ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತಿದ್ದು 47 ಲಕ್ಷ ಮಂದಿ: ಡಬ್ಲ್ಯೂಎಚ್‌ಒ ವರದಿ ಹಿಡಿದು ಸರಕಾರಕ್ಕೆ ರಾಹುಲ್ ತರಾಟೆ

|
Google Oneindia Kannada News

ನವದೆಹಲಿ, ಮೇ 6: ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನ ಕಾರಣದಿಂದ 47 ಲಕ್ಷ ಜನರು ಸಾವನ್ನಪ್ಪಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯನ್ನ ಇಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಎಲ್ಲಾ ಮೃತ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಕೊಡಬೇಕೆಂದೂ ಅವರು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

ಡಬ್ಲ್ಯೂಎಚ್‌ಒ ವರದಿಯನ್ನ ಉಲ್ಲೇಖಿಸಿರುವ ರಾಹುಲ್ ಗಾಂಧಿ, "ವಿಜ್ಞಾನ ಸುಳ್ಳು ಹೇಳಲ್ಲ, ಪ್ರಧಾನಿ ಮೋದಿ ಸುಳ್ಳು ಹೇಳುತ್ತಾರೆ" ಎಂದು ವ್ಯಂಗ್ಯ ಮಾಡಿದ್ದಾರೆ. "ಸರಕಾರ ಹೇಳಿಕೊಂಡಿರುವಂತೆ ಕೋವಿಡ್ ಸಾಂಕ್ರಾಮಿಕದಿಂದ ಸತ್ತಿರುವುದು 4.8 ಲಕ್ಷ ಮಂದಿ ಅಲ್ಲ, 47 ಲಕ್ಷ ಭಾರತೀಯರು ಸತ್ತಿದ್ದಾರೆ. ವಿಜ್ಞಾನ ಸುಳ್ಳು ಹೇಳಲ್ಲ, ಮೋದಿ ಹೇಳುತ್ತಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಗೌರವ ಕೊಡಿ. ಅವರಿಗೆ 4 ಲಕ್ಷ ರೂ ಪರಿಹಾರ ಕೊಟ್ಟು ನೆರವು ನೀಡಿ" ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಆಗ್ರಹಿಸಿದ್ಧಾರೆ.

ಮೇ 05 ಅಂಕಿ-ಅಂಶ: ವಿಶ್ವದ ಯಾವ ದೇಶದಲ್ಲಿ ಎಷ್ಟು ಕೊವಿಡ್ ಸೋಂಕಿತರು ಗುಣಮುಖಮೇ 05 ಅಂಕಿ-ಅಂಶ: ವಿಶ್ವದ ಯಾವ ದೇಶದಲ್ಲಿ ಎಷ್ಟು ಕೊವಿಡ್ ಸೋಂಕಿತರು ಗುಣಮುಖ

 ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿಯಲ್ಲಿ ಏನಿದೆ?:

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿಯಲ್ಲಿ ಏನಿದೆ?:

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನ ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ ವಿಶ್ವದಲ್ಲೇ ಗರಿಷ್ಠ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿನ್ನೆ ಬಿಡುಗಡೆ ಮಾಡಿದ ವರದಿಯೊಂದು ಹೇಳುತ್ತಿದೆ. ಕೋವಿಡ್‌ನಿಂದ ಸತ್ತವರು ಎಷ್ಟು ಎಂದು ಸರಕಾರ ಅಧಿಕೃತವಾಗಿ ನೀಡಿರುವ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು ಸಾವುಗಳಾಗಿವೆ ಎಂಬುದು ಈ ವರದಿ ಸೂಚಿಸುತ್ತಿದೆ. ಇದರ ಪ್ರಕಾರ 2020ರಿಂದ ಕೋವಿಡ್ ಕಾರಣಕ್ಕೆ ಭಾರತದಲ್ಲಿ 47,29,548 ಮಂದಿ ಸತ್ತಿದ್ದಾರೆ. ಇದರಲ್ಲಿ ಸೋಂಕಿನಿಂದಲೇ ಸತ್ತವರು ಮತ್ತು ರೋಗದ ಪರೋಕ್ಷ ಕಾರಣದಿಂದ ಸತ್ತವರು ಈ ಪಟ್ಟಿಯಲ್ಲಿದ್ದಾರೆ. ಇಡೀ ವಿಶ್ವದಲ್ಲಿ ಕೋವಿಡ್‌ನಿಂದ ಸತ್ತವರಲ್ಲಿ ಭಾರತೀಯರೇ ಮೂರನೇ ಒಂದು ಭಾಗ ಇದ್ದಾರೆ.

