಬಲ ನೀಡಿದರೆ ಉದ್ಯೋಗ ಸೃಷ್ಟಿ ಮಾಡುತ್ತೇವೆ.'

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Congress vice president Rahul Gandhi kick starts his poll campaign in Bihar with a rally in West Champaran on Saturday, September 19, 2015.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more