ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸುಳ್ಳು ಚಿತ್ರಣ ಮರೆಮಾಚುವ ಪ್ರಯತ್ನವಿದು; ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜೂನ್ 16: ದೇಶದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್‌ ಕೊರೊನಾ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಿರುವ ಕೇಂದ್ರದ ನಿರ್ಧಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮೋದಿ ಸುಳ್ಳು ಚಿತ್ರಣವನ್ನು ಮರೆಮಾಚಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕರೆಯದಿದ್ದರೂ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಮೋದಿ: ಹರಿಪ್ರಸಾದ್ ವಾಗ್ದಾಳಿಕರೆಯದಿದ್ದರೂ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಮೋದಿ: ಹರಿಪ್ರಸಾದ್ ವಾಗ್ದಾಳಿ

ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ದೇಶದ ಜನರಿಗೆ ತುರ್ತಾಗಿ ಕೊರೊನಾ ಲಸಿಕೆ ನೀಡುವ ಅಗತ್ಯವಿದೆ. ಮೋದಿ ಕಾರ್ಯನಿರ್ವಹಣೆ ಲೋಪದಿಂದ ಉಂಟಾಗಿರುವ ಲಸಿಕೆ ಕೊರತೆಯನ್ನು ಮುಚ್ಚಿ ಹಾಕಲು ಬಿಜೆಪಿ ಹೇಳುತ್ತಿರುವ ಸುಳ್ಳು ಹಾಗೂ ಘೋಷಣೆಗಳು ಜನರಿಗೆ ಬೇಕಿಲ್ಲ. ಪ್ರಧಾನಿ ಮೋದಿ ಸುಳ್ಳು ಚಿತ್ರಣವನ್ನು ಮರೆ ಮಾಚುವ ಕೇಂದ್ರದ ಪ್ರಯತ್ನ ದೇಶದಲ್ಲಿ ಸೋಂಕಿನ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದು ಜನರ ಜೀವ, ಜೀವನವನ್ನೇ ಕಸಿಯುತ್ತಿದೆ," ಎಂದು ಆರೋಪಿಸಿದ್ದಾರೆ.

 Rahul Gandhi slams Centre Over Decision To Increase Gap Between Corona Vaccine Doses

ವಿಜ್ಞಾನಿಗಳ ಒಪ್ಪಿಗೆಯಿಲ್ಲದೇ ಸರ್ಕಾರ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸಿದೆ ಎನ್ನಲಾದ ವರದಿಯೊಂದನ್ನು ಟ್ವೀಟ್‌ನಲ್ಲಿ ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಕೋವಿಶೀಲ್ಡ್‌ ಎರಡು ಡೋಸ್ ಲಸಿಕೆಗಳ ನಡುವಿನ ಅಂತರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ, ವಿಜ್ಞಾನಿಗಳ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿತ್ತು. ಆದರೆ ತಾವು ಯಾವುದೇ ಸಲಹೆ ನೀಡಿಲ್ಲ ಎಂದು ವಿಜ್ಞಾನಿಗಳು ಹೇಳಿಕೆ ನೀಡಿದ್ದಾರೆ.

"ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸುವ ನಿರ್ಧಾರವನ್ನು ಪಾರದರ್ಶಕವಾಗಿ, ವೈಜ್ಞಾನಿಕ ದತ್ತಾಂಶಗಳ ಮೇಲೆ ತೆಗೆದುಕೊಳ್ಳಲಾಗಿದೆ," ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಂಗಳವಾರ ಹೇಳಿದ್ದರು. ದೇಶದಲ್ಲಿ ಲಸಿಕೆ ಕುರಿತು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

"ಎರಡು ಡೋಸ್ ಲಸಿಕೆ ನಡುವಿನ ಅಂತರವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿಯೇ ತೆಗೆದುಕೊಳ್ಳಲಾಗಿದೆ," ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್‌.ಕೆ. ಅರೋರಾ ಕೂಡ ಹೇಳಿದ್ದರು. ಈ ಮುನ್ನ ಕೋವಿಶೀಲ್ಡ್‌ ಲಸಿಕೆ ಎರಡು ಡೋಸ್‌ಗಳ ನಡುವಿನ ಅಂತರ 4-6 ವಾರಗಳಿತ್ತು. ಆನಂತರ ಈ ಅಂತರವನ್ನು 12-16 ವಾರಗಳಿಗೆ ಏರಿಸಲಾಗಿದೆ.

English summary
Congress leader Rahul Gandhi slams Central government over its decision to increase the gap between two Covishield doses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X