 ಜಾಗತಿಕ ಅಧಿಕೃತ ಲೆಕ್ಕದಲ್ಲೂ ತಪ್ಪು:

ಜಾಗತಿಕ ಅಧಿಕೃತ ಲೆಕ್ಕದಲ್ಲೂ ತಪ್ಪು:

ಭಾರತದಲ್ಲಿ ಕೋವಿಡ್ ಮೊದಲ ಅಲೆ ಆರ್ಭಟಿಸಿದ್ದ 2020ರ ವರ್ಷವೊಂದರಲ್ಲೇ 8.3 ಲಕ್ಷ ಜನರು ಸತ್ತಿರಬಹುದು ಎಂದು ಡಬ್ಲ್ಯೂಎಚ್‌ಒ ಅಂದಾಜು ಮಾಡಿದೆ. ಇನ್ನು, ವಿಶ್ವಾದ್ಯಂತ ವಿವಿಧ ದೇಶಗಳು ಕೊಟ್ಟಿರುವ ಲೆಕ್ಕಕ್ಕಿಂತಲೂ ಹೆಚ್ಚು ಮಂದಿ ಕೋವಿಡ್‌ನಿಂದ ಸತ್ತಿದ್ದಾರೆಂದು ಈ ವರದಿ ಹೇಳುತ್ತಿದೆ. ವಿಶ್ವಾದ್ಯಂತ ಒಟ್ಟು 54 ಲಕ್ಷ ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಎಲ್ಲಾ ದೇಶಗಳ ಅಧಿಕೃತ ಮಾಹಿತಿ ಹೇಳುತ್ತದೆ. ಡಬ್ಲ್ಯೂಎಚ್‌ಒ ಮಾಡಿರುವ ಅಂದಾಜು ಪ್ರಕಾರ ವಿಶ್ವಾದ್ಯಂತ ಸತ್ತಿರುವುದು 54 ಲಕ್ಷ ಮಂದಿ ಮಾತ್ರವಲ್ಲ ಒಂದೂವರೆ ಲಕ್ಷ ಜನರು ಸತ್ತಿದ್ದಾರೆನ್ನಲಾಗಿದೆ.

ಕೊರೊನಾಗೆ 47 ಲಕ್ಷ ಭಾರತೀಯರ ಸಾವು: WHO ವಾದ ತಿರಸ್ಕರಿಸಿದ ಭಾರತಕೊರೊನಾಗೆ 47 ಲಕ್ಷ ಭಾರತೀಯರ ಸಾವು: WHO ವಾದ ತಿರಸ್ಕರಿಸಿದ ಭಾರತ

 ಚೀನಾದಲ್ಲಿ ಕಡಿಮೆ ಸಾವು:

ಚೀನಾದಲ್ಲಿ ಕಡಿಮೆ ಸಾವು:

ಇದು ಪ್ರತೀ ದೇಶದಲ್ಲಿ ಸರಾಸರಿಯಾಗಿ ಆಗುತ್ತಿರುವ ಸಾವಿನ ಸಂಖ್ಯೆಗೂ 2020 ಮತ್ತು 2021ರಲ್ಲಿ ಆದ ಸಾವಿನ ಸಂಖ್ಯೆಗೂ ತಾಳೆ ಹಾಕಿ ಡಬ್ಲ್ಯೂಎಚ್‌ಒ ಈ ಅಂದಾಜು ಮಾಡಿದೆ. ಆದ ಕಾರಣ, ಇದು ಹೆಚ್ಚುವರಿ ಸಾವಿನ ಲೆಕ್ಕವಾಗಿದೆ. ಕುತೂಹಲವೆಂದರೆ ಚೀನಾ, ಶ್ರೀಲಂಕಾ ಮೊದಲಾದ ದೇಶಗಳಲ್ಲಿ ಕಳೆದ ಎರಡು ವರ್ಷದಲ್ಲಿ ಆದ ಸಾವಿನ ಸಂಖ್ಯೆ ಅದರ ಹಿಂದಿನ ವರ್ಷಗಳ ಸರಾಸರಿ ಸಂಖ್ಯೆಗಿಂತಲೂ ಬಹಳ ಕಡಿಮೆ ಇದೆ. ಅಂದರೆ ಚೀನಾದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ ನಗಣ್ಯ ಎಂಬುದು ಆರೋಗ್ಯ ಸಂಸ್ಥೆಯ ಮಾಹಿತಿಯಿಂದ ತಿಳಿದುಬರುವ ವಿಚಾರ.

 ಡಬ್ಲ್ಯೂಎಚ್‌ಒ ಪಟ್ಟಿ ಪ್ರಕಾರ ಕೋವಿಡ್‌ನಿಂದ ಅತಿಹೆಚ್ಚು ಸಾವು ಕಂಡ ದೇಶಗಳು:

ಡಬ್ಲ್ಯೂಎಚ್‌ಒ ಪಟ್ಟಿ ಪ್ರಕಾರ ಕೋವಿಡ್‌ನಿಂದ ಅತಿಹೆಚ್ಚು ಸಾವು ಕಂಡ ದೇಶಗಳು:

1) ಭಾರತ: 47.29 ಲಕ್ಷ
2) ರಷ್ಯಾ: 10.72 ಲಕ್ಷ
3) ಇಂಡೋನೇಷ್ಯಾ: 10.29 ಲಕ್ಷ
4) ಅಮೆರಿಕ: 9.33 ಲಕ್ಷ
5) ಬ್ರಜಿಲ್: 6.81 ಲಕ್ಷ
6) ಮೆಕ್ಸಿಕೋ: 6.25 ಲಕ್ಷ
7) ಪೆರು: 2.89 ಲಕ್ಷ
8) ಟರ್ಕಿ: 2.64 ಲಕ್ಷ
9) ಈಜಿಪ್ಟ್: 2.51 ಲಕ್ಷ
10) ಸೌತ್ ಆಫ್ರಿಕಾ: 2.39 ಲಕ್ಷ

 ಡಬ್ಲ್ಯೂಎಚ್‌ಒ ಸಮೀಕ್ಷೆ ವಿಧಾನ ಹೇಗೆ?:

ಡಬ್ಲ್ಯೂಎಚ್‌ಒ ಸಮೀಕ್ಷೆ ವಿಧಾನ ಹೇಗೆ?:

ಭಾರತದ 17 ರಾಜ್ಯಗಳಲ್ಲಿನ ಸಾವಿನ ಸಂಖ್ಯೆಯ ಮಾಹಿತಿಯನ್ನು ವಿವಿಧ ವೆಬ್‌ಸೈಟ್‌ಗಳಿಂದ ಆಯ್ದು, ಅದನ್ನು ಮ್ಯಾಥ್ಮೆಟಿಕ್ ಮಾಡೆಲ್ ಮೂಲಕ ಲೆಕ್ಕ ಹಾಕಿ ದೇಶದ ಒಟ್ಟಾರೆ ಸಾವಿನ ಸಂಖ್ಯೆ ಎಷ್ಟಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿರುವುದು ತಿಳಿದುಬಂದಿದೆ.

 ಭಾರತ ಆಕ್ಷೇಪ:

ಭಾರತ ಆಕ್ಷೇಪ:

ಹೆಚ್ಚುವರಿ ಸಾವುಗಳನ್ನ ಎಣಿಸಲು ಡಬ್ಲ್ಯೂಎಚ್‌ಒ ಅಳವಡಿಸಿರುವ ವಿಧಾನ ಮತ್ತು ಪ್ರಕ್ರಿಯೆ ಎರಡೂ ತಪ್ಪು ಎಂದು ಭಾರತ ಹೇಳುತ್ತಿದೆ. ಈ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸಿ ಈ ಮುನ್ನವೇ ಭಾರತ 10ಕ್ಕೂ ಹೆಚ್ಚು ಪತ್ರಗಳನ್ನ ಆರೋಗ್ಯ ಸಂಸ್ಥೆಗೆ ಕಳುಹಿಸಿತ್ತೆನ್ನಲಾಗಿದೆ.

ಕುತೂಹಲವೆಂದರೆ ಡಬ್ಲ್ಯೂಎಚ್‌ಒ ಸಮೀಕ್ಷೆ ಪ್ರಕಟವಾಗುವ ಎರಡು ದಿನದ ಹಿಂದಷ್ಟೇ ಕೇಂದ್ರ ಸರಕಾರ ನಾಗರಿಕ ನೊಂದಣಿ ವ್ಯವಸ್ಥೆ (CRS- Civil Registration System) ಡಾಟಾ ಪ್ರಕಟಿಸಿತ್ತು. ಅದರ ಪ್ರಕಾರ, ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ 4.6 ಲಕ್ಷ ಹೆಚ್ಚುವರಿ ಸಾವುಗಳಾಗಿವೆ. ಈ ವಿಚಾರವನ್ನು ಪ್ರಸ್ತಾಪಿಸಿರುವ ಕೇಂದ್ರದ ಅಧಿಕಾರಿಯೊಬ್ಬರು, ಭಾರತೀಯ ರಿಜಿಸ್ಟ್ರಾರ್ ಜನರಲ್‌ನಿಂದ (RGI- Registrar General of India) ಅಧಿಕೃತ ಸಿಆರ್‌ಎಸ್ ಮಾಹಿತಿ ಲಭ್ಯ ಇದ್ದರೂ ಡಬ್ಲ್ಯೂಎಚ್‌ಒದವರು ಮ್ಯಾಥಮೆಟಿಕ್ ಮಾಡೆಲ್ ಬಳಸಿ ಹೆಚ್ಚುವರಿ ಸಾವುಗಳ ಲೆಕ್ಕ ಹಾಕಿದ್ದು ಯಾಕೆಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Congress leader Rahul Gandhi today hit out at the government over a WHO report of 4.7 million "excess" Covid deaths, saying "science does not lie, Prime Minister Narendra Modi does".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X